
ಸಂಜೆವಾಣಿ ವಾರ್ತೆ,
ವಿಜಯಪುರ, ಜ. ೧೩: ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಭಕ್ತಿಭಾವ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಸ್ವಾಮಿ ವಿವೇಕಾನಂದರ ಜೀವನದ ಮೌಲ್ಯಗಳು, ರಾಷ್ಟ್ರನಿರ್ಮಾಣದ ಕುರಿತು ಅವರ ಚಿಂತನೆಗಳು ಮತ್ತು ಯುವಜನತೆಗೆ ನೀಡಿದ ಸಂದೇಶಗಳ ಮೂಲಕ. ಮಹಿಳಾ ಶಿಕ್ಷಣ ಮತ್ತು ಸಬಲೀಕರಣದ,À ಸಮಾನತೆಯ ಸಮಾಜ ನಿರ್ಮಾಣಕ್ಕೆ ಕಂಕಣಬದ್ಧರಾಗಿರಲು ಪ್ರತಿಜ್ಞೆ ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ. ಲಕ್ಷ್ಮಿದೇವಿ, ಪ್ರೊ. ಜ್ಯೋತಿ ಉಪಾಧ್ಯೆ, ಪ್ರೊ. ಎಂ.ಪಿ. ಬಳಿಗಾರ, ಪ್ರೊ. ಎಂ.ನಾಗರಾಜ, ಪ್ರೊ.ಅಶೋಕ ಸುರಪುರ, ಡಾ. ರಮೇಶ ಸೋನಕಾಂಬಳೆ, ಡಾ. ಚಂದ್ರಶೇಖರ ಮಠಪತಿ, ಡಾ.ಅಕ್ಷಯ ಯಾರ್ಡಿ, ಡಾ. ಭಾಗ್ಯಶ್ರೀ ದೊಡ್ಡಮನಿ, ವಿಶ್ವವಿದ್ಯಾಲಯದ ಅಧಿಕಾರಿಗಳು, ಬೋಧಕೇತರ, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.






























