
ಕಲಬುರಗಿ:ಮಾ.1: ಶಹಾಪೂರ ತಾಲೂಕಿನ ಶಹಾಪೂರ ವ್ಯಾಪ್ತಿಯ ಶ್ರೀ ಮಲ್ಲಿಕಾರ್ಜುನ ಮುತ್ಯಾ ಮಹಲ್ ರೋಜ ಗೋಗಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಾಲಕಿ ಜೊತೆಗಿನ ಅನುಚಿತ ವರ್ತನೆ ಆರೋಪಗಳು ಸುಳ್ಳು ಹಾಗೂ ದುರುದ್ದೇಶಪೂರ್ವಕವಾಗಿ ಸೃಷ್ಟಿಸಲಾಗಿದ್ದು, ಇರಬಹುದು ಎಂದು ಜೈ ಕನ್ನಡಿಗರ ಸೇನೆ ಶಂಕೆವ್ಯಕ್ತಪಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಜೈ ಕನ್ನಡಿಗರ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ದತ್ತು ಹೆಚ್. ಭಾಸಗಿ ಅವರು, ಮುತ್ಯಾರವರು ಸರಳ, ಸಜ್ಜನಿಕೆ ಹಾಗೂ ಸಾಮಾಜಿಕ ಬದ್ಧತೆಯಿಂದ ಗುರುತಿಸಿಕೊಂಡ ವ್ಯಕ್ತಿಯಾಗಿದ್ದು, ಅವರ ಧಾರ್ಮಿಕ ಹಾಗೂ ಸಾಮಾಜಿಕ ಏಳಿಗೆಯನ್ನು ಸಹಿಸದ ಕೆಲವು ವ್ಯಕ್ತಿಗಳು ಷಡ್ಯಂತ್ರ ರೂಪಿಸಿ ತಪ್ಪು ಚಿತ್ರಣ ಮೂಡಿಸಿರುವ ಸಾಧ್ಯತೆ ಇದೆ ಎಂದು ದತ್ತು ಅವರು, ಅನುಮಾನ ವ್ಯಕ್ತಪಡಿಸಿದ್ದು, ಮುತ್ತಾö್ಯರ ಪರವಾಗಿ ನಡೆಸಲಾಗುವುದ ಹೋರಾಟಕ್ಕೆ ಜೈ ಕನ್ನಡಿಗರ ಸೇನೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತ್ತದೆ ಎಂದು ತಿಳಿಸಿದ್ದಾರೆ.



























