ಮುಂದುವರೆದ ಅಹೋರಾತ್ರಿ ಧರಣಿ ಸತ್ಯಾಗ್ರಹ

ಜೇವರ್ಗಿ,ಫೆ.23-ತಾಲ್ಲೂಕಿನ ಹರನೂರ್ ಗ್ರಾಮ ಪಂಚಾಯತ್ ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದ ಹರನೂರ ಮತ್ತು ರೇವನೂರ ಗ್ರಾಮ ಘಟಕದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಹತ್ತನೇ ದಿನಕ್ಕೆ ಮುಂದುವರಿದಿದೆ.
ಬೆಳೆ ಪರಿಹಾರ ಸಿಗದ ರೈತರಿಗೆ ಪರಿಹಾರ ಧನ ವಿತರಿಸಬೇಕು, ವಿಮೆ ಹಣ ಬಿಡುಗಡೆ ಮಾಡಬೇಕು, ಒಳ್ಳೆಯ ಗುಣಮಟ್ಟದ ಸಂಸ್ಕರಣೆ ಮಾಡಿದ ತೊಗರಿ ಬೀಜವನ್ನು ಬರುವ ಜೂನ್ ಜುಲೈ ತಿಂಗಳಿನಲ್ಲಿ ವಿತರಿಸಬೇಕು, ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು, ಡಾ.ಸ್ವಾಮಿನಾಥನ ವರದಿ ಜಾರಿ ಮಾಡಬೇಕು, ಹೊಸದಾಗಿ ಜಾರಿಗೆ ತಂದಿರುವ 2005 ಉದ್ಯೋಗ ಖಾತ್ರಿ ಕಾಯ್ದೆಗೆ ವಿ, ಬಿ, ಜಿ, ರಾಮ್ ಜಿ ಎಂದು ಹೆಸರಿಟ್ಟಿರುವುದನ್ನು ರಂದು ಪಡಿಸಬೇಕು, 2005ರ ಉದ್ಯೋಗ ಖಾತ್ರಿ ಬಲಪಡಿಸಬೇಕು ಒಂದು ದಿನದ ಕೂಲಿ 700 ಹೆಚ್ಚಳಾಗುವಂತೆ ಒಂದು ವರ್ಷದಲ್ಲಿ 250 ದಿನಗಳು ಕೆಲಸದ ದಿನಗಳು ಹೆಚ್ಚಳ ಮಾಡಬೇಕು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು, ಗ್ರಾಮಗಳ ರಸ್ತೆಗಳ ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸತ್ಯಾಗ್ರಹ ನಡೆಸಲಾಗುತ್ತಿದೆ.
ಹೋರಾಟದಲ್ಲಿ ಸಂಘದ ತಾಲೂಕು ಅಧ್ಯಕ್ಷ ಸುಭಾಷ್ ಹೊಸಮನಿ ಮಲ್ಕಪ್ಪ ಹರನೂರು ಸಕ್ರಪ್ಪ ಮ್ಯಾಗೇರಿ ಶ್ರೀಕಾಂತ್ ದಾಸರ್ ಸತೀಶ್ ರಾಜು ಸಾತ್ ಕೇಡ ರೇವನೂರು ಬಸ್ಸಮ್ಮ ಮೇಗೇರಿ ನಾಗಮ್ಮ ಅನ್ನೂರ್ ಮಲ್ಲಮ್ಮ ಕಟ್ಟಿಮನಿ ಶಶಿಕಲಕಟ್ಟೆಮನೆ ಮಾನಪ್ಪ ಚಳಗೇರಿ ಉಸ್ಮಾನ್ ಅಲಿ ಇನಾಮ್ದಾರ್ ಇತರರು ಹಾಜರಿದ್ದರು