
೬ನೇ ದಿನಕ್ಕೆ ಕಾಲಿಟ್ಟ ಕದನ
ವಾಷಿಂಗ್ಟನ್,ಮಾ.೫- ಪಶ್ಚಿಮ ಏಷ್ಯಾ ದೇಶದಲ್ಲಿ ನಡೆಯುತ್ತರುವ ಸಂಘರ್ಷದ ದಿನದಿಂದ ದಿನಕ್ಕೆ ಮತ್ತಷ್ಟು ಬಿಗಡಾಯಿಸುತ್ತಿದ್ದು ೬ನೇ ದಿನಕ್ಕೆ ಕಾಲಿಟ್ಟಿದೆ, ಈ ನಡುವೆ ಅಮೆರಿಕ ಮತ್ತು ಇಸ್ರೇಲ್ ಜೊತೆಯಾಗಿ ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ೧೦೦೦ಕ್ಕೂ ಅಧಿಕ ಸಾವನ್ನಪ್ಪಿದ್ದಾರೆ, ನೂರಾರು ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ದಾಳಿ ಮತ್ತು ಪ್ರತಿದಾಳಿಯ ಪರಿಣಾಮ ಸುಮಾರು ೮೦,೦೦೦ ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಲೆಬನಾನ್ ಅಧಿಕಾರಿಗಳು ಹೇಳಿದ್ದು ಪಶ್ಚಿಮ ಏಷ್ಯಾ ದೇಶಗಳಲ್ಲಿ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.
ಈ ನಡುವೆ ಇಸ್ರೇಲ್-ಅಮೆರಿಕದ ದಾಳಿ ಮತ್ತು ಇರಾನ್‌ನ ಪ್ರತಿದಾಳಿಯಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ, ಸೇನಾ ನೆಲೆಗಳು ಮತ್ತು ಮೌಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿವೆ. ಇದರಿಂದ ತೈಲ ಪೂರೈಕೆ ಮೇಲೆ ಗಂಭೀರ ಪರಿಣಾಮ ಬೀರಿದೆ.
ಇಸ್ರೇಲ್ ಇರಾನ್ ನಡುವಿನ ದಾಳಿ ಮತ್ತು ಮತ್ತು ಬೈರುತ್‌ನಲ್ಲಿರುವ ಹೆಜ್ಬೊಲ್ಲಾ ಸಂಘಟನೆಯ ಮೇಲಿನ ಮೂಲಸೌಕರ್ಯ ದ ಮೇಲಿನ ದಾಳಿ ಮತ್ತು ಪ್ರತಿದಾಳಿ ಸಂಘರ್ಷಕ್ಕೆ ಮತ್ತಷ್ಟು ಹೆಚ್ಚು ಮಾಡಿದೆ. ಬಹ್ರೇನ್‌ನಲ್ಲಿರುವ ಅಮೆಜಾನ್ ಡೇಟಾ ಸೆಂಟರ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ
ಇರಾನ್ ಹರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದೆ. ಇದರಿಂದ ಈ ಭಾಗದಿಂದ ಪೂರೈಕೆಯಾಗುವ ತೈಲದ ಮೇಲೆ ಬಾರಿ ಪರಿಣಾಮ ಬೀರಲಿದ್ದು, ಭಾರತ ಸೇರಿದಂತೆ ಇನ್ನಿತರೆ ದೇಶಗಳ ಮೇಲೆ ತೈಲ ಬೆಲೆ ಹೆಚ್ಚಳವಾಗಲಿದ್ದು ರಾಷ್ಟ್ರಗಳು ಅತ್ಯಧಿಕ ಆರ್ಥಿಕ ಹೊರೆ ಭರಿಸಬೇಕಾಗುತ್ತದೆ.
