
ಕೆ. ಆರ್. ಪುರ,ಏ.೫- ದೂರವಾಣಿ ನಗರ ವಾರ್ಡನ ನೂತನ ಅಧ್ಯಕ್ಷ ರಮೇಶ್ ಗೌಡ ಅವರನ್ನು ವಾರ್ಡನ ಆಕಾಂಕ್ಷಿ ಪ್ರದೀಪ್ ಗೌಡ ಅವರು ಸನ್ಮಾನಿಸಿದರು.
ಸನ್ಮಾನಿಸಿ ಮಾತನಾಡಿದ ದೂರವಾಣಿನಗರ ವಾರ್ಡನ ಆಕಾಂಕ್ಷಿ ಪ್ರದೀಪ್ ಗೌಡ ಅವರು ನೂತನ ಪದಾಧಿಕಾರಿಗಳು ಪಕ್ಷದ ಬಲವರ್ಧನೆಗೆ ಶಕ್ತಿ ತುಂಬಲಿದ್ದಾರೆ ಎಂದು ಹೇಳಿದರು.
ವಾರ್ಡನ ಆಕಾಂಕ್ಷಿಯಾಗಿರುವ ನಾನು ಪಕ್ಷ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ಶ್ರದ್ದೆಯಿಂದ ಕಾರ್ಯ ನಿರ್ವಹಿಸುತ್ತಾ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬರುತ್ತಿದ್ದೆನೆ,ಜನತೆಯ ಆಶೀರ್ವಾದ ದೊರೆತಲ್ಲಿ ಮತ್ತಷ್ಟು ಸೇವೆ ಮಾಡಲು ಅವಕಾಶ ಸಿಗುತ್ತದೆ. ಶಾಸಕರಾದ ಬಿ. ಎ. ಬಸವರಾಜಣ್ಣ ಹಾಗೂ ಪಕ್ಷದ ವರಿಷ್ಠರು, ಹಿರಿಯ ಮುಖಂಡರುಗಳ ಆರ್ಶೀವಾದ ದೊರೆತಲ್ಲಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿ ಪಕ್ಷದಿಂದ ದೂರವಾಣಿನಗರ ವಾರ್ಡಿನಲ್ಲಿ ಗೆದ್ದು ಜನರ ಸೇವೆ ಮಾಡುತ್ತೇನೆ ಎಂದರು.
ಶಾಸಕರಾದ ಬಿ. ಎ. ಬಸವಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ಅವರ ಮಾರ್ಗದರ್ಶನದಲ್ಲಿ ಪಕ್ಷ ನಿಷ್ಠೆಯಾಗಿ ದುಡಿಯುತ್ತಾ ಬರುತ್ತಿದ್ದೇನೆ ಹಾಗಾಗಿ ಶಾಸಕರ ಮೆಚ್ಚುಗೆಗೆ ಪಾತ್ರರಾಗಿ ಪಕ್ಷ ಸಂಘಟನೆಗೆ ನಿಷ್ಠಾವಂತ ಕಾರ್ಯಕರ್ತರಾಗಿ ಬಿಜೆಪಿ ಯಲ್ಲಿ ಗುರುತಿಸಿಕೊಂಡಿದ್ದು ದೂರವಾಣಿ ನಗರ ವಾರ್ಡ್ ನ ಮನೆ ಮಗನಾಗಿ ಜನತೆಯ ವಿಶ್ವಾಸಗಳಿಸಿದ್ದು ಮುಂಬರುವ ಜಿಬಿಎ ಚುನಾವಣೆಯಲ್ಲಿ ಮತದಾರರು ಕೈಹಿಡಿಯುವುದರಲ್ಲಿ ಸಂಶಯವಿಲ್ಲ ಎಂದರು.
ನೂತನ ಅಧ್ಯಕ್ಷ ರಮೇಶ್ ಗೌಡ ಅವರು ಮಾತನಾಡಿ ಪಕ್ಷದ ಸಂಘಟನೆ ನನ್ನ ಮುಖ್ಯಗುರಿಯಾಗಿದ್ದು,ಪಕ್ಷ ನೀಡಿರುವ ಹುದ್ದೆಗೆ ನ್ಯಾಯ ಒದಗಿಸುವುದಾಗಿ ನುಡಿದರು.
ಈ ಸಂದರ್ಭದಲ್ಲಿ ವಾರ್ಡನ ಪ್ರಧಾನಕಾರ್ಯದರ್ಶಿಗಳಾದ ರವೀಂದ್ರನ್ ,ರಾಜೇಶ್ ಪೈ, ನಿಸಾರ್ ಅಹಮದ್ ವಾರ್ಡನ ಅಧ್ಯಕ್ಷ ರಾಮು,ಮುಖಂಡರಾದ ರಮೇಶ್,ಸಜೀವನ್ ಇದ್ದರು.






















