
ವಾಷಿಂಗ್ಟನ್,ಮಾ,೪- ಇರಾನ್ ಮೇಲೆ ನಡೆಯುತ್ತಿರುವ ದಾಳಿ, ಪ್ರತಿದಾಳಿಯ ನಡುವೆಯೇ ಇರಾನ್‌ನ ಪ್ರಮುಖ ೨ ಸಾವಿರ ಸ್ಥಳಗಳನ್ನು ದಾಳಿ ನಡೆಸಲಾಗಿದ್ದು ಒಂದು ಜಲಾಂತರ್ಗಾಮಿ ನೌಕೆ ಸೇರಿದಂತೆ ಹಡಗುಗಳನ್ನು ನಾಶಪಡಿಸಲಾಗಿದೆ ಎಂದು ಅಮೆರಿಕ ಸೇನೆ ತಿಳಿಸಿದೆ.
ದಿನದ ೨೪ ಗಂಟೆ ಇರಾನ್ ಮೇಲೆ ದಾಳಿ ಮುಂದುವರಿದಿದೆ ಅಮೆರಿಕ ಸೇನೆ ಹೇಳಿದೆ.
ಈಗಾಗಲೇ ಇರಾನ್ ೨,೦೦೦ ಗುರಿಗಳ ಮೇಲೆ ದಾಳಿ ನಡೆಸಿದ್ದೇವೆ. ಇರಾನ್‌ನ ರಕ್ಷಣಾ ವ್ಯವಸ್ಥೆ ದುರ್ಬಲಗೊಳಿಸಿದ್ದೇವೆ. ನೂರಾರು ಖಂಡಾಂತರ ಕ್ಷಿಪಣಿ, ಲಾಂಚರ್ ಹಾಗೂ ಡೋನ್‌ಗಳನ್ನು ನಾಶಪಡಿಸಿದ್ದೇವೆ’ ಎಂದು ಹೇಳಿದೆ
ಅಮೆರಿಕ ಸೆಂಟ್ರಲ್ ಕಮಾಂಡ್‌ನ ಅಡ್ಮಿರಲ್ ಬ್ರಾಡ್ ಕೂಪರ್ ಮಾಹಿತಿ ನೀಡಿ ಅರೇಬಿಯನ್ ಕೊಲ್ಲಿ ಹಾಗೂ ಒಮಾನ್ ಕೊಲ್ಲಿ ಅಥವಾ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಒಂದೇ ಒಂದು ಹಡಗು ಕಾರ್ಯಾಚರಿಸುತ್ತಿಲ್ಲ ಮೊದಲ ದಿನದ ದಾಳಿಯು ೨೦೦೩ರಲ್ಲಿ ಇರಾಕ್‌ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಆಡಳಿತದ ಮೇಲಿನ ದಾಳಿಗಿಂತಲೂ ಎರಡು ಪಟ್ಟು ಹೆಚ್ಚಾಗಿವೆ ಎಂದು ಹೇಳಿದ್ದಾರೆ
ಇರಾನ್‌ನಾದ್ಯಂತ ಭಾರಿ ಪ್ರಮಾಣದಲ್ಲಿ ದಾಳಿ ಪ್ರಾರಂಭಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದ ಬೆನ್ನಲ್ಲೇ ಅಮೆರಿಕ ಒಂದು ಹೆಜ್ಜೆ ಮುಂದೆ ಹೋಗಿ ಇರಾನ್‌ನ ೨ ಸಾವಿರ ಸ್ಥಳಗಳನ್ನು ಗುರುತು ಮಾಡಿದ್ದು ದಾಳಿ ನಡೆಸಲಾಗುತ್ತಿದೆ ಎಂದು ಹೇಳಿದೆ.
