
ಜೇವರ್ಗಿ:ಏ.6: ತಾಲ್ಲೂಕಿನ ಶಖಾಪೂರ ಎಸ್.ಎ. ಗ್ರಾಮದ ಚಂದ್ರಶೇಖರ ತೊನಸಳ್ಳಿ ಹಾಗೂ ಸಿದ್ರಾಮಪ್ಪ ತೊನಸಳ್ಳಿ ಅವರ ಹೊಲಕ್ಕೆ ಭಾನುವಾರ ಮಧ್ಯಾಹ್ನ ತಗುಲಿದ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿಗೆ ಸುಮಾರು 6 ಎಕರೆ ಕಬ್ಬು ಹಾಗೂ 6 ಜಮೀನಿನಲ್ಲಿ ಬೆಳೆದ ಸೀತಾಫಲ ಬೆಳೆ ಸುಟ್ಟು ಭಸ್ಮವಾಗಿದ್ದು, ಅಂದಾಜು 2 16 ಲಕ್ಷದಷ್ಟು ನಷ್ಟವಾಗಿದೆ’ ಎಂದು ರೈತರು ತಿಳಿಸಿದ್ದಾರೆ.
ಚಂದ್ರಶೇಖರ ಹಾಗೂ ಸಿದ್ರಾಮಪ್ಪ ಅವರ 6 ಎಕರೆಯಲ್ಲಿ ಬೆಳೆದ ಕಬ್ಬು ಹಾಗೂ 6 ಎಕರೆ ಸೀತಾಫಲ ಬೆಳೆ ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಸುಟ್ಟು ಹೋಗಿದೆ. ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಬ್ಬಿನ ಹೊಲದಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದ ಸೀತಾಫಲ ಹೊಲಕ್ಕೆ ವ್ಯಾಪಿಸಿ ಬೆಳೆಯಲ್ಲದೇ ಸ್ಪಿಂಕ್ಲರ್ ಪೈಪ್, ಡ್ರಿಪ್ ಪೈಪ್, ನೀರಿನ ಪೈಪ್, ಟ್ರಾಕ್ಟರ್ ಸಾಮಾನು, ಗುಡಿಸಲು ಸುಟ್ಟು ಕರಕಲಾಗಿದೆ.
ರೈತನ ಪಾಲಿಗೆ ಅನುಕೂಲವಾ-ಗಬೇಕಿದ್ದ ಬೆಳೆ ಕೈಕೊಟ್ಟ ಪರಿಣಾಮ ಇದೀಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಜೇವರ್ಗಿ ತಾಲ್ಲೂಕಿನ ತಖಾಪೂರದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ದಿಂದ ಬೆಂಕಿಗೆ ಕಬ್ಬು ಬೆಳೆ ಸುಟ್ಟಿರುವುದು
ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದರು. ಆದರೆ, ಅಷ್ಟರಲ್ಲಾಗಲೇ ಸಾಕಷ್ಟು
ನಷ್ಟ ಉಂಟಾಗಿತ್ತು ಎಂದಿದ್ದಾರೆ. ಈ ಕುರಿತು ಜೇವರ್ಗಿ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.




















