ರಾಜ್ಯಮಟ್ಟದ ರೋಲ್‍ಬಾಲ್: ಎಸ್‍ಆರ್‍ಎನ್. ಮೆಹತಾ ಶಾಲೆ ರಾಜ್ಯ ದಕ್ಷಿಣ ವಲಯ ಮಟ್ಟಕ್ಕೆ ಆಯ್ಕೆ

ಕಲಬುರಗಿ,ಸೆ.3:ನಗರದ ಎಸ್. ಆರ್. ಎನ್. ಮೆಹತಾ ಶಾಲೆಯ ವಿದ್ಯಾರ್ಥಿಗಳು 8ನೇ ಕರ್ನಾಟಕ ರಾಜ್ಯ
ಮಟ್ಟದ ರೋಲ್‍ಬಾಲ್ 2025 ಚಾಂಪಿಯನ್ ಶಿಪ್‍ನಲ್ಲಿ ದ್ವಿತೀಯ ಸ್ಥಾನ ಪಡೆದು ಕರ್ನಾಟಕ ದಕ್ಷಿಣ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ರೋಲ್‍ಬಾಲ್ ಅಸೋಸಿಯೇಶನ್‍ರವರು ಧಾನವಿನ್ ಕ್ಲಬ್ ಪಣತೂರು ಬೆಂಗಳೂರಿನಲ್ಲಿ
ಆಯೋಜಿಸಿದ್ದ 8ನೇ ಕರ್ನಾಟಕ ರಾಜ್ಯ ಮಟ್ಟ ರೋಲ್‍ಬಾಲ್ ಚಾಂಪಿಯನ್ ಶಿಪ್‍ಪಂದ್ಯದಲ್ಲಿ ಎಸ್. ಆರ್. ಎನ್. ಮೆಹತಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿ ಕೇರಳದ ಕೋಲಂನಲ್ಲಿ ನಡೆಯಲಿರುವ ಕರ್ನಾಟಕ ದಕ್ಷಿಣ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
17 ವರ್ಷದ ಒಳಗಿನ ಬಾಲಕರ ಸ್ಪರ್ಧೆಯಲ್ಲಿ ಶ್ರೇಯಸ್ಸ ಸಕ್‍ಪಾಲ ದ್ವಿತೀಯ ಸ್ಥಾನ, ಶಷೇಂದ್ರ ಆರ್ ದ್ವಿತಿಯ ಸ್ಥಾನ, ಸೃಜನ ಡಿ ದ್ವಿತಿಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯಟ್ರಸ್ಟಿಗಳಾದ ಚಕೋರ ಮೆಹತಾ, ಪ್ರಾಚಾರ್ಯರಾದ ಪ್ರೀತಿಮೆಹತಾ, ದೈಹಿಕ ಶಿಕ್ಷಣದ ವಿಭಾಗ ಮುಖ್ಯಸ್ಥ ಬಸವರಾಜ ತಳಕೇರಿ,ಸ್ಕೇಟಿಂಗ್ ತರಬೇತಿದಾರ ಗಣೆಶ ಕಾಂದೆ ಹಾಗೂ ಶಿಕ್ಷಕ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.