ಪ್ರಮುಖವಾಗೊ ಕ್ಷಿಪಣಿ ಉಡಾವಣಾ ತಾಣಗಳು, ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಇರಾನಿನ “ಭಯೋತ್ಪಾದನಾ ಸಂಘಟನೆಗಳು ಸೇರಿದಂತೆ ಪ್ರಮುಖ ಸ್ಥಳಗಳು,ಮೂಲ ಸೌಕರ್ಯ ತಾಣಗಳ ಮೇಲೆ ದಾಳಿ ಮುಂದುವರಿದಿದೆ, ಇರಾನ್ ಅನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅಮೆರಿಕ ಗುಡುಗಿದೆ
ಮಧ್ಯಪ್ರಾಚ್ಯದಲ್ಲಿ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ದೊಡ್ಡ ಮಟ್ಟದಲ್ಲಿ ದಾಳಿ ನಡೆಸುತ್ತಿದೆ. ಈ ವರೆಗೆ ೨ ಸಾವಿರ ಸ್ಥಳಗಳನ್ನು ಗುರುತಿಸಿ ದಾಳಿ ನಡೆಸಲಾಗುತ್ತಿದೆ ಎಂದು ಅಮೆರಿಕದ ಉನ್ನತ ಕಮಾಂಡರ್ ಹೇಳಿದ್ದಾರೆ.
ಈಗಾಗಲೇ ೨,೦೦೦ ಕ್ಕೂ ಹೆಚ್ಚು ಯುದ್ಧಸಾಮಗ್ರಿಗಳೊಂದಿಗೆ ಸುಮಾರು ೨,೦೦೦ ಗುರಿಗಳ ಮೇಲೆ ದಾಳಿ ಮಾಡಿದ್ದೇವೆ. ಇರಾನ್‌ನ ವಾಯು ರಕ್ಷಣೆ ತೀವ್ರವಾಗಿ ಕೆಡಿಸಿದ್ದೇವೆ ಮತ್ತು ಇರಾನ್‌ನ ನೂರಾರು ಖಂಡಾಂತರ ಕ್ಷಿಪಣಿಗಳು, ಲಾಂಚರ್ಗಳು ಮತ್ತು ಡ್ರೋನ್‌ಗಳನ್ನು ನಾಶಪಡಿಸಿದ್ದೇವೆ” ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಅಡ್ಮಿರಲ್ ಬ್ರಾಡ್ ಕೂಪರ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
“ಈ ಕಾರ್ಯಾಚರಣೆಯ ಮೊದಲ ೨೪ ಗಂಟೆಗಳು ೨೦೦೩ ರಲ್ಲಿ ಇರಾಕ್ ಮೇಲೆ ನಡೆದ ಮೊದಲ ದಿನದ ಆಘಾತ ಮತ್ತು ವಿಸ್ಮಯಕಾರಿ ದಾಳಿಗಿಂತ ಎರಡು ಪಟ್ಟು ಹೆಚ್ಚಾಗಿವೆ” ,ಇರಾನ್ ಮೇಲೆ ದಿನದ ೨೪ ಗಂಟೆಗಳ ಕಾಲವೂ ದಾಳಿ ನಡೆಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ
ಟೆಹ್ರಾನ್ ಮತ್ತು ಲೆಬನಾನ್‌ನಲ್ಲಿ ಸ್ಫೋಟಗಳು ವರದಿಯಾಗಿವೆ, ಅಲ್ಲಿ ಇಸ್ರೇಲ್ ಹಿಜ್ಬೊಲ್ಲಾ ಉಗ್ರಗಾಮಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದೆ ಎಂದು ಹೇಳಿದೆ.
