Home ಜಿಲ್ಲೆ ಕಲಬುರಗಿ ಕೆ ಎಚ್ ಬಿ ಗ್ರೀನ್ ಪಾರ್ಕ್ ನಲ್ಲಿ ಸೃಷ್ಟಿ ಪಾಟೀಲಗೆ ಸನ್ಮಾನ

ಕೆ ಎಚ್ ಬಿ ಗ್ರೀನ್ ಪಾರ್ಕ್ ನಲ್ಲಿ ಸೃಷ್ಟಿ ಪಾಟೀಲಗೆ ಸನ್ಮಾನ

ಕಲಬುರಗಿ:ಏ.12:ಕಲ್ಯಾಣ ಕರ್ನಾಟಕ ಪರಿಶ್ರಮವಾದಿಗಳ ಫಲವತ್ತಾದ ಭೂಮಿಯಾಗಿದೆ ಎಂದು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ರಾಜ್ಯಕ್ಕೆ ರ್ಯಾಂಕ್ ಬಂದ ಕಲಬುರ್ಗಿಯ ಕುವರಿ ಕುಮಾರಿ ಸೃಷ್ಟಿ ಮಲ್ಲಿನಾಥ ಪಾಟೀಲ ಹೇಳಿದರು. ಕಲಬುರಗಿ ನಗರದ ಸಂತೋಷ ಕಾಲೋನಿಯ ಕೆಎಚ್ ಬಿ ಗ್ರೀನ್ ಪಾರ್ಕ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಡಾವಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ನಮ್ಮಲ್ಲಿ ಸೌಲಭ್ಯಗಳು ಕಡಿಮೆ ಇದ್ದರೂ, ನಮ್ಮ ಕನಸುಗಳು ದೊಡ್ಡದಾಗಬೇಕು.ನನ್ನ ತಂದೆ-ತಾಯಿಯ ತ್ಯಾಗ, ಗುರುಗಳ ಮಾರ್ಗದರ್ಶನ ಇಲ್ಲದೆ ನಾನು ಇಲ್ಲಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ನಾನು ಎದುರಿಸಿದ ಪ್ರತಿಯೊಂದು ಕಷ್ಟವೂ ನನಗೆ ಪಾಠವಾಯಿತು.
ನಾನು ಹೇಳಬೇಕಾದದ್ದು ಇಷ್ಟೆ ಪರಿಸ್ಥಿತಿ ಹೇಗಿದ್ದರೂ, ನಿಮ್ಮ ಕನಸುಗಳನ್ನು ಬಿಡಬೇಡಿ. ನಿಮ್ಮ ಪರಿಶ್ರಮವೇ ನಿಮ್ಮ ಭವಿಷ್ಯವನ್ನು ನಿರ್ಮಿಸುತ್ತದೆ ಎಂದು ಹೇಳಿದರು. ಸಂಘದ ಅಧ್ಯಕ್ಷರಾದ ಸಂಜೀವಕುಮಾರ ಶೆಟ್ಟಿ, ಶಿಕ್ಷಣ ಪ್ರೇಮಿ ಸಂಗಮೇಶ ಸರಡಗಿ, ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀನಿವಾಸ ಬುಜ್ಜಿ, ಬಸವರಾಜ ಹೆಳವಾರ, ದಿಲೀಪಕುಮಾರ ಭಕ್ರೆ, ಸಂಜೀವಕುಮಾರ ಮಡ್ದೆ, ಬಸವರಾಜ ಕೊರಳ್ಳಿ, ಸೂರ್ಯಕಾಂತ ಸಾವಳಗಿ, ಹಣಮಂತ ಪೂಜಾರಿ,ಸಾಯಿ ಟೇಲರ ಸೇರಿದಂತೆ ಅನೇಕ ಜನ ಭಾಗವಹಿಸಿದರು.ಇದೆ ಸಂದರ್ಭದಲ್ಲಿ ಕು.ಶ್ರಷ್ಟಿ ಪಾಟೀಲ ಹಾಗೂ ಅವರ ತಾಯಿಯಾದ ಸವಿತಾ ಪಾಟೀಲರಿಗೆ ಸನ್ಮಾನಿಸಲಾಯಿತು.