ಅನಧಿಕೃತ ಮದ್ಯ ಮಾರಾಟ: ಬಂಧನ

ಕಲಬುರಗಿ,ಸೆ.3-ಜಿಲ್ಲಾಡಳಿತ 7ನೇ ದಿನದ ಗಣೇಶ ವಿಸರ್ಜನೆ ನಿಮಿತ್ತ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ.
ನಗರದ ಉದ್ಯಾನವನ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಬ್ರಹ್ಮಪುರ ಪೊಲೀಸ್ ಠಾಣೆ ಪಿಐ ಸೋಮಲಿಂಗ ಕಿರದಳ್ಳಿ, ಸಿಬ್ಬಂದಿಗಳಾದ ವೆಂಕಟೇಶ, ಗುರುನಾಥ, ನವೀನಕುಮಾರ ಅವರು ದಾಳಿ ನಡೆಸಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಒಂದರಲ್ಲಿ ಮ್ಯಾನೇಜರ್ ಆಗಿರುವ ನ್ಯೂ ರಾಘವೇಂದ್ರ ಕಾಲೋನಿಯ ವಿನೋದ ಗುತ್ತೇದಾರ ಎಂಬಾತನನ್ನು ಬಂಧಿಸಿ 6,855 ರೂ.ಮೌಲ್ಯದ ಮದ್ಯ ಮತ್ತು 9900 ರೂ.ನಗದು ಜಪ್ತಿ ಮಾಡಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.