ಖಮೇನಿ, ಪುತ್ರ ಮೋಜ್ತಾವಾ ಹತ್ಯೆಗೆ ಅಮೆರಿಕ ಸಂಚು

ವಾಷಿಂಗ್ಟನ್,ಫೆ.೨೨- ಇರಾನ್‌ನಲ್ಲಿ ಸಾರ್ವಜನಿಕರ ಮೇಲೆ ಮಾರಣ ಹೋಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಿರುವ ಅಮೆರಿಕ ಇರಾನ್‌ನ ಸರ್ವೋಚ್ಚ ನಾಯಕ ಆಲಿ ಖಮೇನಿ ಮತ್ತು ಅವರ ಪುತ್ರ ಮೋಜ್ತಾಬಾ ಖಮೇನಿ ಅವರನ್ನು ಹತ್ಯೆ ಮಾಡಲು ಅಮೆರಿಕ ಉದ್ದೇಶಿಸಿದೆ ಎಂದು ಉನ್ನತ ಮೂಲಗಳು ಮಾಹಿತಿ ಹಂಚಿಕೊಂಡಿವೆ.


ಇರಾನ್‌ನಲ್ಲಿ ಹೆಚ್ಚುತ್ತಿರುವ ಸಮಸ್ಯೆಯ ಹಿನ್ನೆಲೆಯಲ್ಲಿಈಗಾಗಲೇ ಅನೇಕ ಯುದ್ಧ ವಿಮಾನಗಳನ್ನು ಇರಾನ್ ಕಡೆಗೆ ನಿಯೋಜಿಸಲಾಗಿದ್ದು ಯಾವುದೇ ಕ್ಷಣದಲ್ಲಿ ಎದುರಾಗುವ ಸಮಸ್ಯೆಯನ್ನು ಹತ್ತಿಕ್ಕಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ಧಾರೆ ಎಂದು ಮೂಲಗಳು ಮಾಹಿತಿ ಹಂಚಿಕೊಂಡಿವೆ.


ಇರಾನ್‌ನ ಪರಮಾಣು ನೀತಿಯ ಬಗ್ಗೆ ಅಮೆರಿಕ ಅಪಸ್ವರ ವ್ಯಕ್ತಪಡಿಸಿದ್ದು ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಇರಾನ್ ಸುಪ್ರೀಂ ನಾಯಕ ಆಲಿ ಖಮೇನಿ ಮತ್ತು ಅವರ ಪುತ್ರ ಮೊರ್ತಾಜಾ ಖಮೇನಿ ಅವರನ್ನು ಹತ್ಯೆ ಮಾಡಲು ಅಮೇರಿಕಾ ಉದ್ದೇಶಿಸಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿದೆ.


ವರದಿಯ ಪ್ರಕಾರ, ಹಿರಿಯ ಸಲಹೆಗಾರರೊಬ್ಬರು ಅಮೆರಿಕದ ಅಧಿಕಾರಿಗಳು “ಪ್ರತಿಯೊಂದು ಸನ್ನಿವೇಶಕ್ಕೂ” ಆಯ್ಕೆಗಳನ್ನು ಸಿದ್ಧಪಡಿಸಿದ್ದಾರೆ ” ಅಯತೊಲ್ಲಾ ಮತ್ತು ಅವರ ಮಗ ಮತ್ತು ಮುಲ್ಲಾಗಳನ್ನು ಹೊರಹಾಕುವುದು ಅದು ಸಾಧ್ಯವಾಗದಿದ್ದರೆ ಹತ್ಯೆ ಮಾಡಲು ಉದ್ದೇಶಿಸಿದೆ ಎಂದು ಹೇಳಲಾಗಿದೆ.


ಆಲಿ ಖಮೇನಿ ಮತ್ತು ಅವರ ಸಂಭಾವ್ಯ ಉತ್ತರಾಧಿಕಾರಿ ಎಂದು ಬಿಂಬಿತವಾಗಿರುವ ಮೊಜ್ತಾಬಾ ಅವರನ್ನು ಉಲ್ಲೇಖಿಸಿ ಇಬ್ಬರನ್ನುಹತ್ಯೆ ಮಾಡಲು ಉದ್ದೇಶಿಸಲಾಗಿದೆ, ಈ ಯೋಜನೆ ಬಗ್ಗೆ ಹಲವಾರು ವಾರಗಳ ಹಿಂದೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮಾಹಿತಿ ನೀಡಲಾಗಿದೆ.


ಮಾತುಕತೆಗಳ ಸಮಯದಲ್ಲಿ ಅಮೆರಿಕ ಸೀಮಿತ ದಾಳಿ ನಡೆಸಬಹುದೇ ಎಂದು ಕೇಳಿದಾಗ, ಇರಾನ್ ಒಪ್ಪಂದಕ್ಕೆ ಬರಲು ೧೦ ರಿಂದ ೧೫ ದಿನಗಳು “ಸಾಕಷ್ಟು ಸಮಯ” ಎಂದು ಅವರು ಹೇಳಿದ್ಧಾರೆ.


ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಟೆಹ್ರಾನ್ ರಾಜತಾಂತ್ರಿಕವಾಗಿ ಮುಂದುವರಿಯಲು ಸಿದ್ಧವಾಗಿದೆ “ಮುಂದಿನ ಎರಡು ಮೂರು ದಿನಗಳಲ್ಲಿ” ಕರಡು ಪ್ರಸ್ತಾವನೆ ಅಂತಿಮಗೊಳಿಸಬಹುದು ಮತ್ತು ಪಠ್ಯದ ಕುರಿತು ಗಂಭೀರ ಮಾತುಕತೆಗಳು “ಒಂದು ವಾರದೊಳಗೆ” ಪ್ರಾರಂಭವಾಗಬಹುದು ಎಂದು ಹೇಳಲಾಗಿದೆ