
ಕಲಬುರಗಿ,ಫೆ.8-ವಿದ್ಯಾರ್ಥಿಗಳ ಜೀವನ ಯಶಸ್ವಿಯಾಗಬೇಕಾದರೆ ಸೂರ್ಯೋದಯಕ್ಕಿಂತ ಮುಂಚೆ ಎದ್ದು ಕುದರೆಯ ಓಟದಂತೆ ಪರಿಶ್ರಮಪಡಬೇಕು. ಆಶೆಗಳಿಗಾಗಿ ಬದುಕದೆ ಆದರ್ಶವಾಗಿ ಬದುಕಬೇಕೆಂದು ನಿವೃತ್ತ ಪ್ರಾಂಶುಪಾಲರಾದ ಅಂಬಣ್ಣಾ ಜೀವಣಗಿ ಹೇಳಿದರು.
ನಗರದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಉತ್ತಮ ಸಾಧನೆಯನ್ನು ಸಮಾಜ ಗೌರವಿಸಿ ಸಂಭ್ರಮಿಸಬೇಕು. ಸಮಾಜ ಗೌರವಿಸುವಂತ ಮಹಾತ್ಕಾರ್ಯಗಳನ್ನು ವಿದ್ಯಾರ್ಥಿಗಳು ಸಾಧಿಸಬೇಕೆಂದರು.
ನಂತರ ಎನ್‍ಎಸ್‍ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ್ ದೊಡ್ಡಮನಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನದ ಪಥದಲ್ಲಿ ಸಾಗಬೇಕು. ಬುದ್ಧ, ಬಸವ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಕಾಲದಲ್ಲಿ ಮೊಬೈಲ್ ಇರಲಿಲ್ಲವಾದರೂ ಅವರೆಲ್ಲರೂ ಜಗತ್ತನ್ನು ಬೆಳಗುವ ಮಹಾಪುರಷರಾದರು. ವಿದ್ಯಾರ್ಥಿಗಳು ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕು. ಮೆದುಳಿಗೆ ಜ್ಞಾನದ ರೀಚಾರ್ಜ್ ಮಾಡುತ್ತಿರಬೇಕೆಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರುಗಳಾದ ಮಲ್ಲಯ್ಯ ಮಠಪತಿ, ರೇಣುಕಾ ಚಿಕ್ಕಮೇಟಿ ಮುಂತಾದವರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭಕೋರಿದರು. ಪ್ರಾಂಶುಪಾಲರಾದ ಸುಜಾತಾ ಎಸ್. ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ನಿರಂತರವಾಗಿ ಅಭ್ಯಾಸ ಮಾಡಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಕುಟುಂಬ ಮತ್ತು ಸಮಾಜಕ್ಕೆ ಮಾದರಿಯಾಗಬೇಕೆಂದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ಉತ್ತಮ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು. ಜಿಲ್ಲಾ ಎನ್‍ಎಸ್‍ಎಸ್ ನೋಡಲ್ ಅಧಿಕಾರಿ ಪಾಂಡು ಎಲ್. ರಾಠೋಡ್ ಅವರು ಎನ್ ಎಸ್ ಎಸ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿಸಿದರು. ಉಪನ್ಯಾಸಕರಾದ ರೇಣುಕಾ ಚಿಕ್ಕಮೇಟಿ ಸ್ವಾಗತಿಸಿದರು. ಶಾರದಾ ಸುಗಂಧಿ ಪ್ರಾರ್ಥಿಸಿದರು. ಸಿದ್ದಲಿಂಗಪ್ಪ ಪೂಜಾರಿ ವಂದಿಸಿದರು. ಡಾ .ಶಿವಪ್ಪ ಹುಣಚಾಳ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಬಲರಾಮ ಚವ್ಹಾಣ್ , ಶ್ರೀಶೈಲ್ ಖುರ್ದ, ಡಾ.ಶೀಲಾವತಿ ವಾಡೇಕರ್, ವಿಜಯಲಕ್ಷ್ಮಿ ರೆಡ್ಡಿ, ರೋಹಿಣಿ ಕೆ. ಎಸ್, ನಿರ್ಮಲ, ಶಶಿಧರ್ ಭೂಸನೂರ್, ಮಹಿಬೂಬ್, ರಾಜೇಶ್ ಕೆಜೆ, ಮಲ್ಲಪ್ಪ, ಲಕ್ಷ್ಮಿಕಾಂತ್ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.























