Home ಕ್ರೈಂ ಸುದ್ದಿಗಳು ಇಬ್ಬರು ರೌಡಿಗಳ ಬಂಧನ:ಬಳ್ಳಾರಿ, ಮಂಗಳೂರು ಕೇಂದ್ರ ಕಾರಾಗೃಹಕ್ಕೆ ರವಾನೆ

ಇಬ್ಬರು ರೌಡಿಗಳ ಬಂಧನ:ಬಳ್ಳಾರಿ, ಮಂಗಳೂರು ಕೇಂದ್ರ ಕಾರಾಗೃಹಕ್ಕೆ ರವಾನೆ

ವಿಜಯಪುರ, ಏ. 13:ರೌಡಿ ಕಾಯ್ದೆಯಡಿ ಇಬ್ಬರು ರೌಡಿಗಳನ್ನು ವಿಜಯಪುರ ಪೆÇಲೀಸರು ಬಂಧಿಸಿದ್ದಾರೆ.
ಹಂಚಿನಾಳ ತಾಂಡಾ ನ. 1 ರ ನಿವಾಸಿ ಸುರೇಶ @ ಸಾಗರ ತಂದೆ ಲಕ್ಷ್ಮಣ ರಾಠೋಡ ಹಾಗೂ ವಿಝಯಪುರ ಗಚ್ಚಿನಮಹಲ್ ನಿವಾಸಿ ಸೈಯದಫಜಲುಲ್ಲಾ ಸೈಫುದ್ದೀನ್ ಇನಾಂದಾರ ಬಂಧಿತ ರೌಡಿಗಳು.
ರೌಡಿ ಸುರೇಶ ರಾಠೋಡ ಹಾಗೂ ಸೈಯದಫಜಲುಲ್ಲಾ ಸೈಫುದ್ದೀನ್ ಇನಾಂದಾರ
ವಿಜಯಪುರ ಆದರ್ಶನಗರ ಮತ್ತು ಗೋಲಗುಮ್ಮಜ್ ಪೆÇಲೀಸ್ ಠಾಣಾ ಸರಹದ್ದಿನಲ್ಲಿ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ.
ರೌಡಿ ಸುರೇಶ ಇತನು 1 ಕೊಲೆ, 3 ಕೊಲೆ ಪ್ರಯತ್ನ ಹಾಗೂ 10- ಭಾರತೀಯ ಆಯುಧ ಕಾಯ್ದೆ (Iಟಿಜiಚಿಟಿ ಂಡಿms ಂಛಿಣ) ಅಡಿಯಲ್ಲಿ ಹೀಗೆ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ 6 ಪ್ರಕರಣಗಳು, ಆದರ್ಶ ನಗರ ಪೆÇಲೀಸ್ ಠಾಣೆಯಲ್ಲಿ 4, ತಿಕೋಟಾ ಪೆÇಲೀಸ್ ಠಾಣೆ, ಜಲನಗರ ಪೆÇಲೀಸ್ ಠಾಣೆ, ಬಸವನ ಬಾಗೇವಾಡಿ ಪೆÇಲೀಸ್ ಠಾಣೆ ಹಾಗೂ ಸಿಂದಗಿ ಪೆÇಲೀಸ್ ಠಾಣೆಯಲ್ಲಿ ತಲಾ 1 ಸೇರಿ ಒಟ್ಟು 14 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಇತನು ತನ್ನ ಸಹಚರರೊಂದಿಗೆ ಸೇರಿಕೊಂಡು ಪದೇ ಪದೇ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜಕ್ಕೆ ಕಂಟಕಪ್ರಾಯನಾಗಿದ್ದನು.
ಸೈಯದಫಜಲುಲ್ಲಾ ಸೈಫುದ್ದೀನ್ ಇನಾಂದಾರ ಇತನು 2 ಕೊಲೆ, 1 ಕೊಲೆ ಯತ್ನ, 1 ದರೋಡೆಗೆ ಯತ್ನ ಹೀಗೆ ಗಾಂಧಿಚೌಕ ಠಾಣೆ, ಗೋಲಗುಮ್ಮಜ್ ಠಾಣೆ 1, ಜಲನಗರ ಠಾಣೆಯಲ್ಲಿ 1, ಬಬಲೇಶ್ವರ ಠಾಣೆಯಲ್ಲಿ ತಲಾ 1 ಸೇರಿ ಒಟ್ಟು 4 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಇತನು ತನ್ನ ಸಹಚರರೊಂದಿಗೆ ಸೇರಿಕೊಂಡು ಪದೇ ಪದೇ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗುತ್ತಾ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಯನ್ನು ಹಾಳುಗೆಡುವುದಲ್ಲದೇ, ಅಮಾಯಕ ಜನರ ಪ್ರಾಣಹಾನಿ ಮಾಡುತ್ತಾನೆ.
ಇವರು ನಿರಂತರವಾಗಿ ತನ್ನ ಸಮಾಜಘಾತಕ ಕೃತ್ಯಗಳನ್ನು ಮುಂದುವರಿಸಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದು, ಇವರುಗಳ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡಲು ಪೆÇಲೀಸ್ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳು ವಿಜಯಪುರ ರವರಿಗೆ ಪ್ರಸ್ತಾವನೆ ಸಲ್ಲಿಸಿದ್ದ ಆಧಾರದ ಮೇರೆಗೆ ಬಂಧನ ಆಜ್ಞೆ ಹೊರಡಿಸಿದ್ದು, ಈ ಇಬ್ಬರು ರೌಡಿಗಳನ್ನು ಜಿಲ್ಲಾಧಿಕಾರಿಗಳ ಬಂಧನ ಆದೇಶದ ಮೇರೆಗೆ ಮಂಗಳೂರು, ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ.