ಇರಾನ್ ವಿರುದ್ಧ ಯುದ್ಧ ನಿಲ್ಲಲ್ಲ

ವಾಷಿಂಗ್ಟನ್,ಮಾ.೫- ಇಸ್ರೇಲ್ ಜೊತೆಗೆ ಇರಾನ್ ವಿರುದ್ಧ ಕಾರ್ಯಾಚರಣೆಗಳನ್ನು ಮುಂದುವರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ.

ಇರಾನ್ ವಿರುದ್ದ ಆರಂಭಿಸಿರುವ ಯುದ್ದವನ್ನು ಸದ್ಯಕ್ಕೆ ನಿಲ್ಲಿಸುವುದಿಲ್ಲ ಕನಿಷ್ಠ ೪ರಿಂದ ೫ ವಾರಗಳು ಮುಂದುವರಿಯಲಿವೆ. ಅದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಇಸ್ರೇಲ್ ಜೊತೆಗೂಡಿ ಇರಾನ್ ವಿರುದ್ದ ಯುದ್ದ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇರಾನ್ ಯುದ್ಧದಿಂದ ಕೊಲ್ಲಿ ಪ್ರದೇಶದ ಹತಾಶೆ ಹೆಚ್ಚುತ್ತಿದೆ, ಅಮೆರಿಕದ ವಿರುದ್ಧ ದೊಡ್ಡ ಆರೋಪ ಹೊರಿಸಲಾಗುತ್ತಿದೆ. ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇರಾನ್ ನಾಯಕತ್ವವನ್ನು ಸಂಪೂರ್ಣ ನಾಶಪಡಿಸಲಾಗುತ್ತಿದೆ. ಈಗ ಬಹಳ ಬಲವಾದ ಸ್ಥಾನದಲ್ಲಿದ್ದೇವೆ ಮತ್ತು ಅವರ ನಾಯಕತ್ವವನ್ನು ಹೊಸಕಿ ಹಾಕುತ್ತೇವೆ. ಟೆಹರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಶಸ್ತ್ರಾಗಾರವನ್ನು ನಾಶಪಡಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುವುದನ್ನು ತಡೆಯುವ ಗುರಿಯೊಂದಿಗೆ ಈ ದಾಳಿ ನಡೆದಿದೆ ಎಂದಿರುವ ಅವರು “ಹುಚ್ಚು ಜನರು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವಾಗ, ಕೆಟ್ಟ ವಿಷಯಗಳು ಸಂಭವಿಸುತ್ತವೆ” ಅದನ್ನು ತಡೆಯುವುದು ಅಮೆರಿಕದ ಉದ್ದೇಶ ಎಂದಿದ್ದಾರೆ.

ಅಮೆರಿಕ ಮಾಜಿ ಅಧ್ಯಕ್ಷ ಬಾರಕ್ ಒಬಾಮಾ ಅವರ ಅವಧಿಯಲ್ಲಿ ಮಾಡಿಕೊಂಡ ಪರಮಾಣು ಒಪ್ಪಂದವನ್ನು “ಇದುವರೆಗೆ ಮಾಡಿಕೊಂಡ ಅತ್ಯಂತ ಕೆಟ್ಟ ಒಪ್ಪಂದ” ಮತ್ತು “ಪರಮಾಣು ಶಸ್ತ್ರಾ೫ಡಿ೭

ಇರಾನ್ ವಿರುದ್ಧ ಯುದ್ಧ ನಿಲ್ಲಲ್ಲ

ವಾಷಿಂಗ್ಟನ್,ಮಾ.೫- ಇಸ್ರೇಲ್ ಜೊತೆಗೆ ಇರಾನ್ ವಿರುದ್ಧ ಕಾರ್ಯಾಚರಣೆಗಳನ್ನು ಮುಂದುವರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ.

