ವಿದ್ಯಾರ್ಥಿಗಳು ಸಮಾಜದ ಅಭಿವೃದ್ದಿ ಕಡೆ ಗಮನಹರಿಸಿ


ಚನ್ನಮ್ಮನ ಕಿತ್ತೂರು,ಸೆ.೫:
ನಾವು ವಿದ್ಯಾರ್ಥಿಗಳಿರುವಾಗಲೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಸಂಘಟಿತರಾಗಿ ಕೆಲಸ ಮಾಡುವುದರಿಂದ ಸಮಾಜದ ಕಡೆ ಗಮನಹರಿಸುವುದಲ್ಲದೇ ಸಮಾಜದ ಅಭಿವೃದ್ಧಿ ಕಾರ್ಯದಲ್ಲಿ ನಾವು ತೊಡಗಿಸಿಕೊಳ್ಳಬೇಕು ಹಾಗೂ ಸಮಾಜದ ಕುಂದುಕೊರತೆಗಳ ಹೇಗೆ ಬಗೆಹರಿಸಬೇಕು ಎಂಬ ನಾಯಕತ್ವ ಗುಣ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ ಎಂದು ಧಾರವಾಡದ ಸ್ವಾಮಿ ವಿವೇಕಾನಂದ ಯುತ್ ಮೂವಮೆಂಟ್ ಅಧಿಕಾರ ಕೆ.ಎಸ್.ಜಯಂತ್ ಹೇಳಿದರು.


ಪಟ್ಟಣದ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜ ವಿದ್ಯಾರ್ಥಿ ಒಕ್ಕೂಟ, ಎನ್.ಎಸ್.ಎಸ್., ಎನ್.ಸಿ.ಸಿ., ಸ್ಕೌಟ್ಸ್ ಮತ್ತು ಗೈಡ್ಸ್, ಯುತ್ ರೆಡ್ಕಾçಸ್ ಹಾಗೂ ವಿವಿಧ ವಿಭಾಗಗಳನನ್ನು ಉದ್ಘಾಟಿಸಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಬೆಳೆಯಬೇಕು. ಸಮಾಜದಲ್ಲಿಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು ವಿದ್ಯಾರ್ಥಿಗಳು ಕಾಲೇಜಿನಲ್ಲಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲುವುದರಿಂದ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಲು ಹಾಗೂ ನಾಯಕತ್ವ ಗುಣ ಬೆಳೆಸಿಕೊಳ್ಳಲು ಉತ್ತಮ ವೇದಿಕೆ. ಇದರ ಲಾಭ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಸ್ಪಂದನಾ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಮೇಜರ್ ಮೋಹನ ಅಂಗಡಿ, ಯುವಕರಿಗೆ ಸೇನೆಯಲ್ಲಿ ಸೇರಲು ಸಾಕಷ್ಟು ಸದಾವಕಾಶಗಳಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪೋಷಕರ ಕನಸು ನನಸು ಮಾಡಿ ನಂಬಿಕೆಗೆ ದ್ರೋಹ ಮಾಡದೆ. ವಿದ್ಯಾರ್ಥಿಗಳು ಒಂದೇ ಗುರಿ ಹೊಂದಿ ಅದನ್ನು ಸಾಧಿಸುವವರೆಗೆ ಛಲ ಬಿಡದೇ ಮುನ್ನುಗ್ಗಬೇಕೆಂದು ಕರೆ ನೀಡಿದರು..
ಅಧ್ಯಕ್ಷತೆವಹಿಸಿ ಮಾತನಾಡಿದ ಕಿನಾವಿವ ಸಂಘದ ಚೇರಮನ್ನ ಜಗದೀಶ ವಸ್ತçದ ವಿದ್ಯಾರ್ಥಿಗಳು ಸಮಾಜದ ಅಭಿವೃದ್ದಿ ಗಮನಹರಿಸಬೇಕು. ಯುವಕರು ಸಮಾಜದ ಆಧಾರ ಸ್ತಂಭಗಳಾಗಿದ್ದು ಸಮಾಜದಲ್ಲಿಯ ತೊಂದರೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.


ವಿದ್ಯಾರ್ಥಿ ಒಕ್ಕೂಟದ ಚೇರಮನ್ನ ಆನಂದ ಕರೆಪ್ಪನವರ ವರದಿ ವಾಚನ ಮಂಡಿಸಿ ವಿದ್ಯಾರ್ಥಿ ಒಕ್ಕೂಟ ಸದಸ್ಯರನ್ನು ಪರಿಚಯಿಸಿದರು. ಕಿನಾವಿವ ಸಂಘದ ಉಪಾಧ್ಯಕ್ಷ ಎ.ಸಿ.ಬಿಕ್ಕಣ್ಣವರ, ಗೌರವ ಕಾರ್ಯದರ್ಶಿ ಜೆ.ಎಸ್.ಬಿಕ್ಕಣ್ಣವರ, ಆಡಳಿತ ಮಂಡಳಿ ಸದಸ್ಯರಾದ ಯು.ಡಿ.ಭಾರತಿ, ಡಿ.ಎಲ್.ಪಾಟೀಲ, ಐಕ್ಯೂಎಸಿ ಚೇರಮನ್ನ ಆರ್.ಬಿ.ಹವಿನಾಳೆ ವೇದಿಕೆಯಲ್ಲಿ ಹಾಜರಿದ್ದರು.


ಸ್ವರಾಗಿಣಿ ತಂಡದಿAದ ಪ್ರಾರ್ಥನೆ ಹಾಗೂ ನಾಡಗೀತೆ ನಡೆಯಿತು. ಪ್ರಾಚಾರ್ಯ ನಾಗರಾಜ ಎಚ್.ಕೆ ಸ್ವಾಗತಿಸಿದರು. ಸಿ.ಎಮ್.ಗರಗದ ವಿದ್ಯಾರ್ಥಿ ಒಕ್ಕೂಟದ ಪ್ರತಿನಿಧಿಗಳನ್ನು ಪರಿಚಯಿಸಿದರು, ಹೊನ್ನರಾಜು ಎಸ್.ವ್ಹಿ. ವಂದಿಸಿದರು, ಡಾ. ಸಂಗೀತಾ ತೋಲಗಿ ಕಾರ್ಯಕ್ರಮ ನಿರೂಪಿಸಿದರು.