Home ಮುಖಪುಟ ಸುದ್ದಿ ಮದ್ಯ ಸೇವಿಸಿ ಒನ್ ವೇನಲ್ಲಿ ಚಲಾಯಿಸಿದ ಕಾರಿಗೆ ಇಬ್ಬರು ಬಲಿ

ಮದ್ಯ ಸೇವಿಸಿ ಒನ್ ವೇನಲ್ಲಿ ಚಲಾಯಿಸಿದ ಕಾರಿಗೆ ಇಬ್ಬರು ಬಲಿ

ಬೆಂಗಳೂರು,ಮಾ.೨೯- ಮದ್ಯದ ಅಮಲಿನಲ್ಲಿ ಒನ್ ವೇನಲ್ಲಿ (ಏಕಮುಖ ಸಂಚಾರ) ಅತಿವೇಗವಾಗಿ ಬಂದ ಕಾರು ಎದುರಿಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಹೈಗೌಂಡ್ಸ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವಕ್ಸ್ ಬೋರ್ಡ್ ಕಚೇರಿ ಸಮೀಪ ಸಂಭವಿಸಿದೆ.


ಮೃತರನ್ನು ಜುಬೇರ್ ಅಹಮದ್ (೪೨) ಮತ್ತು ಅಬ್ದುಲ್ ಮುನ್ನೀರ್ ಪಾಷಾ (೧೬) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಇವರಿಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.


ಅಯ್ಯಪ್ಪ ಎಂಬಾತ ಮದ್ಯ ಸೇವಿಸಿ ವೋಗ್ಸ್ ವ್ಯಾಗನ್ ಕಾರನ್ನು ಚಲಾಯಿಸುತ್ತಾ ರಸ್ತೆಯ ನಿಯಮಗಳನ್ನು ಮರೆತ ಅಯ್ಯಪ್ಪ, ವಾಹನಗಳು ಒನ್ ವೇ ರಸ್ತೆಗೆ ನುಗ್ಗಿದ್ದಾನೆ. ಅತಿವೇಗವಾಗಿ ಬಂದ ಕಾರು, ಎದುರಿನಿಂದ ನಿಯಮಬದ್ಧವಾಗಿ ಬರುತ್ತಿದ್ದ ಜುಬೇರ್ ಅಹಮದ್ ಮತ್ತು ಅಬ್ದುಲ್ ಮುನ್ನೀರ್ ಅವರ ಬೈಕ್‌ಗೆ ನೇರ ಮುಖಾಮುಖಿ ಡಿಕ್ಕಿ ಹೊಡೆದಿದೆ. ಘಟನೆ ನಡೆದ ಕೂಡಲೇ ಹೈಗೌಂಡ್ಸ್ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.


ಅಪಘಾತಕ್ಕೆ ಕಾರಣವಾದ ವೋಗ್ಸ್ ವ್ಯಾಗನ್ ಕಾರು ಚಾಲಕ ಅಯ್ಯಪ್ಪನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಆತ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಪೊಲೀಸರು ಆರೋಪಿ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.