
ಕಲಬುರಗಿ,ಮಾ.5 : ಕಲಬುರಗಿಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಫ್ಯಾಮಿಲಿ ಟ್ರಸ್ಟ್, ಹಾಗೂ ಶರಣಬಸವೇಶ್ವರ ಸಂಸ್ಥಾನದ ವತಿಯಿಂದ ನಾಳೆ ( ಮಾ. 6) ಸಾಯಂಕಾಲ 6.30 ಕ್ಕೆ ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದ ಪೂಜ್ಯ ಡಾ ಶರಣಬಸವಪ್ಪ ಅಪ್ಪ ಅನುಭವ ಮಂಟಪದಲ್ಲಿ ಅಪ್ಪ ಪ್ರಶಸ್ತಿ, ಶರಣ ವೈದ್ಯ ಸೇವಾರತ್ನ ಪ್ರಶಸ್ತಿ ಪ್ರದಾನ ಹಾಗೂ ಶರಣಸತಿ ಸ್ಮರಣ ಸಂಚಿಕೆ ಲೋಕಾರ್ಪಣೆ ಸಮಾರಂಭ ಜರುಗಲಿದೆ.
ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಲಿಂ ಪೂಜ್ಯ ಡಾ ಶರಣಬಸವಪ್ಪ ಅಪ್ಪ ಅವರ ದಿವ್ಯ ಸ್ಮರಣೆ ನಡೆಯಲಿದೆ.
9ನೇ ಪೀಠಾಧಿಪತಿಗಳಾದ ದೊಡ್ಡಪ್ಪ ಅಪ್ಪ ಅವರು ಸಾನಿಧ್ಯ ವಹಿಸಲಿದ್ದಾರೆ .ಸಂಸ್ಥಾನದ ಮಹಾಮಾತೆ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ಅವರು ಪಾವನ ಸಾನಿಧ್ಯ ವಹಿಸಲಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಾರ್ಯದರ್ಶಿ ಬಸವರಾಜ ದೇಶಮುಖ ಅಧ್ಯಕ್ಷತೆ ವಹಿಸುವರು,
ಶರಣಬಸವ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ನಿರಂಜನ ವಿ. ನಿಷ್ಠಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ದಾಸೋಹ ಮತ್ತು ಮಾನವಿಯತೆ,ದಿ ಹಿಂದೂ ಪಬ್ಲಿಕೇಶನ್,ಮತ್ತು ಶರಣಗೌಡ ಪಾಟೀಲ ಪಾಳಾ, ಹಾಗೂ ಪೆÇ್ರ.ಯಶವಂತರಾಯ ಅಷ್ಠಗಿ, ಅವರ ಸಂಪಾದನಾ ಕೃತಿ ‘ಶರಣಸತಿ” ಸ್ಮರಣ ಸಂಚಿಕೆ ಲೋಕಾರ್ಪಣೆ, ಹಾಗೂ ಮುಗಳನಾಗಾವಿಯ ಪೂಜ್ಯ ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಅಪ್ಪ ಪ್ರಶಸ್ತಿ, ಹಾಗೂ 25 ಜನವೈದ್ಯರಿಗೆ ಶರಣ ವೈದ್ಯ ಸೇವಾರತ್ನ ಪ್ರಶಸ್ತಿ ಪ್ರದಾನ, ಜರುಗಲಿದೆ.
ಖ್ಯಾತ ಸಂಗೀತಗಾರ ಮಲ್ಲಿಕಾರ್ಜುನ ಎಸ್. ಮಣ್ಣೂರ ಅವರಿಗೆ ವಿಶೇಷವಾಗಿ ಗೌರವ ಸನ್ಮಾನ ನಡೆಯಲಿದೆ ಎಂದು ಶರಣಬಸವೇಶ್ವರ ಸಂಸ್ಥಾನದ ಆಡಳಿತಾಧಿಕಾರಿ ಡಾ ಅಲ್ಲಮಪ್ರಭು ದೇಶಮುಖ ಅವರು ತಿಳಿಸಿದ್ದಾರೆ.
























