
ಕಲಬುರಗಿ:ಅ.14: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಮಹಿಳಾ ವಿದ್ಯಾಲಯದಲ್ಲಿ 2025- 26 ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಬಿ ಎ, ಬಿ ಎಸ್ ಸಿ, ಬಿ ಕಾಮ್ ಪ್ರಥಮ, ದ್ವಿತೀಯ ಹಾಗೂ ಅಂತಿಮ ವರ್ಗಗಳ ವಿದ್ಯಾರ್ಥಿನಿಯರು ವರ್ಗ ಪ್ರತಿನಿಧಿಗಾಗಿ ನಾಮಪತ್ರ ಸಲ್ಲಿಸಿ ಪ್ರಚಾರ ಕೈಗೊಂಡ ಅಭ್ಯರ್ಥಿಗಳನ್ನು ಮತದಾನದ ಮೂಲಕ ವರ್ಗ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು. ಕೆಲವು ವರ್ಗಗಳಲ್ಲಿ ಎರಡನೆಯ ಅವಧಿಗೆ ವಿದ್ಯಾರ್ಥಿನಿಯರು ಮತ ಚಲಾಯಿಸಿದರು. ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ವರ್ಗ ಪ್ರತಿನಿಧಿ ಹುದ್ದೆಗೂ ಬಿರುಸಿನ ಪೈಪೆÇೀಟಿ ನಡೆದದ್ದು ಗಮನ ಸೆಳೆಯಿತು.
ನಂತರ ಮಧ್ಯಾಹ್ನ ಬಿ ಎ, ಬಿ ಎಸ್ ಸಿ, ಬಿ ಕಾಮ್ ಪ್ರಥಮ, ದ್ವಿತೀಯ ಹಾಗೂ ಅಂತಿಮ ವರ್ಗಗಳಲ್ಲಿ ಆಯ್ಕೆಗೊಂಡ ವರ್ಗ ಪ್ರತಿನಿಧಿಳಿಂದ 2025- 26 ನೇ ಸಾಲಿನ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಸಾಂಸ್ಕøತಿಕ ಮತ್ತು ಕ್ರೀಡಾ ಕಾರ್ಯದರ್ಶಿ ಹುದ್ದೆಗೆ ಚುನಾವಣೆ ನಡೆಯಿತು. ಪ್ರತಿ ಹುದ್ದೆಗೂ ಬಿರುಸಿನ ಪೈಪೆÇೀಟಿ ನಡೆದು ಮೂರಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಒಟ್ಟಾರೆ 2025- 26 ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ವಿದ್ಯಾರ್ಥಿನಿಯರ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವಿಕೆ, ಠೇವಣಿ ಇಡುವುದು. ಪ್ರಚಾರ, ಮತದಾನ ನಂತರ ಮತ ಎಣಿಕೆ, ಫಲಿತಾಂಶ ಪ್ರಕಟಣೆ, ವಿಜೇತರ ಸಂಭ್ರಮ ಇತ್ಯಾದಿ ಎಲ್ಲಾ ಚಟುವಟಿಕಗಳು ಅರ್ಥಪೂರ್ಣವಾಗಿ ನಡೆದವು.
ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿ ಸೃಷ್ಟಿ ಪಾಟೀಲ್, ಕಾರ್ಯದರ್ಶಿಯಾಗಿ ಬಿ.ಎಸ್ಸಿ ಅಂತಿಮ ವರ್ಷದ ರೋಹಿಣಿ, ಉಪಕಾರ್ಯದರ್ಶಿಯಾಗಿ ಬಿ.ಎಸ್ಸಿ ಅಂತಿಮ ವರ್ಷದ ಭಾಗ್ಯಶ್ರೀ, ಸಾಂಸ್ಕೃತಿಕ್ ಕಾರ್ಯದರ್ಶಿ ಬಿ.ಕಾಮ್ ಅಂತಿಮ ವರ್ಷದ ಪಲ್ಲವಿ ಹಾಗೂ ಕ್ರೀಡಾ ಕಾರ್ಯದರ್ಶಿಯಾಗಿ ಆರ್ಶಿಯ ಬೇಗಂ ಇವರುಗಳು ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾನ್ಯ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಸರ್ ಅವರು ಆಯ್ಕೆಯಾದ ಸದಸ್ಯರಿಗೆ ಘೋಷಣಾ ಪತ್ರ ನೀಡಿ ವರ್ಷದುದ್ದಕ್ಕೂ ಸಂಘವನ್ನು ಕ್ರಿಯಾಶೀಲವಾಗಿಡುವಂತೆ ಹುರುದುಂಬಿಸಿದರು.
ಚುನಾವಣಾ ಅಧಿಕಾರಿಯಾಗಿ ಶ್ರೀಮತಿ ಗೀತಾ ಪಾಟೀಲ ಅವರು ಸುಸೂತ್ರವಾಗಿ ಕಾರ್ಯನಿರ್ವಹಿಸಿದರು. ಡಾ ನಾಗರತ್ನ ಎಸ್, ರೀಟಾ ಕುಲಕರ್ಣಿ, ಅಂಬಿಕಾ ಪಾಟೀಲ್ ಇವರು ಚುನಾವಣೆ ಕಮಿಟಿಯ ಸದಸ್ಯರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು.
ಇಡೀ ದಿನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಹಾಗೂ ಮತದಾನದ ಕಾವು ಮತ್ತು ಸಂಭ್ರಮ ಸಡಗರದಿಂದ ತುಂಬಿ ತೇಲಾಡುತ್ತಿತ್ತು ಎಂದು ಮಹಾವಿದ್ಯಾಲಯದ ಪತ್ರಿಕಾ ಮಾಧ್ಯಮದ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ಅವರು ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.