
ಕಲಬುರಗಿ,ಡಿ.20-ಕನ್ನಡ ಪುಸ್ತಕ ಪ್ರಾಧಿಕಾರವು ಡಿ.23 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಭವನದಲ್ಲಿ “ಹಿರಿಯ ಸಾಹಿತಿಗಳಾದ ಚೆನ್ನವೀರ ಕಣವಿ ಹಾಗೂ ಪೆÇ್ರ.ಚಂದ್ರಶೇಖರ ಪಾಟೀಲ ಅವರ ಸಂಪುಟಗಳ ಲೋಕಾರ್ಪಣೆ ಹಾಗೂ ಉಚಿತ ಪುಸ್ತಕ ವಿತರಣಾ ಸಮಾರಂಭ ಮತ್ತು ಮನೆಗೊಂದು ಗ್ರಂಥಾಲಯ ಕಲಬುರಗಿ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಣೆ” ಸಮಾರಂಭವನ್ನು ಹಮ್ಮಿಕೊಂಡಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಎಚ್. ನಿರಗುಡಿ ತಿಳಿಸಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ಶಶಿಕಾಂತ ಎಸ್. ಉಡಿಕೇರಿ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡುವುದರೊಂದಿಗೆ ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹಾಗೂ ಖ್ಯಾತ ಸಾಹಿತಿಗಳಾದ ಪೆÇ್ರ.ಎಸ್.ಜಿ.ಸಿದ್ಧರಾಮಯ್ಯ ಅವರು ಕಲಬುರಗಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕಗಳನ್ನು ವಿತರಣೆ ಮಾಡಲಿದ್ದಾರೆ ಮತ್ತು ಚೆನ್ನವೀರ ಕಣವಿ ಸಮಗ್ರ ಸಾಹಿತ್ಯ ಸಂಪುಟದ ಸಂಪಾದಕರಾದ ಡಾ. ಜಿ.ಎಂ. ಹೆಗಡೆ ಅವರು ಕಲಬುರಗಿ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಣೆ ಮಾಡಲಿದ್ದಾರೆ, ಹಿರಿಯ ಸಾಹಿತಿಗಳಾದ ಡಾ.ಬಸವರಾಜ ಸಬರದ ಅವರು ಸಂಪುಟಗಳನ್ನು ಕುರಿತು ಮಾತನಾಡಲಿದ್ದಾರೆ.
ಅಲ್ಲದೆ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ನಿರ್ದೇಶಕರಾದ ಪೆÇ್ರ.ಎಚ್.ಟಿ.ಪೆÇೀತೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ, ಪೆÇ್ರ.ಚಂದ್ರಶೇಖರ ಪಾಟೀಲ ಹಾಗೂ ಚೆನ್ನವೀರ ಕಣವಿ ಅವರ ಕುಟುಂಬ ಸದಸ್ಯರುಗಳಾದ ನೀಲಾ ಪಾಟೀಲ್, ಪ್ರಿಯದರ್ಶಿ ಕಣವಿ, ಸಹ ಸಂಪಾದಕರಾದ ಡಾ.ಮಂಜುನಾಥ ಟಿ. ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ ಸದಸ್ಯರಾದ ಡಾ.ಸುರೇಶ ಜಂಗೆ, ಸಿಂಡಿಕೇಟ್ ಸದಸ್ಯರಾದ ಉದಯ ಬಿ. ಪಾಟೀಲ್ ಇವರು ಉಪಸ್ಥಿತರಿರುತ್ತಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

























