
ಕಲಬುರಗಿ,ಏ.4-ಜಿಲ್ಲೆಯ ಎಸ್‍ಆರ್‍ಎನ್ ಮೆಹತಾ ಸಿಬಿಎಸ್‍ಇ ಶಾಲೆಯು ನಾಸಾ ಎಎಂಇಎಸ್ ಸಂಶೋಧನಾ ಕೇಂದ್ರ ಹಾಗೂ ನ್ಯಾಷನಲ್ ಸ್ಪೇಸ್ ಸೊಸೈಟಿ (ಎನ್‍ಎಸ್‍ಎಸ್) ಆಯೋಜಿಸಿದ್ದ ಪ್ರತಿಷ್ಠಿತ ಸ್ಪೇಸ್ ಸೆಟಲ್‍ಮೆಂಟ್ ಡಿಸೈನ್ ಕಾಂಟೆಸ್ಟ್ 2026ರ 8ನೇ ತರಗತಿ ವಿಭಾಗದಲ್ಲಿ ವಿಶ್ವದ ಪ್ರಥಮ ಬಹುಮಾನವನ್ನು ಪಡೆದು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ತಂದಿದೆ ಎಂದು ಎಸ್‍ಆರ್‍ಎನ್ ಮೆಹತಾ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಪ್ರೀತಂ ಮೆಹತಾ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಚಕೋರ ಮೆಹತಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ನಡೆದ ಸ್ಪರ್ಧೆಯಲ್ಲಿ 31 ದೇಶಗಳಿಂದ 23,919 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್‍ಆರ್‍ಎನ್ ಮೆಹತಾ ಸಿಬಿಎಸ್‍ಇ ಶಾಲೆಯಿಂದ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಅವುಗಳಲ್ಲಿ ‘ಎಸ್‍ಓಎ” ಎಂಬ ವಿಶ್ವ ವಿಜೇತ ಯೋಜನೆ ಆರು ಪ್ರತಿಭಾವಂತ ವಿದ್ಯಾರ್ಥಿಗಳ ತಂಡದಿಂದ ಅಭಿವೃದ್ಧಿ ಪಡಿಸಲಾಯಿತು. ಈ ಯೋಜನೆ ಭವಿಷ್ಯ ನೋಟ, ಹೊಸತನ ಮತ್ತು ವೈಜ್ಞಾನಿಕ ನಿಖರತೆಯೊಂದಿಗೆ ಸೂಕ್ತವಾದ ಬಾಹ್ಯಾಕಾಶ ವಸತಿ ವಿನ್ಯಾಸವನ್ನು ಪ್ರದರ್ಶಿಸಿದೆ.
ಈ ಮಹತ್ವದ ಸಾಧನೆಯಿಂದಾಗಿ ವಿದ್ಯಾರ್ಥಿಗಳಿಗೆ ಇಂಟರನ್ಯಾಷನಲ್ ಸ್ಪೇಸ್ ಡೆವಲ್ಪಮೆಂಟ್ ಕಾನ್ಪರೆನ್ಸ್ (ಐಎಸ್‍ಡಿಸಿ) 2026ರಲ್ಲಿ ತಮ್ಮ ಯೋಜನೆಯನ್ನು ಪ್ರಸ್ತುತಪಡಿಸಲು ವಿಶೇಷ ಆಹ್ವಾನ ಲಭಿಸಿದೆ. ಈ ಸಮ್ಮೇಳನವು ಯುಎಸ್‍ಎ ವಾಷಿಂಗ್‍ಟನ್ ಡಿ.ಸಿ.ಮೆಟ್ರೋಪಾಲಿಟಿನ್ ಪ್ರದೇಶದಲ್ಲಿ ಜೂನ್ 4 ರಿಂದ 7ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳು ತಮ್ಮ ಯೋಜನೆಯನ್ನು ಪೆÇೀಸ್ಟರ್ ಪ್ರಸ್ತುತಿ ಹಾಗೂ ಮೌಖಿಕ ಪ್ರಸ್ತುತಿಯ ಮೂಲಕ ಸುಮಾರು 250-270 ಜಾಗತಿಕ ಬಾಹ್ಯಾಕಾಶ ವಿಜ್ಞಾನಿಗಳು ಮತ್ತು ಗಣ್ಯರ ಮುಂದೆ ಮಂಡಿಸಲಿದ್ದಾರೆ.
ಎಸ್‍ಆರ್‍ಎನ್ ಮೆಹತಾ ಶಾಲೆ ಮತ್ತು ಕಾಲೇಜುಗಳ ನಿರ್ವಹಣಾ ಮಂಡಳಿ ಈ ಸಾಧನೆಗಾಗಿ ಎಲ್ಲಾ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಸಮರ್ಪಿತ ಶಿಕ್ಷಕರು ಮತ್ತು ಬೆಂಬಲ ನೀಡಿದ ಪೆÇೀಷಕರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ ಎಂದು ತಿಳಿಸಿದರು.
ಎಸ್.ಆರ್.ಎನ್ ಮೆಹ್ತಾ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ನ ಮ್ಯಾನೇಜಿಂಗ್ ಟ್ರಸ್ಟಿ ಚಕೋರ್ ಮೆಹ್ತಾ, ಎಸ್.ಆರ್.ಎನ್ ಮೆಹ್ತಾ ಸಿಬಿಎಸ್‍ಇ ಪ್ರಿನ್ಸಿಪಾಲ್ ವೈ.ಎಸ್.ಆರ್ ರೆಡ್ಡಿ ಮತ್ತು ಸಾಧಕ ವಿದ್ಯಾರ್ಥಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಜಿಲ್ಲೆಯ ಎಸ್‍ಆರ್‍ಎನ್ ಮೆಹತಾ ಸಿಬಿಎಸ್‍ಇ ಶಾಲೆಯ ವಿದ್ಯಾರ್ಥಿಗಳಾದ ಅರಾನ್ ಉತ್ತರಕರ್, ಆಂಶಿಕ ಪಾಟೀಲ, ಚಂದ್ರವೀರ ದತ್ತ, ಶ್ರೀಪಾದ ರೆಡ್ಡಿ, ವೈಷ್ಣವಿ ಕೊರಳ್ಳಿ, ಶ್ರೇಯಾಸ್ ಬಿರಾದಾರ ಅವರು ಶಾಲೆಯ ಪ್ರಾಂಶುಪಾಲರಾದ ರಾಜಶೇಖರ್ ರೆಡ್ಡಿಯವರ ಮಾರ್ಗದರ್ಶನದೊಂದಿಗೆ ನಾಸಾ ಎಎಂಇಎಸ್ ಸಂಶೋಧನಾ ಕೇಂದ್ರ ಹಾಗೂ ನ್ಯಾಷನಲ್ ಸ್ಪೇಸ್ ಸೊಸೈಟಿ (ಎನ್‍ಎಸ್‍ಎಸ್) ಆಯೋಜಿಸಿದ್ದ ಪ್ರತಿಷ್ಠಿತ ಸ್ಪೇಸ್ ಸೆಟಲ್‍ಮೆಂಟ್ ಡಿಸೈನ್ ಕಾಂಟೆಸ್ಟ್ 2026ರ 8ನೇ ತರಗತಿ ವಿಭಾಗದಲ್ಲಿ ವಿಶ್ವದ ಪ್ರಥಮ ಬಹುಮಾನವನ್ನು ಪಡೆದು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ತಂದಿದ್ದಾರೆ.
-ಪ್ರೀತಂ ಮೆಹತಾ,
ಮ್ಯಾನೇಜಿಂಗ್ ಡೈರೆಕ್ಟರ್, ಎಸ್‍ಆರ್‍ಎನ್ ಮೆಹತಾ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್





















