ಭಾರತದ ವಿರುದ್ಧ ಅಮೆರಿಕ ಆಕ್ರೋಶ

ವಾಷಿಂಗ್ಟನ್,ಸೆ.೭- ರಷ್ಯಾದಿಂದ ಭಾರತ ತೈಲ ಖರೀದಿ ಮಾಡುತ್ತಿರುವುದನ್ನು ಗುರಿಯಾಗಿಸಿಕೊಂಡು ಶ್ವೇತಭವನದ ಸಲಹೆಗಾರ ಪೀಟರ್ ನವರೊ ಭಾರತದ ವಿರುದ್ಧ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ.
ರಷ್ಯಾದಿಂದ ಭಾರತ ತೈಲ ಖರೀದಿ ಮಾಡುವ ಮೂಲಕ ರಷ್ಯಾಗೆ ಉಕ್ರೇನ್ ವಿರುದ್ಧ ಯುದ್ಧಕ್ಕೆ ಪ್ರೋತ್ಸಾಹ ನೀಡುತ್ತಿದೆ, ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.


ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಭಾರತ, ರಷ್ಯಾದೊಂದಿಗೆ “ಸಂಪೂರ್ಣವಾಗಿ ಲಾಭಕ್ಕಾಗಿ ಅಥವಾ ಆದಾಯಕ್ಕಾಗಿ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದ್ದು ಪರೋಕ್ಷವಾಗಿ ಯುದ್ಧಕ್ಕೆ ಸಹಕಾರ ನೀಡುತ್ತಿದೆ ಎಂದಿದ್ದಾರೆ.


ಶ್ವೇತಭವನದ ಸಲಹೆಗಾರ ಪೀಟರ್ ನವರೋ ಮಾಡಿರುವ ಟ್ವೀಟ್‌ಗೆ ಹಲವು ಬಳಕೆದಾರರು ಪ್ರತಿಕ್ರಿಯಿಸಿ ಭಾರತದ ತೈಲ ಆಮದುಗಳು ಹೆಚ್ಚಾಗಿ “ಲಾಭಕ್ಕಾಗಿ ಅಲ್ಲ, ಇಂಧನ ಭದ್ರತೆಗಾಗಿ” ಮತ್ತು ಭಾರತ, ಯಾವುದೇ ನಿರ್ಬಂಧಗಳನ್ನು ಉಲ್ಲಂಘಿಸಲಿಲ್ಲ ಎಂದರು.


ಭಾರತ ಕೆಲವು ಸುಂಕಗಳನ್ನು ವಿಧಿಸುತ್ತಿದ್ದರೂ, ಅಮೇರಿಕಾ ವಾಸ್ತವವಾಗಿ ಭಾರತದೊಂದಿಗೆ ಸೇವೆಗಳಲ್ಲಿ ವ್ಯಾಪಾರ ಹೆಚ್ಚುವರಿ ಸುಂಕ ವಿಧಿಸಿದೆ. ರಷ್ಯಾದಿಂದಲೇ ಕೆಲವು ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿದೆ ಎಂದು ಹೇಳಿದರು.


ಈ ನಡುವೆ ಪೀಟರ್ ನವರೋ ಮಾಡಿರುವ ಟ್ವೀಟ್ ಅನ್ನು ಉದ್ಯಮಿ ಹಾಗು ಎಕ್ಸ್ ಖಾತೆ ಮುಖ್ಯಸ್ಥ ಎಲೋನ್ ಮಸ್ಕ್ ಕೂಡ ಟೀಕಿಸಿದ್ದು ಉಕ್ರೇನ್ ಆಕ್ರಮಣದ ನಂತರ ಭಾರತ ರಷ್ಯಾದ ತೈಲ ಖರೀದಿಸಲು ಪ್ರಾರಂಭಿಸಿದೆ ಎಂದು ತಿಳಿಸಿದರು.


ಭಾರತ ಲಾಭ ಗಳಿಸಲು ಮಾತ್ರ ರಷ್ಯಾ ತೈಲವನ್ನು ಖರೀದಿಸುತ್ತದೆ. ರಷ್ಯಾ ಉಕ್ರೇನ್ ಅನ್ನು ಆಕ್ರಮಿಸುವ ಮೊದಲು ಭಾರತ, ರಷ್ಯಾದಿಂದ ಏನನ್ನೂ ಖರೀದಿಸುತ್ತಿರಲಿಲ್ಲ, ಭಾರತ ಸರ್ಕಾರ ಲಾಭ ಮಾಡುವ ಉದ್ದೇಶ ಹೊಂದಿದೆ ಎನ್ನುವದು ಸರಿಯಲ್ಲ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತೀಯ ಆಮದುಗಳ ಮೇಲೆ ಶೇಕಡಾ ೫೦ ಸುಂಕ ಘೋಷಿಸಿದಾಗಿನಿಂದ, ಪೀಟರ್ ನವರೊ ಅವರ ಫ್ಲ್ಯಾಗ್ ಮಾಡಿದ ಪೊ?ಸ್ಟ್ ರಷ್ಯಾದ ತೈಲ ವ್ಯಾಪಾರದ ಕುರಿತು ಭಾರತದ ವಿರುದ್ಧ ಅವರು ಮಾಡಿರುವ ಆರೋಪಗಳ ಸರಣಿಯಲ್ಲಿ ಇತ್ತೀಚಿನದು.

ಭಾರತದ ಅತ್ಯಧಿಕ ಸುಂಕಗಳು ಅಮೆರಿಕದ ಉದ್ಯೋಗ ಹಾಳುಮಾಡುತ್ತವೆ. ಭಾರತ ರಷ್ಯಾದ ತೈಲವನ್ನು ಸಂಪೂರ್ಣವಾಗಿ ಲಾಭಕ್ಕಾಗಿ ಖರೀದಿಸುತ್ತದೆ ಎಂದು ತಿಳಿಸಿದ್ದಾರೆ