
ಬೆಂಗಳುರು,ಆ.೩೦- ಶ್ರೀಗಂಧ ಕಾವಲು ಕ್ಲಸ್ಟರ್ ಮಟ್ಟದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ನಗರದ ಸುಂಕದಕಟ್ಟೆ, ಶ್ರೀನಿವಾಸನಗರದ ಅಂಜಲಿ ಕಾನ್ವೆಂಟ್ ಮತ್ತು ನೈಟಿಂಗೇಲ್ ಪ್ರೌಢಶಾಲೆ ವಾಲಿಬಾಲ್ ಮತ್ತು ಥ್ರೋಬಾಲ್ ನಲ್ಲಿ ಕ್ಲಸ್ಟರ್ ಮಟ್ಟದ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪ್ರೌಢಶಾಲೆಯ ಬಾಲಕರು ವಾಲಿಬಾಲ್ ಮತ್ತು ಥ್ರೋಬಾಲ್ ನಲ್ಲಿ ಪ್ರಥಮ, ಬಾಲಕಿಯರು ಥ್ರೋಬಾಲ್ ನಲ್ಲಿ ಪ್ರಥಮ ಬಹುಮಾನಗಳಿಸಿಕೊಂಡಿರುತ್ತಾರೆ. ಅಲ್ಲದೆ, ಪ್ರಾಥಮಿಕ ವಿಭಾಗದ ಬಾಲಕಿಯರು ವಾಲಿಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದು ಈ ಎಲ್ಲಾ ನಾಲ್ಕು ತಂಡಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಸಂದರ್ಭದಲ್ಲಿ ವಿಜೇತ ತಂಡಗಳ ಜೊತೆಗೆ ತರಬೇತುದಾರರಾದ ಅಭಿಷೇಕ್, ಹರ್ಷ ಎಲ್, ಮೋಹಿತ್ ನಾಯಕ್, ಲಿಖಿತ್, ಕ್ರೀಡಾ ಶಿಕ್ಷಕರಾದ ರವೀಂದ್ರ ಹಾಗೂ ತನುಜ, ತಂಡದ ವ್ಯವಸ್ಥಾಪಕರಾದ ಲಕ್ಷ್ಮಿ ಹಾಗೂ ಕೆ ಜಿ ವಿಶ್ವೇಶ್ವರಯ್ಯ ಹಾಗೂ ಎಲ್ಲಾ ಶಿಕ್ಷಕ-ಶಿಕ್ಷಕೇತರ ವರ್ಗದವರನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್. ಜಿ. ಗೌಡ, ಕಾರ್ಯದರ್ಶಿ ಎಂ. ಎಸ್. ಸರಳ ಹಾಗೂ ಪ್ರಾಂಶುಪಾಲರಾದ ಡಾ.ಬಿ. ಕೃಷ್ಣೇಗೌಡ ರವರು ಅಭಿನಂದಿಸಿದ್ದಾರೆ.
ಇದೇ ರೀತಿ ತಾಲೂಕು ಮಟ್ಟದಲ್ಲಿಯೂ ವಿಜೇತರಾದರೆ ನಗದು ಬಹುಮಾನದ ಮೂಲಕ ಸನ್ಮಾನಿಸಲಾಗುವುದೆಂದು ಪ್ರಾಂಶುಪಾಲ ಡಾ. ಬಿ. ಕೃಷ್ಣೇಗೌಡರು ತಿಳಿಸಿದರು.