
ಮಹಿಳೆಯರಿಗೆ ಅಕ್ಕ ಕೆಫೆ
ಬೆಂಗಳೂರು, ಮಾ. ೨೮-ಮಹಿಳಾ ಸಬಲೀಕರಣ, ಆರೋಗ್ಯ, ಮೂಲಸೌಕರ್ಯ ಹಾಗೂ ನಗರಾಭಿವೃದ್ಧಿಗೆ ಒತ್ತು ನೀಡಿರುವ ಬೆಂಗಳೂರು ಉತ್ತರ ನಗರ ಪಾಲಿಕೆಯ ೪೩೪೪ ಕೋಟಿ ರೂ.ಗಳ ಬೃಹತ್ ಬಜೆಟ್ ಮಂಡನೆಯಾಗಿದೆ.
ಪಾಲಿಕೆ ಆಯುಕ್ತ ಪಿ. ಸುನೀಲ್ ಕುಮಾರ್ ಅವರು ಬಜೆಟ್ ಭಾಷಣದಲ್ಲಿ ಮಹಿಳೆಯರಿಗಾಗಿ ‘ಅಕ್ಕ ಕೆಫೆ’, ಹೊಸ ಆಸ್ಪತ್ರೆಗಳ ಸ್ಥಾಪನೆ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಘೋಷಿಸಿದರು. ಕೂಲಿ ಕಾರ್ಮಿಕರು, ಪೌರಕಾರ್ಮಿಕರು ಮತ್ತು ದುರ್ಬಲ ವರ್ಗಗಳ ಕಲ್ಯಾಣಕ್ಕೂ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದರು..
ಆದಾಯ ಮೂಲಗಳ ನಿರೀಕ್ಷೆ
ಪ್ರಸಕ್ತ ಸಾಲಿನಲ್ಲಿ:
ಆಸ್ತಿ ತೆರಿಗೆ: ೮೨೬.೨೫ ಕೋಟಿ ರೂ.
ಮ್ಯೂಟೇಷನ್ ಸ್ಟಾಂಪ್ ಡ್ಯೂಟಿ: ೪೦ ಕೋಟಿ ರೂ.
PSU ಹಾಗೂ ಅಭಿವೃದ್ಧಿ ಶುಲ್ಕ: ೯೭.೧೫ ಕೋಟಿ ರೂ.
ಬಿ-ರಿಜಿಸ್ಟರ್‌ದಿಂದ ಎ-ಖಾತಾ ಪರಿವರ್ತನೆ: ೬೮೦ ಕೋಟಿ ರೂ.
ಜಾಹೀರಾತುಗಳಿಂದ: ೧೦೮ ಕೋಟಿ ರೂ.
ಒಟ್ಟು ವಿವಿಧ ಮೂಲಗಳಿಂದ ನೂರಾರು ಕೋಟಿ ರೂ. ಗಳ ಆದಾಯ ನಿರೀಕ್ಷಿಸಲಾಗಿದೆ..
ಮಹಿಳಾ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಒತ್ತು:
ಮಹಿಳೆಯರಿಂದ ನಿರ್ವಹಣೆಯ ‘ಅಕ್ಕ ಕೆಫೆ’ ಸ್ಥಾಪನೆಗೆ ೨೭ ಲಕ್ಷ ರೂ.
ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣ
ಉದ್ಯೋಗಸ್ಥ ಮಹಿಳೆಯರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ
೪೦೦ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ
ತೃತೀಯ ಲಿಂಗಿಗಳಿಗೆ ೫೦,೦೦೦ ಸಹಾಯಧನ
ಪೌರಕಾರ್ಮಿಕರು ಮತ್ತು ಬೀದಿ ವ್ಯಾಪಾರಿಗಳಿಗೆ ಯೋಜನೆ
ಪೌರಕಾರ್ಮಿಕರ ಕಲ್ಯಾಣಕ್ಕೆ ೧೦ ಕೋಟಿ ರೂ.
ಬೀದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ವಾಹನಗಳಿಗೆ ೭.೧೦ ಕೋಟಿ ರೂ.
ಕಾರ್ಮಿಕರಿಗೆ ಸುರಕ್ಷತಾ ಪರಿಕರ ಹಾಗೂ ಆರೋಗ್ಯ ತಪಾಸಣೆ.
ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಹೂಡಿಕೆ
ಸರ್ವಜ್ಞನಗರ, ಬ್ಯಾಟರಾಯನಪುರದಲ್ಲಿ ೧೦೦ ಹಾಸಿಗೆ ಆಸ್ಪತ್ರೆಗಳು
ಉಚಿತ ಡಯಾಲಿಸಿಸ್ ಸೇವೆಗಳ ವಿಸ್ತರಣೆ
ಡಿ.ಜೆ ಹಳ್ಳಿ, ಮುನಿರೆಡ್ಡಿಪಾಳ್ಯ ಆಸ್ಪತ್ರೆಗಳ ಮೇಲ್ದರ್ಜೆಗೇರಿಕೆ
ಆರೋಗ್ಯ ಯೋಜನೆಗಳಿಗೆ ವಿಶೇಷ ಅನುದಾನ.
ಪರಿಸರ ಮತ್ತು ಸ್ವಚ್ಛತೆಗೆ ಆದ್ಯತೆ
ತ್ಯಾಜ್ಯ ನಿರ್ವಹಣೆಗೆ ೧೨೯.೫೭ ಕೋಟಿ ರೂ.
೧೧೦ ಸಿಸಿಟಿವಿಗಳ ಮೂಲಕ ಕಸ ಎಸೆಯುವವರ ಮೇಲೆ ನಿಗಾವಹಿಕೆ
‘ಮಿಷನ್ ಕ್ಲೀನ್ ಏರ್‌ಪೋರ್ಟ್’ ಯೋಜನೆ
ಗಿಡ ನೆಡುವ ಕಾರ್ಯಕ್ರಮಗಳಿಗೆ ಅನುದಾನ..
ಮೂಲಸೌಕರ್ಯ ಅಭಿವೃದ್ಧಿ
ರಸ್ತೆ, ಪಾದಚಾರಿ ಮಾರ್ಗ, ಸ್ಕೈವಾಕ್‌ಗಳಿಗೆ ೫೦ ಕೋಟಿ ರೂ.
ಕೆರೆಗಳ ಅಭಿವೃದ್ಧಿಗೆ ೪೦ ಕೋಟಿ ರೂ.
ವಿಧಾನಸಭಾ ಕ್ಷೇತ್ರವಾರು ಕಾಮಗಾರಿಗಳಿಗೆ ೧೨೦ ಕೋಟಿ ರೂ.
ಮುಖ್ಯಮಂತ್ರಿಗಳ ಯೋಜನೆಗಳಿಗೆ ೯೩೫.೫೬ ಕೋಟಿ ರೂ.
ಶಿಕ್ಷಣ ಮತ್ತು ಯುವಕರಿಗೆ ನೆರವು
ಉಚಿತ ಪುಸ್ತಕ, ಯೂನಿಫಾರ್ಮ್‌ಗಳಿಗೆ ಅನುದಾನ
ಮೇಲುಸ್ತರದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ
ಹೊಸ ಶಾಲೆ ಮತ್ತು ಕಾಲೇಜು ಪ್ರಾರಂಭ.
ಇತರೆ ಪ್ರಮುಖ ಅಂಶಗಳು:
ಸ್ವೀಪಿಂಗ್ ಯಂತ್ರ ಖರೀದಿಗೆ ೧೨ ಕೋಟಿ ರೂ.
ಕ್ರೀಡಾಪಟುಗಳಿಗೆ ೧ ಕೋಟಿ ರೂ.
ಮಾಧ್ಯಮದವರಿಗೆ ವೈದ್ಯಕೀಯ ನೆರವು
ಬೀದಿ ನಾಯಿಗಳಿಗೆ ಲಸಿಕೆ ಹಾಗೂ ಆಶ್ರಯ ಯೋಜನೆ
ಒಟ್ಟಾರೆ, ಈ ಬಜೆಟ್ ಮಹಿಳಾ ಸಬಲೀಕರಣ, ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಮತೋಲನದ ಒತ್ತು ನೀಡಿದ ಸಮಗ್ರ ಬಜೆಟ್ ಎಂದು ಹೇಳಬಹುದು.






























