
ಬೀದರ:ಸೆ.3:ಮಕ್ಕಳಲ್ಲಿ ಅನೇಕ ಪ್ರತಿಭೆಗಳಿವೆ. ಪೆÇ್ರೀತ್ಸಾಹಗಳಿರದ ಕಾರಣ ಮಕ್ಕಳು ಬೆಳೆಯಲು ಅನಾನೂಲ. ಇಂದಿನ ವ್ಯವಸ್ಥೆಯಲ್ಲಿ ಮಕ್ಕಳು ಎಲ್ಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಇಂಥ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆಗಳು ಅನಿವಾರ್ಯ ಎಂದು ತೋಟಗಾರಿಕೆ ಕಾಲೇಜ್ ನ ಡೀನರಾದ ಡಾ. ಎಸ್ ವ್ಹಿ ಪಾಟೀಲ ಅಭಿಪ್ರಾಯ ಪಟ್ಟರು.
ವಚನ ಚಾರಿಟೇಬಲ್ ಸೊಸೈಟಿ ವತಿಯಿಂದ ಶ್ರಾವಣ ಮಾಸ ನಿಮಿತ್ತ ಹಮ್ಮಿಕೊಂಡ ಕಂಠ ಪಾಠ, ನಿಭಂಧ, ಭಾಷಣ ಹಾಗೂ ತಪ್ಪುರಹಿತ ಕನ್ನಡ ಶುದ್ಧ ಬರಹ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಡಾ ಎಸ್ ವ್ಹಿ ಪಾಟೀಲ ಮುಂದುವರೆದು ಮಾತನಾಡುತ್ತ ವಚನಗಳು ಬದುಕಿನ ದಾರಿದೀಪ. ಹನ್ನೆರಡನೆ ಶತಮಾನದ ಬಸವಾದಿ ಶರಣರ ಕಾಯಕ ಇಡೀ ಜಗತ್ತಿಗೆ ಮಾದರಿಯಾಗಿದೆ. ಕಾಯಕವೇ ಕೈಲಾಸವಾದರೆ ಇಂದಿನ ಅನೇಕ ಸಮಸ್ಯೆಗಳು ಹೇಳ ಹೆಸರಿಲ್ಲದೆ ಮಾಯವಾಗುತ್ತವೆ.
ಪ್ರಾರಂಭದಲ್ಲಿ ಮಕ್ಕಳಿಗೆ ಕನಿಷ್ಠ ಐದಾದರೂ ವಚನ ಬರಲೇ ಬೇಕು, ಮಗು ದೊಡ್ಡದಾದ ಮೇಲೆ ಅಥವಾ ತಿಳುವಳಿಕೆ ಬಂದಮೇಲೆ ಅದು ಅರಿತುಕೊಳ್ಳುತ್ತದೆ. ಇಂದು ವಚನ ಚಾರಿಟೇಬಲ್ ಸೊಸೈಟಿ ಅವರು ಪ್ರಾಥಮಿಕ, ಪ್ರೌಢ, ಪಿಯುಸಿ, ಪದವಿ ಮಕ್ಕಳಿಗೆ ಅನುಗುಣವಾಗಿ ಸ್ಪರ್ಧೆ ಏರ್ಪಡಿಸಿ ಅವರಿಗೆಲ್ಲರಿಗೆ ಪ್ರಥಮ ಬಹುಮಾನ ರೂ.3000/, ದ್ವಿತೀಯ ಬಹುಮಾನ ರೂ.2000/ ತೃತೀಯ ಬಹುಮಾನ ರೂ.1000/ ಕೊಡುತ್ತಿರುವುದು ನಿಜವಾಗಲೂ ಶ್ಲಾಘನೀಯ ವಿಷಯವಾಗಿದೆ.
ವಚನ ಚಾರಿಟೇಬಲ್ ಸಾಮಾಜಿಕ ಕೆಲಸ ಎಲ್ಲರೂ ಮೆಚ್ಚಲೇಬೇಕೆಂದು ಹೇಳಿದರು. ಮುಖ್ಯ ಅತಿಥಿಗಳಾದ ಹಲಬರ್ಗಾ ಕೆ.ಪಿ.ಎಸ್. ಶಾಲೆಯ ಶಿಕ್ಷಕಿಯರು ಹಾಗೂ ಕವಿಗಳಾದ ಧನಲಕ್ಷ್ಮಿ ಪಾಟೀಲ ಮಾತನಾಡಿ ಮಕ್ಕಳಲ್ಲಿಯ ಸುಪ್ತ ಭಾವನೆ ಇಂಥ ಸ್ಪರ್ಧೆಗಳಿಂದ ಹೊರ ಹೊಮ್ಮಲು ಒಂದು ಪ್ರೇರಣೆ ನೀಡಬಲ್ಲದು. ಇಂದಿನ ಮಕ್ಕಳು ಮೊಬೈಲ್ ದಿಂದಾಗಿ ನೋಡಬಾರದನ್ನು ಗ್ರಹಿಸಿ ಸಂಸ್ಕೃತಿ ಹಾಳಾಗಿ ಅನೇಕ ಮಕ್ಕಳ ಜೀವನ ಜರ್ಝರಿತಗೊಂಡಿರುವುದು ನಾವು ಬಲ್ಲೆವು. ಇಂದು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯ ಪ್ರತಿಪಾದಿಸುವ ವಚನಗಳು ಪಠ್ಯಕ್ರಮದಲ್ಲಿ ಅಳವಡಿಸಿದರೆ ತುಂಬಾ ಒಳ್ಳೆಯದು. ಒಂಬತ್ತು ನೂರು ವರ್ಷಗಳ ಹಿಂದೆ ಅಕ್ಕಮಹಾದೇವಿ ಉಡುತಡಿಯಿಂದ ಬಸವ ಕಲ್ಯಾಣಕ್ಕೆ ಎಂಥ ಆತ್ಮ ವಿಶ್ವಾಸ ಇಟ್ಟು ಕೊಂಡು ಬಂದಿದ್ದು ಅರ್ಥೈಸಿಕೊಂಡರೆ ಮನ ಮೈ ರೋಮಾಂಚನಗೊಳ್ಳುತ್ತದೆಂದು ನುಡಿದರು. ಇಂಥ ಕಾರ್ಯಕ್ರಮದಿಂದ ಮಕ್ಕಳಲ್ಲಿ ಓದುವ ಹವ್ಯಾಸ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಬೇರೂರಲು ಸಾಧ್ಯ ಎಂದು ನುಡಿದರು.