ಸೌದಿ ಅರೇಬಿಯಾದಲ್ಲಿರುವ ಅಮೇರಿಕನ್ ರಾಯಭಾರ ಕಚೇರಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿ ಡ್ರೋನ್ ದಾಳಿಗೆ ಒಳಗಾಯಿತು. ಇರಾನ್ ಇಸ್ರೇಲ್ ಮೇಲೆ ಡಜನ್‌ಗಟ್ಟಲೆ ಖಂಡಾಂತರ ಕ್ಷಿಪಣಿಗಳನ್ನು ಹಾರಿಸಿದೆ, ಆದರೂ ಹೆಚ್ಚಿನವುಗಳನ್ನು ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ
ಇರಾನ್ ಕಮಾಂಡರ್ ಹತ್ಯೆ
ಮಧ್ಯಪ್ರಾಚ್ಯ ದೇಶಗಳಲ್ಲಿ ಸಂಘರ್ಷ ಹೆಚ್ಚುತ್ತರುವ ಹಿನ್ನೆಲೆಯಲ್ಲಿ ದುಬೈ, ದೋಹಾದಲ್ಲಿ ಕ್ಷಿಪಣಿ ಮತ್ತು ಡ್ರೋಣ್ ದಾಳಿ ನಡೆದಿದೆ, ಈ ನಡುವೆಯೇ ಇರಾನಿನ ಉನ್ನತ ಕಮಾಂಡರ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಇರಾನ್‌ನ ರಾಜಧಾನಿ ಟೆಹ್ರಾನ್ ಮೇಲೆ ನಡೆಸಿದ ದಾಳಿಯಲ್ಲಿ ಲೆಬನಾನ್‌ನಲ್ಲಿರುವ ಇರಾನ್‌ನ ಗಣ್ಯ ಕುದ್ಸ್ ಪಡೆಯ ಕಮಾಂಡರ್ ದಾವೂದ್ ಅಲಿ ಜದೇಹ್ ಅವರನ್ನು ಕೊಂದಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ
ಅಮೆರಿಕ- ಇಸ್ರೇಲ್ ಇರಾನ್ ದಾಳಿಯಿಂದ ಇರಾನ್ ಶಾಲೆಯಲ್ಲಿ ೧೭೦ ಮಂದಿ ಮಕ್ಕಳು, ಶಿಕ್ಷಕರೂ ಸೇರಿದಂತೆ ಸಾವಿನ ಸಂಖ್ಯೆ ೭೮೭ ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ದೇಶದಲ್ಲಿ ಮತ್ತಷ್ಟು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಇರಾನ್ ಸರ್ಕಾರ ಮತ್ತು ಮಿಲಿಟರಿ ನಾಯಕತ್ವವನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಪ್ರತಿದಾಳಿ ನಡೆಸಿದೆ. ಗಲ್ಫ್‌ನಲ್ಲಿರುವ ಅಮೇರಿಕನ್ ನೆಲೆಗಳು ಮತ್ತು ಹಿತಾಸಕ್ತಿಗಳನ್ನು ಹೊಡೆಯುವ ಮೂಲಕ ಇರಾನ್ ಪ್ರತೀಕಾರ ತೀರಿಸಿಕೊಂಡಿದೆ.
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾರ್ಗದರ್ಶದಲ್ಲಿ ಅಮೆರಿಕದ ಪಡೆಗಳು ಇರಾನ್ ಮೇಲೆ ದಾಳಿ ನಡೆಸಿವೆ, ಇರಾನ್‌ನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಅಮೇರಿಕಾ ಆಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಅಮೇರಿಕಾ ದೀರ್ಘಕಾಲದ ಕಾರ್ಯಾಚರಣೆಗೆ ಸಿದ್ಧವಾಗಿದೆ . ಆದರೂ ಇರಾನ್ ಒತ್ತಡಕ್ಕೆ ಮಣಿಯುವುದಿಲ್ಲ ಆದರೆ ಮಾತುಕತೆಗೆ ಮುಕ್ತವಾಗಿದೆ ಎಂದು ಹೇಳಿದ್ದಾರೆ.
ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶ್ವಕ್ಕೆ ಪ್ರಮುಖ ತೈಲ ಸರಬರಾಜು ಮಾರ್ಗವಾದ ಹರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ಬೆದರಿಕೆ ಹಾಕಿದೆ, ಇದರಿಂದ ತೈಲ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ
ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹರ್ಮುಜ್ ಜಲಮಾರ್ಗದ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗಿಗೆ ಬೆಂಕಿ ಹಚ್ಚಲಾಗುವುದು ಎನ್ನುವ ಎಚ್ಚರಿಕೆಯನ್ನೂ ಇರಾನ್ ನೀಡಿದೆ
ಅಮೆರಿಕ ಇಸ್ರೇಲ್‌ಗೆ ಇರಾನ್ ತಿರುಗೇಟು
ಅಮೆರಿಕ , ಇಸ್ರೇಲ್‌ಗೆ ಇರಾನ್ ಅಗ್ಗದ ಡ್ರೋಣ್ ಮೂಲಕ ತಿರುಗೇಟು ನೀಡುತ್ತಿದೆ , ಇರಾನ್ ಬಳಿಯಿರುವ ಶಸ್ತ್ರಾಸ್ತ್ರಗಳು ಅಷ್ಟೇನೂ ಆಧುನಿಕ ಹಾಗೂ ಪರಿಣಾಮಕಾರಿ ಅಲ್ಲ. ಆದರೆ ಅವುಗಳ ಮಾರಕ ದಾಳಿಯಿಂದ ಆಗುತ್ತಿರುವ ಅಪಾರ ಹಾನಿಯನ್ನು ತಪ್ಪಿಸಲು ಮಾತ್ರ ಸಾಧ್ಯವಾಗುತ್ತಿಲ್ಲ.
