
ಕಲಬುರಗಿ,ಸೆ.5: ಶಿಕ್ಷಕರು ರಾಷ್ಟ್ರ ನಿರ್ಮಾಣಕಾರರು ಎಂದು ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು. ಅವರು ಸಿಯುಕೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಅವರು ಮುಂದುವರೆದು ಮಾತನಾಡಿ ಡಾ. ಸರ್ವಪಲ್ಲಿ ರಾಧಾಕೃಷ್ಣನ ಅವರು ಒಬ್ಬ ಶ್ರೇಷ್ಠ ಶಿಕ್ಷಕರಾಗಿದ್ದರು ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ನಾವು ಆಚರಿಸುತ್ತಿದ್ದೇವೆ ಎಂದು ಅವರು ಹೇಳಿದರು.
2023-24ನೇ ಶೈಕ್ಷಣಿಕ ವರ್ಷಕ್ಕಾಗಿ ಸಿಯುಕೆಯು ಎನ್‍ಐಆರ್‍ಎಫ್ (ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕಚೌಕಟ್ಟು)ನಲ್ಲಿ 150 ರಿಂದ 200 ಶ್ರೇಣಿಯಲ್ಲಿ ಸ್ಥಾನ ಪಡೆದಿದೆ. ಶಿಕ್ಷಕರ ಕಠಿಣ ಪರಿಶ್ರಮಮತ್ತು ಸತತ ಪ್ರಯತ್ನಗಳಿಂದಾಗಿ ಇದು ಸಾಧ್ಯವಾಗಿದೆ. ಶಿಕ್ಷಕರು ವಿಶ್ವವಿದ್ಯಾನಿಲಯದ ಬೆನ್ನೆಲುಬು. ವಿಶ್ವವಿದ್ಯಾನಿಲಯದ ಅಭಿವೃದ್ಧಿಗಾಗಿನಾವು ಬಲವಾದ ಹಳೆಯ ವಿದ್ಯಾರ್ಥಿಗಳ ಜಾಲ, ನಿಯೋಜನೆ ಕೋಶ, ಅಪ್ರೆಂಟಿಸ್‍ಶಿಪ್‍ಆಧಾರಿತ ಕೋರ್ಸಗಳು, ಇಂಟರ್ನ್‍ಶಿಪ್ ಮತ್ತು ಉದ್ಯಮೆ ಮತ್ತು ಶೈಕ್ಷಣಿಕಸಹಯೋಗಗಳನ್ನು ಹೊಂದಬೇಕು ಎಂದು ಹೇಳಿದರು.
ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಪೆÇ್ರ. ಎನ್. ಸತ್ಯನಾರಾಯಣ ಅವರು ಈ ಸಂದರ್ಭದಲ್ಲಿ ಮಾತನಾಡಿದರು..
ಈ ಸಂದರ್ಭದಲ್ಲಿ ಅತ್ಯುತ್ತಮ ಪ್ರಕಟಣೆಗಳಿಗಾಗಿ ಶಿಕ್ಷಕರಾದಪೆÇ್ರ.ಶೇಷನಾಥ ಭೋಸ್ಲೆ, ಡಾ.ಸಂಜೀತ್ ಸರ್ಕಾರ್, ಡಾ.ನುರಸಿಂಗ ಚರಣ್‍ಪ್ರಧಾನ್ ಅವರನ್ನು ಸನ್ಮಾನಿಸಲಾಯಿತು.ಪುಸ್ತಕಗಳ ಪ್ರಕಟಣೆಗಾಗಿ ಡಾ.ರೋಹಿಣಾಕ್ಷ ಶ್ರೀರ್ಲಾರು, ಪೆÇ್ರ.ಎಂ.ಎ.ಅಸ್ಲಂ,ಡಾ.ಬಾಬು ಎನ್, ಡಾ.ಜಯದೇವಿ ಜಂಗಮಶೆಟ್ಟಿ ಮತ್ತು ಡಾ.ರಾಘವೇಂದ್ರ ಬೋನಾಳ್‍ರನ್ನು ಸನ್ಮಾನಿಸಲಾಯಿತು.ಪ್ರತಿಷ್ಠಿತ ಸಂಸ್ಥೆಯಿಂದ ಪ್ರಶಸ್ತಿ ಪಡೆದ ಗ್ರಂಥಪಾಲಕ ಡಾ.ಪಿ.ಎಸ್.ಕಟ್ಟಿಮನಿಹಾಗೂ ಡಾ.ಜಯದೇವಿ ಜಂಗಮಶೆಟ್ಟಿ ಅವರನ್ನು ಕೂಡ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಂಯೋಜಕ ಪೆÇ್ರ.ಆರ್.ಎಸ್.ಹೆಗಡಿ ಸ್ವಾಗತಿಸಿದರು. ಡಾ.ರಾಜೀವ್
ಜೋಶಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಡಾ.ಜಯದೇವಿ ಜಂಗಮಶೆಟ್ಟಿ,
ಡಾ.ರವಿ ಕಿರಣ್ ನಾಖೋಡ್ ಮತ್ತು ಡಾ.ಸ್ವಪ್ನಿಲ್ ಚಾಪೇಕರ್ ರಾಷ್ಟ್ರಗೀತೆ ಮತ್ತು
ನಾಡ ಗೀತೆಯನ್ನು ಹಾಡಿದರು.ಈ ಸಂದರ್ಭದಲ್ಲಿ ಪೆÇ್ರ. ಚನ್ನವೀರ್ ಆರ್.ಎಂ, ಪೆÇ್ರ. ಜಿ.ಆರ್. ಅಂಗಡಿ, ಪೆÇ್ರ.ಪರಮೇಶ್, ವಿವಿಧ ನಿಕಾಯಗಳ ಡೀನ್‍ರು, ವಿವಿಧ ವಿಭಾಗಗಳ ಮುಖ್ಯಸ್ಥರುಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.