ಸರಕಾರಿ ಸ್ವತಂತ್ರ ಪಿಯು ಕಾಲೇಜಿನಲ್ಲಿ ಮತದಾರರ ಜಾಗೃತಿ ಆಂದೋಲನ

ಕಲಬುರಗಿ,ಅ.25 ನಗರದ ಸ್ಟೇಷನ್ ಬಜಾರ್ ನಲ್ಲಿರುವ ಸರಕಾರಿ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮತದಾರರ ಸಾಕ್ಷರತಾ ಸಂಘ ಹಾಗೂ ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಯುಕ್ತ ಆಶ್ರಯದಲ್ಲಿ ನನ್ನ ಮತ ಮಾರಾಟಕ್ಕಿಲ್ಲ -ಮತದಾರರ ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪ್ರಾಂಶುಪಾಲರಾದ ಸುಜಾತಾ ಬಿರಾದಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ದೇಶದಲ್ಲಿ- ರಾಜ್ಯಗಳಲ್ಲಿ ಇಂದು ರಾಜಕಾರಣದಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿದ್ದು ಇದಕ್ಕೆ ಕಾರಣ ಅಕ್ರಮವಾದ ರೀತಿಯಲ್ಲಿ ಚುನಾವಣೆಗಳು ನಡೆಯುತ್ತಿರುವುದೇ ಮೂಲ ಕಾರಣವಾಗಿದೆ.ದೇಶದಲ್ಲಿ ಚುನಾವಣೆಗಳು ಮುಕ್ತ ಹಾಗೂ ಪಾರದರ್ಶಕವಾಗಿ ನಡೆದರೆ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ. ಇವತ್ತು ದೇಶದಲ್ಲಿ ಸಾಕಷ್ಟು ಒಳ್ಳೆಯ ರಾಜಕಾರಣಿಗಳಿದ್ದರೂ ಚುನಾವಣೆಯಲ್ಲಿ ನಡೆಯುತ್ತಿರುವ ಹಣಬಲದ ಮುಂದೆ ಎಲ್ಲರೂ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಇವತ್ತು ಸಾಮಾಜಿಕ ವ್ಯವಸ್ಥೆ, ರಾಜಕೀಯ ವ್ಯವಸ್ಥೆ ಹಾಗೂ ಆಡಳಿತ ವ್ಯವಸ್ಥೆ ಶುದ್ಧೀಕರಣಗೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಎನ್.ಎಸ್ .ಎಸ್ ವಿಭಾಗಿಯ ಅಧಿಕಾರಿಗಳಾದ ಡಾ: ಚಂದ್ರಶೇಖರ ದೊಡ್ಡಮನಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಸ್ಥಾಪಕರಾದ ರಮೇಶ ಆರ್.ದುತ್ತರಗಿ ಮಾತನಾಡುತ್ತಾ ಇಂದಿನ ಯುವಜನಾಂಗ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಅಧ್ಯಯನ ಮಾಡಿದಾಗ ಮಾತ್ರ, ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಪಟ್ಟ ಕಷ್ಟಗಳನ್ನು ತಿಳಿದುಕೊಂಡಾಗ ಯುವಕರಲ್ಲಿ ದೇಶಾಭಿಮಾನ ಮೂಡಲಿಕ್ಕೆ ಸಾಧ್ಯ ಎಂದರು. ತಪ್ಪದೆ ಮತ ಚಲಾಯಿಸಬೇಕೆಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಲ್ಲಯ್ಯ ಮಠಪತಿ, ಬಲರಾಮ ಚೌಹಾಣ, ವಿಜಯಲಕ್ಷ್ಮಿ ಜೀವನ ರೆಡ್ಡಿ,ಶಶಿಧರ ಭೂಸನೂರ, ಶ್ರೀಶೈಲ್ ಕುರ್ದು, ಮಹಬೂಬ ನದಾಫ್, ಪಲ್ಲವಿ ಕುಲಕರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಚುನಾವಣಾ ಸಾಕ್ಷರತಾ ಸಂಘ ಹಾಗೂ ಕಾಲೇಜಿನ ಎನ್ ಎಸ್ ಎಸ್ ಜಿಲ್ಲಾ ನೋಡಲ್ ಅಧಿಕಾರಿ ಪಾಂಡು ಎಲ್. ರಾಥೋಡ್ ಕಾರ್ಯಕ್ರಮ ನಿರೂಪಿಸಿದರು.ಸಾಂಸ್ಕøತಿಕ ಕಾರ್ಯದರ್ಶಿಗಳಾದ ಶೀಲಾವತಿ ವಾಡೆಕರ ಸ್ವಾಗತಿಸಿದರು.ಕನ್ನಡ ಉಪನ್ಯಾಸಕ ಶಿವಶರಣಪ್ಪ ಹುಣಚಾಳ ವಂದನಾರ್ಪಣೆ ಮಾಡಿದರು.