
ಶ್ರಿನಗರ,ಆ.೯;ಉಗ್ರರ ಜತೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಆಪರೇಷನ್ ಅಖಾಲ್ ಕಾರ್ಯಾಚರಣೆ ೯ನೇ ದಿನವೂ ಮುಂದುವರೆದಿದ್ದು, ಕಳೆದ ರಾತ್ರಿ ನಡೆದ ಉಗ್ರರು ಹಾಗೂ ಸೇನೆಯ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಈ ಘಟನೆ ಸಂಭವಿಸಿದೆ.
ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಇದರೊಂದಿಗೆ ಗಾಯಾಳುಗಳ ಸೈನಿಕರ ಸಂಖ್ಯೆ ೧೦ಕ್ಕೇರಿದೆ.
ಹುತಾತ್ಮರಾದ ಯೋಧರನ್ನು ಲ್ಯಾನ್ಸ್‌ನಾಯಕ್ ಪ್ರಿತ್ಪಲ್‌ಸಿಂಗ್ ಮತ್ತು ಸೆಪೋಯ್‌ಅರಮಿಂದರ್ ಸಿಂಗ್ ಎಂದು ಗುರುತಿಸಲಾಗಿದೆ.
ಉಂಡಿನ ಕಾಳಗದ ವೇಳೆ ಹುತಾತ್ಮರಾದ ಈ ಇಬ್ಬರು ಸೈನಿಕರಿಗೆ ಭಾರತೀಯ ಸೇನೆ ಸಂತಾಪ ವ್ಯಕ್ತಪಡಿಸಿದ್ದು, ಉಗ್ರರೊಂದಿಗೆಹೋರಾಡಿ ವೀರ ಮರಣವನ್ನಪ್ಪಿದ ಸೈನಿಕರ ಧೈರ್ಯ ಮತ್ತು ಸಾಹಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದೆ.
ಆ. ೧ ರಂದು ಪ್ರಾರಂಭವಾದ ಈಕಾರ್ಯಾಚರಣೆಯಲ್ಲಿ ಇದುವರೆಗೂ ೫ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ನಿಖರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸೇನಾಪಡೆ ಅರಣ್ಯ ಪ್ರದೇಶದಲ್ಲಿ ಅಖಾಲ್‌ಕಾರ್ಯಾಚರಣೆಗಿಳಿದಿತ್ತು.
ಮೂವರು ಉಗ್ರಗಾಮಿಗಳು ದಟ್ಟ ಅರಣ್ಯದಲ್ಲಿ ಅಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದು ಕಾರ್ಯಾಚರಣೆಗಿಳಿದಿತ್ತು.
ಪಹಲ್ಗಾಮ್ ದಾಳಿಯ ನಂತರ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿವೆ.