Home ಜಿಲ್ಲೆ ಕಲಬುರಗಿ ಶಿಕ್ಷಕರು ಸಮಾಜದ ಬೆನ್ನೆಲುಬು: ಡಾ ಉಮಾ ರೇವೂರ

ಶಿಕ್ಷಕರು ಸಮಾಜದ ಬೆನ್ನೆಲುಬು: ಡಾ ಉಮಾ ರೇವೂರ

ಕಲಬುರ್ಗಿ:ಮಾ.28: ಶಿಕ್ಷಕರು ಸಮಾಜದ ಬೆನ್ನೆಲುಬು, ಮಕ್ಕಳ ವ್ಯಕ್ತಿತ್ವ ರೂಪಿಸಿ ಸುಸಂಸ್ಕøತ ಹಾಗೂ ಪ್ರಬಲ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕ್ವಾಲಿಟಿ ಅಶ್ಯೂರೆನ್ಸ ಸೆಲ್ ಮುಖ್ಯಸ್ಥೆ ಡಾ ಉಮಾ ರೇವೂರ ಹೇಳಿದರು
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿಯುಸಿ ದ್ವಿತೀಯ ವರ್ಷದ ಇತಿಹಾಸ ವಿಷಯದ ಮೌಲ್ಯಮಾಪನ ಕೇಂದ್ರದಲ್ಲಿ ನಡೆದ ನಿವೃತ್ತ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸನ್ಮಾನ ಸಮಾರಂಭ ಹಾಗೂ ಮೌಲ್ಯಮಾಪನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರ.
ಅವರು ಕೇವಲ ಶಿಕ್ಷಣ ನೀಡುವುದಲ್ಲದೆ, ಮೌಲ್ಯಗಳು, ಶಿಸ್ತು, ಮತ್ತು ಜೀವನ ಕೌಶಲ್ಯಗಳನ್ನು ಕಲಿಸಿ, ವಿದ್ಯಾರ್ಥಿಗಳನ್ನು ಉಜ್ವಲ ಭವಿಷ್ಯಕ್ಕೆ ಸಜ್ಜುಗೊಳಿಸುತ್ತಾರೆ. ಶಿಕ್ಷಕರ ಕಾರ್ಯವು ದೇಶದ ಪ್ರಗತಿಗೆ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು . ಪ್ರತಿ ವರ್ಷ ನಮ್ಮ ಸಂಸ್ಥೆಯಲ್ಲಿ ನಡೆಯುವ ಯಾವುದೇ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಶಿಕ್ಷಣ ಶಿಕ್ಷಕರ ಸ್ನೇಹಿಯಾಗಿರುವ ನಮ್ಮ ಸಂಸ್ಥೆಯ ಅಧ್ಯಕ್ಷರು ಸದಾ ಬೆನ್ನೆಲುಬಾಗಿ ನಿಂತು ನಮಗೆ ಪೆÇ್ರೀತ್ಸಾಹಿಸಿ ಇಂತಹ ಎಲ್ಲ ಕಾರ್ಯಗಳು ಯಶಸ್ವಿಯಾಗಲು ಕಾರಣಿಕರ್ತರಾಗಿದ್ದಾರೆ ಎಂದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸುರೇಶ್ ಅಕ್ಕಣ್ಣವರು ಮಾತನಾಡಿ ನಮ್ಮ ಇಲಾಖೆಯ ಪ್ರತಿಯೊಂದು ಕಾರ್ಯಗಳಿಗೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯು ನಮಗೆ ತನು ಮನ ಧನದಿಂದ ಸಹಕಾರ ನೀಡುತ್ತಾ ಬಂದಿದೆ. ಸದಾ ನಮ್ಮ ಕೆಲಸಗಳಗಿ ಪೆÇ್ರೀತ್ಸಾಹಿಸುತ್ತಿರುವ ಸಂಸ್ಥೆಗೆ ಎಲ್ಲ ಮೌಲ್ಯಮಾಪಕರ ಪರವಾಗಿ ಧನ್ಯವಾದಗಳನ್ನು ತಿಳಿಸುವೆ ಎಂದು ಹೇಳಿದರು.
