
ವಾಷಿಂಗ್ಟನ್ / ರಿಯಾದ್, ಮಾ.೩: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಮೇಲೆ ನಡೆದ ದಾಳಿಯ ಹಿನ್ನೆಲೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ನಡುವೆಯೇ ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ಹಿಂದಿನ ನಿಲುವಿನಿಂದ ಹಿಂದೆ ಸರಿದಿದ್ದಾರೆ.
ದಾಳಿಗೆ ಶೀಘ್ರದಲ್ಲೇ ಪ್ರತೀಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಂಪ್ ಎಚ್ಚರಿಕೆ ನೀಡಿದರೂ, “ಭೂಸೇನೆ ನಿಯೋಜನೆ ಅಗತ್ಯವಿಲ್ಲದಿರಬಹುದು” ಎಂದು ತಿಳಿಸಿದ್ದಾರೆ. ಇದು ಇತ್ತೀಚೆಗೆ ಅವರು ನೀಡಿದ್ದ ಕಠಿಣ ಹೇಳಿಕೆಗೆ ವಿರುದ್ಧವಾದ ನಿಲುವಾಗಿದೆ.
ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ರಿಯಾದ್ನ ಅಮೆರಿಕ ರಾಯಭಾರಿ ಕಚೇರಿ ಮೇಲೆ ನಡೆದ ದಾಳಿ ಹಾಗೂ ಅಮೆರಿಕದ ಆರು ಯೋಧರ ಸಾವಿಗೆ ಪ್ರತಿಕ್ರಿಯೆ ನೀಡುವುದು ಅನಿವಾರ್ಯ ಎಂದು ಹೇಳಿದ್ದರು.
ಇದಕ್ಕೂ ಮೊದಲು ಇರಾನ್ ಮೇಲೆ ನಡೆಸಿದ ವಾಯುದಾಳಿಗಳ ಬಳಿಕ, ಅಗತ್ಯವಿದ್ದರೆ ಭೂಸೇನೆ ಕಳುಹಿಸಲು ಹಿಂಜರಿಯುವುದಿಲ್ಲ ಎಂದು ಟ್ರಂಪ್ ಹೇಳಿದ್ದರು. ಆದರೆ ಈಗ ಸೇನಾ ಕಾರ್ಯಾಚರಣೆಗಳನ್ನು ವಾಯು ಮತ್ತು ನೌಕಾ ಶಕ್ತಿಯ ಮೂಲಕ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ ಎಂದು ಸೂಚಿಸಿದ್ದಾರೆ.
ಅಮೆರಿಕದ ಕಾರ್ಯಾಚರಣೆಗಳ ಹೊಂದಿದ್ದ ಮುಖ್ಯ ಉದ್ದೇಶಗಳು:
ಇರಾನ್ ಕ್ಷಿಪಣಿ ಸಾಮರ್ಥ್ಯ ನಾಶ,ನೌಕಾಪಡೆ ದುರ್ಬಲಗೊಳಿಸುವುದು, ಅಣು ಕಾರ್ಯಕ್ರಮ ಸ್ಥಗಿತಗೊಳಿಸುವುದು,ಮಧ್ಯಪ್ರಾಚ್ಯದಲ್ಲಿ ಸಶಸ್ತ್ರ ಗುಂಪುಗಳಿಗೆ ನೀಡುತ್ತಿರುವ ಬೆಂಬಲ ತಡೆಯುವುದು ಎಂದು ಟ್ರಂಪ್ ಮೊದಲ ಬಾರಿಗೆ ವಿವರಿಸಿದ್ದಾರೆ. ಆದರೆ ಇರಾನ್ ಆಡಳಿತ ಪತನ ಅಮೆರಿಕದ ಗುರಿಯಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ, ಅಮೆರಿಕ ಹಾಗೂ ಇಸ್ರೇಲ್ ದಾಳಿಗಳ ಬಳಿಕ ಇರಾನ್ ತೀವ್ರ ಪ್ರತಿದಾಳಿ ನಡೆಸಿದ್ದು, ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಮುಂದುವರಿದಿವೆ. ಇರಾನ್ ಸುಪ್ರೀಂ ಲೀಡರ್ ಂಟi ಏhಚಿmeಟಿei ಸಾವಿನ ನಂತರ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ.
