Home ಜಿಲ್ಲೆ ಕಲಬುರಗಿ ರಂಗಭೂಮಿ ಉಳಿಸಿ-ಬೆಳೆಸುವ ಸವಾಲಿನ ಕಾರ್ಯ ಮಾಡಬೇಕಾಗಿದೆ

ರಂಗಭೂಮಿ ಉಳಿಸಿ-ಬೆಳೆಸುವ ಸವಾಲಿನ ಕಾರ್ಯ ಮಾಡಬೇಕಾಗಿದೆ

ಕಲಬುರಗಿ: ಮಾ.28:ಮಾನವ ಯಾವಾಗ ಜನ್ಮ ತಾಳಿದ್ದಾನೇಯೋ,ಅಂದಿನಿಂದ ರಂಗಭೂಮಿ ಉದಯಿಸಿದ್ದು, ಬಹು ಪುರಾತನವಾಗಿದೆ. ಆಧುನಿಕತೆ, ವಿದೇಶಿ ಸಂಸ್ಕøತಿಯ ಅನುಕರಣೆ ಮತ್ತು ಎಲೆಕ್ಟ್ರಾನಿಕ್ಸ್ ಮಾಧ್ಯಮಗಳ ಪ್ರಭಾವದಲ್ಲಿ ರಂಗಭೂಮಿ ಸಂದಿಗ್ದ ಪರಿಸ್ಥಿತಿಯಲ್ಲಿದೆ. ಜನರು ನಾಟಕಗಳನ್ನು ನೋಡುವುದು, ರಂಗಭೂಮಿ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅಗತ್ಯ. ಪ್ರಸ್ತುತ ಸಂದರ್ಭದಲ್ಲಿ ರಂಗಭೂಮಿ ಉಳಿಸಿ-ಬೆಳೆಸುವುದು ಸವಾಲಿನ ಕಾರ್ಯವಾಗಿದ್ದು, ಇದನ್ನು ಜವಾಬ್ದಾರಿಯಿಂದ ಮಾಡಬೇಕಾಗಿದೆ ಎಂದು ಜಿಲ್ಲಾ ನಾಟಕ ಬರಹಗಾರರ ಸಂಘದ ಉಪಾಧ್ಯಕ್ಷ ಹಣಮಂತರಾಯ ಮಂಗಾಣೆ ಹೇಳಿದರು.
ನಗರದ ಖಾದ್ರಿ ಚೌಕ್‍ನಲ್ಲಿನ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ‘ವಿಶ್ವ ರಂಗಭೂಮಿ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿರುವ ವರದಕ್ಷಿಣೆ, ಭಯೋತ್ಪಾದನೆ, ಅನೀತಿ, ಶೋಷಣೆ, ಮೂಢನಂಬಿಕೆ, ಕಂದಾಚಾರ, ಅಂಧಶೃದ್ಧೆಯಂತಹ ಸಮಸ್ಯೆಗಳ ಪರಿಣಾಮ ಮತ್ತು ಪರಿಹಾರಗÀಳನ್ನು ಸಮಾಜಕ್ಕೆ ನೈಜವಾಗಿ ತೋರಿಸುವ ಮೂಲಕ ಜನಜಾಗೃತಿ ಮೂಡಿಸುತ್ತವೆ. ಮಾನವೀಯ ಮೌಲ್ಯಗಳಾದ ಸಂಸ್ಕಾರ, ಸತ್ಯ, ಶಾಂತಿ, ಪ್ರೀತಿ, ಬಾಂದವ್ಯ ವೃದ್ಧಿಗೆ ನಾಟಕಗಳು ಪೂರಕವಾಗಿ ಕಾರ್ಯನಿರ್ವಹಿಸುವ ಮೂಲಕ ಸಾಮಾಜಿಕ ಪರಿವರ್ತನೆ ಮಾಡುತ್ತವೆ ಎಂದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಉತ್ತರ ಕರ್ನಾಟಕ ರಂಗಭೂಮಿಯ ತವರೂರಿದ್ದಂತೆ. ವಿಶೇಷವಾಗಿ ದೇಶಿ ಭಾಷೆಯ ನಾಟಕಗಳು ನಮ್ಮಲ್ಲಿ ಕಂಡುಬರುತ್ತವೆ. ರಂಗಭೂಮಿಯು ಸಂಸ್ಕøತಿ, ಪರಂಪರೆ ಉಳಿಸಿ, ಬೆಳೆಸುತ್ತದೆ. ನಾಟಕ ರಚನೆ ಕಷ್ಟದ ಕೆಲಸವಾಗಿದ್ದು, ನಮ್ಮ ಭಾಗದ ರಂಗಭೂಮಿ ಸಾಹಿತಿಗಳಿಗೆ ಅಂತಹ ಕಷ್ಟದ ಕೆಲಸ ಸರಳವಾಗಿ ಮಾಡುವ ಕಲೆ ಕರಗತಮಾಡಿರುವುದೇ ವಿಶೇಷವಾಗಿದೆ. ರಂಗಭೂಮಿ ನೆಡದಾಡುವ ವಿಶ್ವವಿದ್ಯಾಲಯವಾಗಿದೆ. ವಾಸ್ತವ ಸ್ಥಿತಿಯನ್ನು ದೊಡ್ಡದು ಅಥವಾ ಚಿಕ್ಕದಾಗಿ ಹೇಳದೆ, ಇರುವುದನ್ನು, ಇರುವ ಹಾಗೆಯೇ ಹೇಳುವ ರಂಗಭೂಮಿ, ಸಮಾಜದ ನೈಜ ಪ್ರತಿಬಿಂಬವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬಳಗದ ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮಸ್ಕಾನ್ ಶೇಖ್, ರುಕ್ಸಾನಾ ಪಾಟೇಲ್ ಹಾಗೂ ವಿದ್ಯಾರ್ಥಿಗಳಿದ್ದರು.