
ಕಲಬುರಗಿ,ಸೆ.3- ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ಅತಿವೃಷ್ಟಿಯ ಹಾನಿ ಸಂಭಿವಿಸಿದ್ದು, ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ವೀರ ಕನ್ನಡಿಗರ ಸೇನೆ ಪ್ರತಿಭಟನೆಯ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಬಿತ್ತನೆ ಮಾಡಿದ ಬೆಳೆಗಳಾದ ಹೆಸರು, ಉದ್ದು, ಸಜ್ಜೆ, ತೊಗರಿ ಅತಿವೃಷ್ಟಿಯಿಂದ ಕೊಳೆತು ಹೋಗಿವೆ, ಸಾಲ ಸುಲಮಾಡಿ ಬಿತ್ತನ ಮಾಡಿರುವ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇವರÀ ನೆರವಿಗೆ ಸರ್ಕಾರಕ ಮುಂದಾಗಬೇಕು ಎಂದು ಸೇನೆಯ ಸಂಸ್ಥಾಪಕ ಅಧ್ಯಕ್ಷ ಅಮೃತ್ ಸಿ.ಪಾಟೀಲ ಸಿರನೂರ ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಹಾನಿಯಾದ ಬೆಳೆಗಳ ಸಮೀಕ್ಷೆ ಕೈಗೊಂಡು ಪ್ರತಿ ಎಕರೆ ಬೆಳೆ ಹಾನಿಗೆ 20 ಸಾವಿರ ಪರಿಹಾರ ಘೋಷಣೆ ಮಾಡುವುದು ಸೇರಿದಂತೆ ಪ್ರಮುಖ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಡಳಿತದ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸೇನೆಯ ಪ್ರಮುಖರಾದ ರವಿ ಒಂಟಿ, ವಿಠಲ ಕುಸಾಳೆ, ಉಮೇಶ ಸಿಂಗೆ, ಸೋಮಶೇಖರ ಗಡಿನಿಂಗದಳ್ಳಿ, ಗೋಪಾಲರಾವ, ಸಚಿನಕುಮಾರ, ಎಂಎಸ್ ಪಾಟೀಲ, ಹಣಮಂತ ಇಂಜಿಹಳ್ಳಿ, ಅಶೋಕ ಬೀರನಳ್ಳಿ, ವಿಠಲ ಇಂಜನಳ್ಳಿ, ಮಲ್ಲಿಕಾರ್ಜುನ ಮಠ, ಶಿವಾನಂದ ಜಿಕ್ಕಾಣಿ, ಪ್ರಶಾಂತ ಬಾಚನಳ್ಳಿ, ಅಣವೀರ ಬಿರಾದಾರ, ಸುಧೀರ ನವನಳ್ಳಿ, ಮಹಾಂತಗೌಡ ಹೂಗಾರ, ಮಂಜುನಾಥ ಲಕ್ಷ್ಮೀಕಾಂತ, ಸಿಮನರಾಜ, ಹಣಮತ ಭಜಂತ್ರಿ, ಉದಯಕಮುಆರ ಶ್ರವಣಕುಮಾರ, ಮಲ್ಲಿನಾಥ ಸೋಮಾ, ಭಾಗಮ್ಮ ಚೌಧರಿ. ಗೌಸಮಿಯಾ, ಆರೀಫ್, ರಜನಿಕಾಂತ, ಅಶೇಕ ಸೇರಿದಂತೆ ಹಲವರು ಭಾಗವಹಿಸಿದ್ದರು.