ಹೋರ್ಮುಜ್ ಸಮುದ್ರ ಮಾರ್ಗವನ್ನು ಬಂದ್ ಮಾಡುವ ಎಚ್ಚರಿಕೆ ನೀಡಿರುವ ಇರಾನ್, ಜಾಗತಿಕ ತೈಲ ಸರಬರಾಜಿನ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಮಾರ್ಗದ ಮೂಲಕ ವಿಶ್ವದ ಸುಮಾರು ೨೦ ಶೇಕಡಾ ತೈಲ ಸಾಗಣೆ ನಡೆಯುತ್ತದೆ.
ಮಧ್ಯಪ್ರಾಚ್ಯದ ಹಲವು ದೇಶಗಳ ವಾಯುಪ್ರದೇಶ ಮುಚ್ಚಲ್ಪಟ್ಟಿದ್ದು, ಅಂತಾರಾಷ್ಟ್ರೀಯ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.ಇದೀಗ ಅಮೆರಿಕದ ಪ್ರತೀಕಾರ ಕ್ರಮ ಯಾವ ರೂಪ ಪಡೆಯಲಿದೆ ಎಂಬುದರತ್ತ ಜಾಗತಿಕ ಸಮುದಾಯದ ಗಮನ ಕೇಂದ್ರೀಕೃತವಾಗಿದೆ.
೭೦೦ಕ್ಕೂ ಅಧಿಕ ಸಾವು: ಅಮೆರಿಕ
ಅಮೆರಿಕ ಮತ್ತು ಇಸ್ರೇಲ್ ಸೇನಾ ಪಡೆ ಇರಾನ್ ಮೇಲಿನ ಸೇನಾ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಹಲವು ತಾಣಗಳನ್ನು ಗುರಿಯಾಗಿಸಿ ಬಾಂಬ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ. ಇರಾನ್ ಕೂಡ ಪ್ರತೀಕಾರದ ದಾಳಿ ಮುಂದುವರಿಸಲು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುತ್ತಿದೆ, ದಾಳಿಯಲ್ಲಿ ೧೭೬ ಮಕ್ಕಳು ಸೇರಿದಂತೆ ೭೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ತಿಳಿಸಿದೆ.
ಇರಾನ್ನ ೧೩೧ ನಗರಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ವ್ಯವಸ್ಥೆಗಳ ಮೇಲೆ ಭಾರೀ ಪ್ರಮಾಣದಲ್ಲಿ ಅಮೆರಿಕ ಬಾಂಬ್ ದಾಳಿ ನಡೆದಿದೆ. ಇದರಲ್ಲಿ ಇರಾನ್ನ ಅಣ್ವಸ್ತ್ರ ನೆಲೆಯೂ ಬಾಂಬ್ ದಾಳಿಗೆ ತುತ್ತಾಗಿದೆ. ಎರಡೂ ಕಡೆ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ. ಈ ಮಧ್ಯೆ ಇರಾನ್ನಲ್ಲೇ ೭೦೦ ಅಧಿಕ ಸಾವು ಸಂಭವಿಸಿದೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ಧಿ ಸಂಸ್ಥೆ ಮಾಹಿತಿ ನೀಡಿದೆ.
ಇರಾನ್ನಲ್ಲಿ ೧೭೬ ಮಕ್ಕಳು ಸೇರಿ ಕನಿಷ್ಠ ೭೪೨ ನಾಗರಿಕರು ಸಾವಿಗೀಡಾಗಿದ್ದಾರೆ. ೯೦೦ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ. ಕಳೆದ ೨೪ ಗಂಟೆಗಳಲ್ಲೇ ಕನಿಷ್ಠ ೮೫ ಜನ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.






























