ಟ್ರ್ಯಾಕ್ಟರ್ ಪಲ್ಟಿ: ಎರಡು ವರ್ಷದ ಮಗು ಸೇರಿ ನಾಲ್ವರ ಸಾವು

ಜಮಖಂಡಿ,ಫೆ.21: ಪಟ್ಟಣದ ಮುಧೋಳ ದಿನ್ನಿಯ ಕಟ್ಟೆ ಮೇಲಿಂದ ಟ್ರ್ಯಾಕ್ಟರ ಪಲ್ಟಿಯಾಗಿ ಸ್ಥಳದಲ್ಲಿ ಎರಡು ವರ್ಷದ ಮಗು ಸೇರಿ 4 ಜನರು ಮೃತಪಟ್ಟಿರುವ ಘಟನೆ ಜರುಗಿದೆ. ಮೃತರನ್ನು ಮಹಾರಾಷ್ಟ್ರ ರಾಜ್ಯದ ಯೋತಮಾಳ ಜಿಲ್ಲೆಯ ಪುಸದ ತಾಲೂಕಿನ ಗೋಪವಾಡಿ ಗ್ರಾಮದ ಮನಿಷಾ ಪಾಂಡೆ (23)ಹಲಕಿ ಪಾಂಡೆ (2)ಲಕ್ಷ್ಮೀ ಚಿರಮಡಿ,(25)ರೇಖಾ ಭುಕೆ ಎಂದು ಗುರುತಿಸಲಾಗಿದೆ. ಯರಗಟ್ಟಿ ತಾಲೂಕಿನಲ್ಲಿ ಕಬ್ಬು ಕಟಾವು ಕಾರ್ಯ ಮುಗಿಸಿಕೊಂಡು ಜಮಖಂಡಿ ಮಾರ್ಗವಾಗಿ ಮರಳಿ ತಮ್ಮ ಸ್ವಗ್ರಾಮಕ್ಕೆ ಹೊಗುವ ಸಂಧರ್ಭದಲ್ಲಿ ಮುಧೋಳ ಹಿಲ್ಲ ಮೇಲೆ ಈ ಘಟನೆ ಜರುಗಿದೆ. ಮೂವರ ಆರೋಗ್ಯ ಚಿಂತಾಜನಕವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. 20ಕ್ಕೂ ಅಧಿಕ ಜನರಿಗೆ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್,ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸೈ ಅನೀಲ ಕುಂಬಾರ ಅವರ ಪೆÇೀಲಿಸ್ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ
ಟ್ರ್ಯಾಕ್ಟರ್ ಅನ್ನು ಕ್ರೇನ್ ಮೂಲಕ ಹೊರ ತೆಗೆದು ಮೃತದೇಹವನ್ನು ಶವ ಪರೀಕ್ಷೆಗಾಗಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ .