ಇತಿಹಾಸ ದಾಖಲಿಸುವ, ಪಸರಿಸುವ ಕಾರ್ಯ ಸಂಕಲನ ಸಮಿತಿ ಮಾಡುತ್ತಿದೆ: ಗೋಪಾಲಜಿ

ಬೀದರ್:ಜೂ.೩೦: ಇತಿಹಾಸ ನಮಗೆ ಕೆಟ್ಟ ಮತ್ತು ಒಳ್ಳೆಯ ಪರಿಣಾಮಗಳ ಅರಿವು ಮೂಡಿಸುತ್ತದೆ. ವರ್ತಮಾನದ ಕೆಲಸಗಳಿಗೆ ಮಾರ್ಗದರ್ಶನ ನೀಡುತ್ತದೆ ಹಾಗೂ ಭವಿಷ್ಯದ ಕನಸ್ಸುಗಳಿಗೆ ಜೀವ ತುಂಬುತ್ತದೆ. ಹಾಗಾಗಿ ಇತಿಹಾಸದ ಅರಿವು ಎಲ್ಲರಿಗೂ ಅತ್ಯವಶ್ಯಕವಾಗಿದೆ. ಅಂತಹ ನೈಜ ಇತಿಹಾಸ ದಾಖಲಿಸುವ ಮತ್ತು ಪಸರಿಸುವ ಕಾರ್ಯ ಇತಿಹಾಸ ಸಂಕಲನ ಸಮಿತಿ ಮಾಡುತ್ತಿರುವುದು ಶ್ಲಾಘ್ಯವಾದುದಾಗಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ರಾಷ್ಟಿçÃಯ ಕಾರ್ಯದರ್ಶಿಗಳು ಮತ್ತು ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಉಸ್ತಿವಾರಿಯಾದ ಎನ್ ಗೋಪಾಲ್‌ಜಿರವರು ಹೇಳಿದರು.
ಭಾನುವಾ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮAದಿರದಲ್ಲಿ ಹಮ್ಮಿಕೊಂಡ ಕಾರ್ಗಿಲ್ ಸೆ ಸಿಂದೂರ್ ತಕ್ ಎನ್ನುವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಸೇನೆಯಲ್ಲಿ ಸೇರುವುದು ನೌಕರಿಯಾದರೂ ಆ ನೌಕರಿ ಸೇರಿದ ನಂತರ ಅಲ್ಲಿನ ವಾತಾವರಣದಿಂದಾಗಿ ತಾನು ತನ್ನ ಮನೆತನಕ್ಕಾಗಿ ದುಡಿಯುತ್ತಿಲ್ಲ. ತನ್ನ ದೇಶಕ್ಕಾಗಿ ನದುಡಿಯುತ್ತಿದ್ದೇನೆ ಎನ್ನುವ ಭಾವ ಬರುತ್ತದೆ. ಹಾಗಾಗಿ ಸೈನಿಕರು ತಮ್ಮ ಮನೆಯ ಬೇಡಿಕೆಗಳನ್ನು ನಿರ್ಲಕ್ಷಿಸಿ ದೇಶದ ಬೇಡಿಕೆಗಳನ್ನು ಈಡೇರಿಸಲು ಮಾಡಿ ಇಲ್ಲವೇ ಮಡಿ ಹೋರಾಟ ಆರಂಭಿಸುತ್ತಾರೆ. ಅವರು ಇದಕ್ಕಾಗಿ ಊಟ ನಿದ್ರೆಯಂತಹ ವೈಯಕ್ತಿಕ ಸೌಖ್ಯ ಕೂಡ ನಿರ್ಲಕ್ಷಿಸುತ್ತಾರೆ. ಅದಕ್ಕಾಗಿ ನಾವು ವೀರ ಸೇನಾನಿಗಳ ಕಾಳಜಿ ವಹಿಸಿ ಅವರ ಕುಟುಂಬದ ಜತೆ ನಿಲ್ಲುವುದು ಸಭ್ಯ ನಾಗರಿಕರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಬೀದರ ಇತಿಹಾಸ ಸಂಕಲನ ಸಮಿತಿ ವತಿಯಿಂದ ಸೈನಿಕರ ಸ್ಮರಣೆಗಾಗಿ ಮತ್ತು ಸಮ್ಮಾನಕ್ಕಾಗಿ ಹಮ್ಮಿಕೊಂಡ ಈ ಕಾರ್ಯಕ್ರಮ ಸ್ತುತ್ಯರ್ಹವಾಗಿದೆ ಎಂದರು.
ಹಿಂದಿನ ಸರಕಾರಗಳು ಸೈನ್ಯದ ವಿಷಯದಲ್ಲಿ ದೃಢ ನಿಲುವು ತೋರ್ಪಡಿಸದೇ ಇದ್ದರಿಂದ ಬಹಳಷ್ಟು ಅನಾಹುತಗಳು ಘಟಿಸಿವೆ.ಹಾಗಾಗಿಯೇ ಕ್ರಿ.ಶ. ೧೯೬೨ರ ಚೀನಾ ಯುಧ್ಧದಲ್ಲಿ ಭಾರತ ಹಿನ್ನಡೆ ಅನುಭವಿಸಬೇಕಾಯಿತು. ಆದರೂ ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಪ್ರಾಣದ ಹಂಗು ತೊರೆದು ಅಪ್ರತಿಮ ಪರಾಕ್ರಮ ಮೆರೆದು ಭಾರತದ ಒಬ್ಬೊಬ್ಬ ಸೈನಿಕರು ಚೀನಾದ ೫೦ ಸೈನಿಕರನ್ನು ಹೊಡೆದುರುಳಿಸಿದರು. ಚೀನಾ ಹಿಮ್ಮೆಟ್ಟಿಸಬೇಕಾದರೆ ಭಾರತ ಆತ್ಮನಿರ್ಭರವಾಗಬೇಕಾದುದು ಜರೂರುಯಾಗಿದೆ ಎಂದರು.