ಇರಾನ್ ವಿರುದ್ದ ಆರಂಭಿಸಿರುವ ಯುದ್ದವನ್ನು ಸದ್ಯಕ್ಕೆ ನಿಲ್ಲಿಸುವುದಿಲ್ಲ ಕನಿಷ್ಠ ೪ರಿಂದ ೫ ವಾರಗಳು ಮುಂದುವರಿಯಲಿವೆ. ಅದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಇಸ್ರೇಲ್ ಜೊತೆಗೂಡಿ ಇರಾನ್ ವಿರುದ್ದ ಯುದ್ದ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇರಾನ್ ಯುದ್ಧದಿಂದ ಕೊಲ್ಲಿ ಪ್ರದೇಶದ ಹತಾಶೆ ಹೆಚ್ಚುತ್ತಿದೆ, ಅಮೆರಿಕದ ವಿರುದ್ಧ ದೊಡ್ಡ ಆರೋಪ ಹೊರಿಸಲಾಗುತ್ತಿದೆ. ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇರಾನ್ ನಾಯಕತ್ವವನ್ನು ಸಂಪೂರ್ಣ ನಾಶಪಡಿಸಲಾಗುತ್ತಿದೆ. ಈಗ ಬಹಳ ಬಲವಾದ ಸ್ಥಾನದಲ್ಲಿದ್ದೇವೆ ಮತ್ತು ಅವರ ನಾಯಕತ್ವವನ್ನು ಹೊಸಕಿ ಹಾಕುತ್ತೇವೆ. ಟೆಹರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಶಸ್ತ್ರಾಗಾರವನ್ನು ನಾಶಪಡಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುವುದನ್ನು ತಡೆಯುವ ಗುರಿಯೊಂದಿಗೆ ಈ ದಾಳಿ ನಡೆದಿದೆ ಎಂದಿರುವ ಅವರು “ಹುಚ್ಚು ಜನರು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವಾಗ, ಕೆಟ್ಟ ವಿಷಯಗಳು ಸಂಭವಿಸುತ್ತವೆ” ಅದನ್ನು ತಡೆಯುವುದು ಅಮೆರಿಕದ ಉದ್ದೇಶ ಎಂದಿದ್ದಾರೆ.

ಅಮೆರಿಕ ಮಾಜಿ ಅಧ್ಯಕ್ಷ ಬಾರಕ್ ಒಬಾಮಾ ಅವರ ಅವಧಿಯಲ್ಲಿ ಮಾಡಿಕೊಂಡ ಪರಮಾಣು ಒಪ್ಪಂದವನ್ನು “ಇದುವರೆಗೆ ಮಾಡಿಕೊಂಡ ಅತ್ಯಂತ ಕೆಟ್ಟ ಒಪ್ಪಂದ” ಮತ್ತು “ಪರಮಾಣು ಶಸ್ತ್ರಾಸ್ತ್ರಕ್ಕೆ ದಾರಿ” ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದಾರೆ.

ಇರಾನ್‌ನ ಪಾದ್ರಿಗಳ ನಾಯಕತ್ವವನ್ನು “ಸಂಪೂರ್ಣವಾಗಿ ಹತ್ತಿಕ್ಕಲಾಗುತ್ತಿದೆ” ಮತ್ತು ಇರಾನ್ ನಡೆಸುವ ಪ್ರತಿದಾಳಿಗೂ ಬಾರಿ ಬೆಲೆ ತೆತ್ತಬೇಕಾಗುತ್ತದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ನೀರಿನಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆ ಇರಾನ್ ಯುದ್ಧನೌಕೆ ಹೊಡೆದುರುಳಿಸಲಾಗಿದೆ. ಲೆಬನಾನ್‌ನಲ್ಲಿರುವ ಟೆಹ್ರಾನ್ ಮತ್ತು ಹೆಜ್ಬೊಲ್ಲಾ ನೆಲೆಗಳ ಮೇಲೆ ಹೊಸ ದಾಳಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.ಸ್ತ್ರಕ್ಕೆ ದಾರಿ” ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದಾರೆ.

ಇರಾನ್‌ನ ಪಾದ್ರಿಗಳ ನಾಯಕತ್ವವನ್ನು “ಸಂಪೂರ್ಣವಾಗಿ ಹತ್ತಿಕ್ಕಲಾಗುತ್ತಿದೆ” ಮತ್ತು ಇರಾನ್ ನಡೆಸುವ ಪ್ರತಿದಾಳಿಗೂ ಬಾರಿ ಬೆಲೆ ತೆತ್ತಬೇಕಾಗುತ್ತದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ನೀರಿನಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆ ಇರಾನ್ ಯುದ್ಧನೌಕೆ ಹೊಡೆದುರುಳಿಸಲಾಗಿದೆ. ಲೆಬನಾನ್‌ನಲ್ಲಿರುವ ಟೆಹ್ರಾನ್ ಮತ್ತು ಹೆಜ್ಬೊಲ್ಲಾ ನೆಲೆಗಳ ಮೇಲೆ ಹೊಸ ದಾಳಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.