Home ಜಿಲ್ಲೆ ಬೆಂಗಳೂರು ಜನಮನ ಸೆಳೆದ ಜಲಗಾರ ನಾಟಕ ಯಶಸ್ವಿ ಪ್ರದರ್ಶನ

ಜನಮನ ಸೆಳೆದ ಜಲಗಾರ ನಾಟಕ ಯಶಸ್ವಿ ಪ್ರದರ್ಶನ

ಕೋಲಾರ,ಏ,೧೩-ಜಲಗಾರ ನಾಟಕವು ಅಸ್ಪಶ್ಯತೆ,ಪುರೋಹಿತಶಾಹಿ, ದಬ್ಬಾಳಿಕೆ ಮತ್ತು ಕೆಳವರ್ಗದ ಜನತೆಯ ಶೋಷಣೆಯನ್ನು ಬಿಂಬಿಸುತ್ತದೆ. ಶಿವನ ಪಾತ್ರದ ಮೂಲಕ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುತ್ತದೆ. ಸಮಾಜದ ಕಪಟತನವನ್ನು ಬಯಲು ಮಾಡುತ್ತದೆ ಜಾತಿಗಿಂತ ಮಾನವೀಯತೆ ಮುಖ್ಯ ಎಂಬ ಸಂದೇಶವನ್ನು ಸಾರುತ್ತದೆ.


ನಗರದ ಟಿ.ಚೆನ್ನಯ್ಯ ರಂಗ ಮಂದಿರದಲ್ಲಿ ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಮಾಲೂರಿನ ಸಾರಂಗರಂಗ ಸಹಯೋಗದಲ್ಲಿ ರಂಗ ತರಬೇತಿ ಮುಕ್ತಾಯ ಹಾಗೂ ಡಾ. ಪಿಚ್ಚಳಿ ಶ್ರೀನಿವಾಸ್ ನಿರ್ದೇಶನದ ಶ್ರೀಕುವೆಂಪು ರಚನೆಯ ಜಲಗಾರ ನಾಟಕವನ್ನು ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಕರ್ನಾಟಕ ನಾಟಕ ಅಕಾಡಮೆ ಅಧ್ಯಕ್ಷರಾದ ಕೃಷ್ಣಮೂರ್ತಿ ಅವರು ಭಾಗವಹಿಸಿದ್ದರು.


ಕನ್ನಡದ ಬಹುಮುಖಿ ಚಿಂತಕರಾದ ಕುವೆಂಪು ಅವರಿಗ ಜಾತಿ ನಿರ್ಮಿತ ಹಿಂಸೆ ಹಾಗೂ ಸಾಮಾಜಿಕ ವಾಸ್ತವಗಳು ಅವರ ಸಾಹಿತ್ಯ ಕೃತಿಗಳಲ್ಲಿ ಪದೇ ಪದೇ ಪ್ರಾಸ್ತಾಪಿತವಾಗುವಂತ ಸಾಮಾಜಿಕ ವೈರುಧ್ಯವನ್ನು ಅವರ ಜಲಗಾರ ಕೃತಿಯಲ್ಲಿ ಕಂಡು ಬರಲಿದೆ. ಸಮಾಜದಲ್ಲಿನ ಅಂಚಿಗೆ ಸರಿಸಲಾಗಿರುವ ಒಂದು ಸಮುದಾಯದ ವ್ಯಕ್ತಿಯನ್ನು ಕೇಂದ್ರಕ್ಕೆ ತಂದು ಕುವೆಂಪು ಅವರು ಸಮಕಾಲಿನ ಸಮಾಜವನ್ನು ತೀಕ್ಷ್ಣವಾಗಿ ವಿಮರ್ಶಿಸುತ್ತಾರೆ.


ಜಲಗಾರ ನಾಟಕ ಕೇವಲ ಒಂದು ಕಥೆಯಲ್ಲ ಅದು ಸಮಾಜದ ಕನ್ನಡಿಯಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಲು ಕೊಡ ಪ್ರೇರೇಪಣೆ ನೀಡುತ್ತದೆ ಒಟ್ಟಾರೆಯಾಗಿ ಜಲಗಾರ ನಾಟಕವು ಕುವೆಂಪು ಅವರ ಬರೆದಿರುವ ಈ ನಾಟಕವು ತುಂಭ ವೈಶಿಷ್ಟತೆಯಿಂದ ಕೊಡಿದ್ದು ಜನ ಮನ್ನಣೆ ಪಡೆಯುವಲ್ಲಿ ಯಶಸ್ವಿಯಾಯಿತು.


ಕಾರ್ಯಕ್ರಮದಲ್ಲಿ ಸಿ.ಮುನಿಯಪ್ಪ. ಟಿ.ವಿಜಯ ಕುಮಾರ್, ಚಂಬೆ ರಾಜೇಶ್, ಅದಿಮ ರಾಮಚಂದ್ರಪ್ಪ ಮುಂತಾದವರು ಭಾಗವಹಿಸಿದ್ದರು