ಭಾರತದ ಸಂಸ್ಕೃತಿಯೂ ಧರ್ಮಯುಧ್ಧದ ಪರವಾಗಿದೆ. ಇಲ್ಲಿನ ಯೋಧರು ಯುಧ್ಧದಲ್ಲಿ ಸತ್ತರೆ ಸ್ವರ್ಗ ಮೋಕ್ಷ ಪ್ರಾಪ್ತಿಯಾಗುತ್ತದೆಂದು ಹೇಳಲಾಗಿದೆ. ಮತ್ತು ಯುಧ್ಧದಲ್ಲಿ ಗೆದ್ದರೆ ರಾಜ್ಯ ಪ್ರಾಪ್ತಿಯಾಗುತ್ತದೆಂದು ಹೇಳಲಾಗಿದೆ. ಹಾಗಾಗಿಯೇ ಭಾರತ ಎಂದೆAದೂ ಧರ್ಮಯುಧ್ಧದ ಪರವಾಗಿದೆ ಹಾಗಾಗೀಯೇ ಅಪರೇಶನ್ ಸಿಂಧೂರ್‌ನಲ್ಲೂ ಉಗ್ರಗಾಮಿಗಳ ಮತ್ತು ಸೈನಿಕರ ನೆಲೆಗಳ ಮೇಲೆ ಮಾತ್ರ ಯುಧ್ಧ ಮಾಡಲಾಗಿದೆ ಎಂದರು.
ಕಾರ್ಯಕ್ರಮಲ್ಲಿ ವಿಜಯಂತ್ ಥಾಪರ್‌ರ ತಂದೆಯವರಾದ ಕರ್ನಲ್‌ವಿ,ಎನ್,. ಥಾಪರ್‌ರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತಾಡುತ್ತಾ, ವಿಜಯಂತ್ ಥಾಪರ್‌ರು ಹುತಾತ್ಮರಾದಾದ ಆತನ ಅಂತಿಮ ಸಂಸ್ಕಾರಕ್ಕೆ ಒಂದುವರೆ ಲಕ್ಷ ಜನ ಸೇರಿದರು. ಅಲ್ಲದೇ ವಿಜಯಂತ್ ಥಾಪರ್ ಮಡಿದ ಸ್ಥಳದಲ್ಲಿ ಸೈನಿಕರು ಆತನ ದೇವಾಲಯ ನಿರ್ಮಿಸಿದ್ದಾರೆ. ಭಾರತ ಸರಕಾರ ಆತನಿಗೆ ಪರಮವೀರ ಚಕ್ರ ಪ್ರಶಸ್ತಿ ನೀಡಿದೆ. ನಾನೂ ಕೂಡ ವಿಜಯಂತ್ ಥಾಪರ್ ಬಗ್ಗೆ ಪುಸ್ತಕ ಬರೆದಿದ್ದೇನೆ ಎಂದರು.
ವಿಜಯಂತ್ ಥಾಪರ್‌ರ ತಾಯಿಯವರಾದ ತೃಪ್ತಾ. ಥಾಪರ್‌ರು ಅತಿಥಿಗಳಾಗಿ ಆಗಮಿಸಿ ಮಾತಾಡುತ್ತಾ, ವಿಜಯಂತ ಥಾಪರ್ ಸ್ವದೇಶಿ ವಸ್ತುಗನ್ನು ಪ್ರಿತಿಸುತ್ತಿದ್ದ. ಉಗ್ರಗಾಮಿಗಳಿಂದ ಸಂತ್ರಸ್ಥರಾದವರ ನೆರವಿಗೆ ನಿಲ್ಲುತ್ತಿದ್ದ. ಆತನಲ್ಲಿ ಮಾನವೀಯ ಗುಣಗಳಿದ್ದವು. ಥಾಪರ್ ಕುಟುಂಬ ನಾಲ್ಕು ತಲೆಮಾರಿನಿಂದ ಸೈನ್ಯದಲ್ಲಿದೆ. ಭಾರತದ ಕುಟುಂಬಗಳು ಸಂಸ್ಕಾರಭರಿತವಾಗಲು ಮಾತಾ ಪಿತೃರು ಆದರ್ಶವಾಗಬೇಕೆಂದರು. ಶಂಈಥೀಐ ಶಿವಕುಮಾರ ಉಪ್ಪೆ, ಕೃಷ್ಣಮೂರ್ತಿ ಆರ್.ಕೋಟ್ರೇಶ, ಬಸವರಾಜ ಅಷ್ಟೂರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ರೇಖಾ ಸೌದಿ, ಗುರುದೇವರಿಂದ ದೇಶಭಕ್ತಿ ಗೀತಗಾಯನ ನಡೆಯಿತು.
ಕಾರ್ಯಕ್ರಮದಲ್ಲಿ ಗುರುದ್ವಾರ ಪ್ರಬಬಂಧಕ ಸಮಿತಿ ಅಧ್ಯಕ್ಷ ಡಾ.ಬಲಬೀರಸಿಂಗ್, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಎಮ್.ಎಸ್.ಸಿ ಮಾರುತಿರಾವ ಮೂಳೆ. ನಾಗರಾಜ ಕರ್ಪೂರ್, ಅಶೋಕಕುಮಾರ ಕರಂಜೆ ಮತ್ತಿತರರು ಇದ್ದರು.