ಅವುಗಳನ್ನು ಧ್ವಂಸ ಮಾಡುವಲ್ಲಿ ಅಮೆರಿಕ ೯೦% ರಷ್ಟು ಯಶಸ್ವಿಯಾದರೂ, ಆ ಕಾರ್ಯಾಚರಣೆ ಭಾರೀ ದುಬಾರಿಯಾಗುತ್ತಿದೆ. ಮಧ್ಯಪ್ರಾಚ್ಯದಾದ್ಯಂತ ಇರುವ ಅಮೆರಿಕದ ನೆಲೆಗಳು, ತೈಲಾಗಾರಗಳು, ರಾಯಭಾರ ಕಚೇರಿ, ಕಟ್ಟಡಗಳ ಮೇಲೆ ದಾಳಿ ಮಾಡಲು ಇರಾನ್ ಬಳಸುತ್ತಿರುವುದು ಶಾಹೇದ್-೧೩೬ ಡ್ರೋನ್, ಇದರ ಬೆಲೆ ಅಂದಾಜು ೨ ಲಕ್ಷ ರೂ. ಆದರೆ ಇವುಗಳನ್ನು ತಡೆಯಲು ಅಮೆರಿಕ ಬಳಸುತ್ತಿರುವ ಪ್ಯಾಕ್-೩ ಪ್ರತಿಬಂಧಕದ ಬೆಲೆ ಬರೋಬ್ಬರಿ ೩೬ ಕೋಟಿ ರೂ. ಆಗಿದೆ.
ಹೀಗಿರುವಾಗ, ಇರಾನ್ ಹಾರಿಸುವ ಕ್ಷಿಪಣಿಗಳನ್ನು ತಡೆಯುವುದು ಅಮೆರಿಕದ ಪಾಲಿಗೆ ಕಷ್ಟಕರ ಹಾಗೂ ಅತಿ ದುಬಾರಿಯಾಗುತ್ತಿದೆ. ಒಂದರ ಹಿಂದೊಂದರಂತೆ ನುಗ್ಗಿಬರುವ ಎಲ್ಲಾ ಕ್ಷಿಪಣಿಗಳನ್ನು ಗುರುತಿಸಿ ಹೊಡೆಯುವುದು ಯಾವ ರಕ್ಷಣಾ ವ್ಯವಸ್ಥೆಗೂ ಸಾಧ್ಯವಿಲ್ಲವಾದ ಕಾರಣ, ಇವುಗಳಲ್ಲಿ ಕೆಲವಾದರೂ ಗುರಿಗಳನ್ನು ಧ್ವಂಸಗೊಳಿಸುವ ಸಾಧ್ಯತೆ ಇದ್ದೇ ಇರುತ್ತದೆ.
ತಮ್ಮ ನಾಯಕ ಖಮೇನಿ ಹತ್ಯೆ ಬಳಿಕ ಅಮೆರಿಕ-ಇಸ್ರೇಲ್ ವಿರುದ್ಧ ಇರಾನ್ ಸೇಡಿನ ಜ್ವಾಲೆಯಿಂದ ಕುದಿಯುತ್ತಿದೆ. ಇದೇ ಹೊತ್ತಲ್ಲಿ ತನ್ನ ಭೂಗರ್ಭ ಡ್ರೋನ್ ಶಸ್ತ್ರಾಗಾರದ ವಿಡಿಯೋ ಬಿಡುಗಡೆ ಮಾಡುವ ಮೂಲಕ ಶತ್ರುಗಳಿಗೆ ಎಚ್ಚರಿಕೆ ನೀಡಿದೆ.


