ಈ ಇತಿಹಾಸ ಹಾಗೂ ಅರ್ಥಶಾಸ್ತ್ರ ಮೌಲ್ಯಮಾಪನ ಕೇಂದ್ರಗಳ ಯಶಸ್ವಿಯಾಗಲು ಕಾರಣರಾದ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ ಮೋಹನ್ ರಾಜ್ ಪತ್ತಾರ ಹಾಗೂ ಉಪನ್ಯಾಸಕರದ ಐ ಕೆ ಪಾಟೀಲ್ ಕಾರ್ಯವನ್ನು ಸದಾ ಸ್ಮರಣಿಯವಾಗಿದೆ ಎಂದು ಹೇಳಿದರು. ಐ ಕೆ ಪಾಟೀಲರ ಇಲ್ಲಿಯ ಮೌಲ್ಯಮಾಪನ ಕೇಂದ್ರದಲ್ಲಿ ಭಾಗವಹಿಸಿದ ಎಲ್ಲಾ ಮೌಲ್ಯಮಾಪಕರ ಹೃದಯದಲ್ಲಿ ಹೆಸರಿನಂತೆ ಆಯ್ಕೆಯಾಗಿದ್ದಾರೆ ಎಂದರು.
ಮೌಲ್ಯಮಾಪನ ಕೇಂದ್ರದ ವೀಕ್ಷಣಾ ಧಿಕಾರಿ ದೇವನಗೌಡ ಪಾಟೀಲ್, ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗ ಅಧಿಕಾರಿಗಳಾದ ಡಾ ಚಂದ್ರಶೇಖರ್ ದೊಡಮನಿ ,ಪದವಿಪೂರ್ವ ಕಾಲೇಜು ಪ್ರಾಚಾರ್ಯ ಸಂಘ ಬೀದರ್ ಅಧ್ಯಕ್ಷರಾದ ಪ್ರಭು ಎಸ್, ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಕಲಬುರ್ಗಿಯ ಅಧ್ಯಕ್ಷರಾದ ಜೇ ಮಲ್ಲಪ್ಪ, ಬೀದರ್ ಜಿಲ್ಲಾಧ್ಯಕ್ಷರ ಓಮಾಕಾಂತ್ ಸೂರ್ಯವಂಶಿ, ಸನ್ಮಾನಿತ ಪ್ರಾಚಾರ್ಯರಾದ ಅಶೋಕ್ ಬೂದಿಹಾಳ, ಗುರುಪ್ರಸಾದ್ ಮಾತನಾಡಿದರು
ಕಾರ್ಯಕ್ರಮ ಅಧ್ಯಕ್ಷತೆಯನ್ನು ಇತಿಹಾಸ ಕೇಂದ್ರದ ಮುಖ್ಯಸ್ಥ ಪ್ರಭಾವತಿ ಪಾಟೀಲ್, ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದರು, ಕೇಂದ್ರ ಅಧಿಕಾರಿ ಡಾ ಮೋಹನ್ ರಾಜ್ ಪತ್ತಾರ, ನೋಡಲ್ ಆಫೀಸರ್ ಐ ಕೆ ಪಾಟೀಲ್ ಕಚೇರಿಯ ಅಧಿಕಾರಿಗಳಾದ ಜಯಶ್ರೀ ಪಾಟೀಲ್, ಭಗವಾನ್ ಬಿರಾದಾರ, ಓಂ ಪ್ರಕಾಶ್ ಹೆಗ್ಡೆ ಉಪಸ್ಥಿತರಿದ್ದರು ಡ ಪ್ರಭಾವತಿ ಕಾರ್ಯಕ್ರಮ ನಿರೂಪಿಸಿದರು ಶಿವರಾಜ್ ನಾಯಕ ಸ್ವಾಗತಿಸಿದರು, ದೇವೆಂದ್ರಪ್ಪ ವಂದಿಸಿದರು