
ಕಲಬುರಗಿ,ಮಾ.29: ಕಲಬುರಗಿ ನಗರ ಮತ್ತು ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಅಡುಗೆ ಅನಿಲ (ಐPಉ) ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದು, ಗ್ಯಾಸ್ ಮತ್ತು ಇಂಧನ ಅಭಾವವೆಂದು ಸುಳ್ಳು ಸುದ್ದಿ ಹರಡಿದಲ್ಲಿ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಲಬುರಗಿ ತಹಶೀಲ್ದಾರ ಕೆ.ಆನಂದಶೀಲ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿಗೆ ನಗರದ ತಹಸೀಲ ಕಚೇರಿಯಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶದ ಗ್ಯಾಸ್ ಏಜೆನ್ಸಿ ವಿತರಕರೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರುವ ಅವರು, ತಾಲೂಕಿನಲ್ಲಿ ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್‍ಗಳಿಗೆ ಯಾವುದೇ ಕೊರತೆ ಇಲ್ಲ. ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುಳ್ಳು ಸುದ್ದಿ ನಂಬಬಾರದು. ಇನ್ನು ಗ್ರಾಹಕರು ಯಾವುದೇ ಕಾರಣಕ್ಕೂ ಗಾಬರಿಗೊಂಡು ಅತಿಯಾಗಿ ಬುಕ್ಕಿಂಗ್ ಸಹ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.
ಕೆಲ ಗ್ರಾಹಕರು ಅನಗತ್ಯ ಆತಂಕಗೊಂಡು ಏಕಕಾಲಕ್ಕೆ IಗಿಖS ಅಥವಾ ಮಿಸ್ಡ್ ಕಾಲ್ ಮೂಲಕ ಬುಕ್ಕಿಂಗ್ ಮಾಡಲು ಪ್ರಯತ್ನಿಸುತ್ತಿರುವುದರಿಂದ ಕರೆಗಳ ಒತ್ತಡದಿಂದ ಸಿಸ್ಟಮ್ ಗಳಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿವೆ. ಹೀಗಾಗಿ ಪರ್ಯಾಯವಾಗಿ Iಔಅಐ, ಊPಅಐ ಮತ್ತು ಃPಅಐ ಕಂಪನಿಗಳ ವಾಟ್ಸಾಪ್ ಅಥವಾ ಮೊಬೈಲ್ ಆಪ್ ಮೂಲಕ ಗ್ಯಾಸ್ ಬುಕ್ಕಿಂಗ್ ಮಾಡಬಹುದಾಗಿದೆ ಎಂದಿದ್ದಾರೆ.
ಇನ್ನು ಗ್ಯಾಸ್ ಏಜೆನ್ಸಿಗಳ ಮುಂದೆ ಜನರು ಗುಂಪು ಸೇರುವುದರಿಂದ ಏಜೆನ್ಸಿಗಳ ದೈನಂದಿನ ಕೆಲಸಕ್ಕೂ ಅಡಚಣೆ ಉಂಟಾಗುತ್ತಿದೆ. ಗ್ಯಾಸ್ ಏಜೆನ್ಸಿಗಳು ಸಿಲಿಂಡರ್‍ಗಳನ್ನು ಬುಕ್ಕಿಂಗ್ ಆದ್ಯತೆಯ ಮೇರೆಗೆ ಫಿಫೆÇೀ ಮಾದರಿಯಲ್ಲಿ (ಮೊದಲು ಬುಕ್ ಮಾಡಿದವರಿಗೆ ಮೊದಲು ಸರಬರಾಜು) ನೇರವಾಗಿ ಗ್ರಾಹಕರ ಮನೆಗೆ ತಲುಪಿಸಲಿದ್ದಾರೆ. ಹೀಗಾಗಿ ಗ್ರಾಹಕರು ಸುಳ್ಳು ವದಂತಿಗಳಿಗೆ ಕಿವಿಗೊಡದೆ ತಾಲೂಕು ಆಡಳಿತದೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಅಕ್ರಮ ದಾಸ್ತಾನು ಮಾಡುವಂತಿಲ್ಲ:ಎಲ್.ಪಿ.ಜಿ, ಇಂಧನವನ್ನು ಅಕ್ರಮವಾಗಿ ದಾಸ್ತಾನು ಮಾಡುವುದು ಅಥವಾ ರೀಫಿಲ್ಲಿಂಗ್ ಮಾಡುವವರ ವಿರುದ್ಧ ಅವಶ್ಯಕ ವಸ್ತುಗಳ ಕಾಯ್ದೆ-1955, ಪೆಟ್ರೋಲಿಯಂ ಉತ್ಪನ್ನಗಳ (ಉತ್ಪಾದನೆ, ಸಂಗ್ರಹಣೆ ಮತ್ತು ಪೂರೈಕೆ) ಆದೇಶ-1999 ಹಾಗೂ ಎಲ್‍ಪಿಜಿ (ಸರಬರಾಜು ಮತ್ತು ವಿತರಣೆಯ ನಿಯಂತ್ರಣ) ಆದೇಶ-2000ರನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಹಶೀಲ್ದಾರ ಕೆ.ಆನಂದಶೀಲ ಅವರು ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ತಾಲೂಕಿನ ಗ್ಯಾಸ್ ಏಜೆನ್ಸಿಗಳ ಡೀಲರ್ ಗಳು, ತಹಸೀಲ್ದಾರ ಕಚೇರಿ ಸಿಬ್ಬಂದಿಗಳು ಇದ್ದರು.






