ಅನುಭವ ಎಜ್ಯುಕೇಷನ್ ಆಯಿಂಡ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಲಿಂಗಾರತಿ ನಾವದಗೇರೆ ಪ್ರಾಸ್ತಾವಿಕ ಮಾತನಾಡಿ… ದಿನೇ ದಿನೇ ನಮ್ಮ ಸಂಸ್ಕೃತಿ ಹಾಳಾಗುತ್ತಿದೆ. ಪಾಲಕರಾದ ನಾವೆ ಕಾರಣರು. ನಾವೆಲ್ಲರೂ ಹೀಗೆ ಕುಳಿತರೆ ಇಡೀ ಸುಂದರ ಸಮಾಜ ಹಾಳಾಗಿ ಮಕ್ಕಳು ಅಧೋಗತಿ ತಲುಪುವುದನ್ನು ತಪ್ಪಿಸಲು ನಾವಿಂದು ಇಂಥ ವೈಚಾರಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ನುಡಿದರು.
ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ ಸುರೇಶ ಪಾಟೀಲ ಅಧ್ಯಕ್ಷತೆ ವಹಿಸಿ.. ಸಮಾನ ಮನಸ್ಕರೂ ಸೇರಿ ಕೊಂಡು ಪ್ರತಿ ತಿಂಗಳು ಅನುದಾನ ಕ್ರೋಢಿಕರಣ ಮಾಡಿಕೊಂಡು ತಕ್ಕ ಮಟ್ಟಿಗೆ ಸಮಾಜ ಕಟ್ಟುವ ಕೆಲಸದಲ್ಲಿ ಕಳೆದ ಐದು ವರ್ಷಗಳಿಂದ ನಾವೆಲ್ಲರೂ ದಾಪುಗಾಲು ಹಾಕುತ್ತಿದ್ದೇವೆ, ಸಮಾಜದ ಪ್ರತಿಯೊಬ್ಬರು ಧನಾತ್ಮಕವಾಗಿ ಸ್ಪಂದನೆ ನೀಡಿ ಪೆÇ್ರೀತ್ಸಾಹ ನೀಡುತ್ತಿರುವುದರಿಂದಲೇ ನಮ್ಮ ಸಂಸ್ಥೆ ಇಂದು ಬೆಳಕಿಗೆ ಬಂದಿದೆ, ತಮ್ಮೆಲ್ಲರ ಸಹಕಾರ ಮರೆಯಲಾಗದು ಎಂದು ನುಡಿದರು.
ಸನ್ಮಾನಿತರ ಪರವಾಗಿ ಎಂಟನೇ ವರ್ಷದ ಮಗು ಅಕ್ಕಮಹಾದೇವಿ ಬಗ್ಗೆ ಮೂರು ನಿಮಿಷದಲ್ಲಿ ಅತ್ಯುತ್ತಮ ಮಾತನಾಡಿದರು ಜೊತೆಗೆ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ಸೃಷ್ಟಿ ಸೋಮನಾಥ ಜೊನ್ನಿಕೇರಿ ಮಾತನಾಡಿ ಎಲ್ಲರಿಗೆ ಅಚ್ಚರಿಗೊಳಿಸಿದರು. ಮೊದಲಿಗೆ ವೈಜಿನಾಥ ಸಜ್ಜನಶೆಟ್ಟಿ ವಚನಗಳು ಹಾಡಿದರು. ನಿರ್ದೇಶಕರಾದ ಡಾ ಸಿ ಆರ್ ಕೊಂಡ ಸ್ವಾಗತಿಸಿದರೆ, ಸಂಗಾರೆಡ್ಡಿ ಕೊತ್ತ ನಿರೂಪಣೆ ಮಾಡಿದರೆ ದಾನಾ ಸಂತೋಷ ವಂದಿಸಿದರು.