ಇರಾನ್ ಬೆದರಿಕೆಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹರ್ಮುಜ್ ಜಲಸಂಧಿಯನ್ನು ಮುಚ್ಚಿದರೆ ಪರಿಣಾಂ ಎದುರಿಸಬೇಕಾಗುತ್ತದೆ,. ತೈಲ ಸರಬರಾಜು ಮಾಡುವ ಹಡಗುಗಳಿಗೆ ಗಸ್ತು ಪಡೆ ನಿಯೋಜಿಸಲಾಗುವುದು ತೈಲ ಪೂರೈಕೆಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಭವಿಷ್ಯದಲ್ಲಿ ಅಮೆರಿಕ ಪಡೆಗಳನ್ನು ಮತ್ತಷ್ಟು ಗಟ್ಟಿಗೊಳಿಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಸೇವಾ ಸಿಬ್ಬಂದಿ ಸದಸ್ಯರಿಗೆ ಗುರುತಿನ ಚೀಟಿ ನೀಡುವುದಾಗಿ ತಿಳಿಸಿದ ಅವರು ಕುವೈತ್‌ನಲ್ಲಿ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ ಇಬ್ಬರು ಉಳಿದ ಸೇವಾ ಸದಸ್ಯರನ್ನು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಇರಾನ್ ನಿಂದಲೂ ಪ್ರತಿದಾಳಿ
ಮಧ್ಯಪ್ರಾಚ್ಯದಲ್ಲಿ ವೈಮಾನಿಕ ದಾಳಿ ಆರನೇ ದಿನವೂ ಮುಂದುವರಿದಿದ್ದು, ಇರಾನ್ ರಾತ್ರಿಯಿಡೀ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ.
ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ತಮ್ಮ ಬಾಂಬ್ ದಾಳಿ ತೀವ್ರಗೊಳಿಸಿದ್ದವು. ಇದರಿಂದ ಇರಾನ್ ಇಂದು ಮತ್ತೆ ದಾಳಿ ನಡೆಸಿದೆ, ಈ ಮೂಲಕ ಇಸ್ರೇಲ್ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ. ಹಿಜ್ಬೊಲ್ಲಾದ ಪ್ರಬಲ ಪ್ರದೇಶವಾದ ಬೈರುತ್‌ನ ದಕ್ಷಿಣ ಉಪನಗರಗಳನ್ನು ಸಹ ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸುತ್ತಿದೆ
ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮತ್ತು ಜೆರುಸಲೆಮ್‌ನಲ್ಲಿ ವಾಯುದಾಳಿಯ ಸೈರನ್‌ಗಳು ಮೊಳಗಿವೆ ವಾಯು ರಕ್ಷಣಾ ಪಡೆಗಳು ಕ್ಷಿಪಣಿಗಳನ್ನು ತಡೆಹಿಡಿದಂತೆ ಸ್ಫೋಟಗಳು ಕೇಳಿಬಂದಿದ್ದು ದಾಳಿ ಮತ್ತು ಪ್ರತಿದಾಳಿಯಿಂದ ಜನರು ಹಿಡಿ ಜೀವ ಕೈಯಲ್ಲಿಡಿದು ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ಇರಾನ್‌ನಿಂದ ಹಾರಿಸಲಾಗುತ್ತಿರುವ ರಾಕೆಟ್‌ಗಳ ಸಂಖ್ಯೆಯಲ್ಲಿನ ಇಳಿಕೆಯಿಂದಾಗಿ ಇಸ್ರೇಲ್ ಸಾರ್ವಜನಿಕರ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಕೆಗೆ ಕಾರಣವಾಗಿದೆ. ಇರಾನಿನ ಕ್ಷಿಪಣಿ ದಾಸ್ತಾನು ಮತ್ತು ಉಡಾವಣಾ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎಂದು ಇಸ್ರೇಲಿ ಮಿಲಿಟರಿ ವಕ್ತಾರರು ಸೂಚಿಸಿದ್ದಾರೆ.
ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಮತ್ತೆ ಸ್ಫೋಟಗಳು ವರದಿಯಾಗಿವೆ, ಲೆಬನಾನ್‌ನಲ್ಲಿ ಹೆಚ್ಚು ಮಾರಕ ಇಸ್ರೇಲಿ ವಾಯುದಾಳಿಗಳು ನಡೆದಿವೆ.


























