
ಕೊಲ್ಹಾರ: ಅ.29:ಮಗುವಿನ ಸರ್ವೋತುಮುಖ ಬೆಳವಣಿಗೆಗೆ ಕ್ರೀಡೆಯ ಅವಶ್ಯಕತೆಯಿದೆ ಎಂದು ವಕೀಲರಾದ ಸದಾನಂದ ನಿಂಗನೂರು ಹೇಳಿದರು.
ತಾಲ್ಲೂಕಿನ ಮಲಘಾಣ ಗ್ರಾಮದ ನೇತಾಜಿ ಸುಭಾಸ ಚಂದ್ರ ಬೋಸ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಮಸೂತಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾನಾಡಿದ ಅವರು, .ಕ್ರೀಡೆಯಲ್ಲಿ ಭಾಗವಹಿಸುವ ಪ್ರತಿಯೊಂದು ಮಗು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿ ಬೆಳೆಯಲು ಸಾಧ್ಯ. ಆದ್ದರಿಂದ ಪಾಲಕರು ಮತ್ತು ಶಿಕ್ಷಕರು ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ತಿಳಿಸಿದರು.
ಗ್ರಾಮದ ಹಿರಿಯರಾದ ಎಸ್ ಎಸ್ ಗರಸಂಗಿ ಮಾತನಾಡಿ, ಮಕ್ಕಳಿಗೆ ಕ್ರೀಡೆಯ ಮಹತ್ವದ ಬಗ್ಗೆ ಅರಿವು ಇರಬೇಕು ಕ್ರೀಡೆಯಲ್ಲಿ ಮುಂದೆ ಬರುವ ಮಗು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿ ಶಾಲೆಯ ಮುಖ್ಯ ಶಿಕ್ಷಕ ಜಿ ಎಸ್ ಗಣಿಯವರ ಮಾತನಾಡಿ, ನಾವು ಶಾಲೆಯಲ್ಲಿ ಪಾಠದ ಜೊತೆಗೆ ಕ್ರೀಡೆಗೂ ಕೂಡಾ ಹೆಚ್ಚಿನ ಆದ್ಯತಯನ್ನು ನೀಡುತಿದ್ದೇವೆ. ನಮ್ಮ ಶಾಲೆಯ ಬಾಲಕರು ಸತತವಾಗಿ ನಾಲ್ಕನೇ ಬಾರಿ ವಾಲಿಬಾಲ ಹಾಗೂ ಥ್ರೋ ಬಾಲದಲ್ಲಿ ಮೂರನೇ ಬಾರಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರು ಕಬಡ್ಡಿ, ವ್ಹಾಲಿಬಾಲ್ ದಲ್ಲಿ ದ್ವಿತೀಯ ಸ್ಥಾನ, ಥ್ರೋ ಬಾಲ್ ದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಶಾಲೆಯ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಅವರೆಲ್ಲರಿಗೂ ಅಭಿನಂದನೆಗಳು ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಮಲಘಾಣ ಗ್ರಾಮದ ಎಚ್ಚಯ್ಯ ಹಿರೇಮಠ ಹಾಗೂ ಸದಾನಂದ ಮಹಾರಾಜರು ವಹಿಸಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀ ಮಾದರ ಕ್ರೀಡಾ ದ್ವಜಾರೋಹಣ ನೆರವೇರಿಸಿದರು .ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಜಿ ಎಸ್ ಗಣಿಯವರ ವಹಿಸಿದ್ದರು.ಎಸ್ ಡಿ ಎಂ ಸಿ ಅಧ್ಯಕ್ಷ ಶಂಕರ ಕೋಲಕಾರ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಅತಿಥಿಗಳಾಗಿ ಎಸ್ ಎಸ್ ಗರಸಂಗಿ, ಸದಾನಂದ ನಿಂಗನೂರ,ಗ್ರಾ ಪಂ ಮಾಜಿ ಅಧ್ಯಕ್ಷ ಅಶೋಕ ನಿಂಗನೂರ ಹಾಗೂ ಗ್ರಾಮ ಪಂಚಾಯತ ಸರ್ವ ಸದಸ್ಯರು, ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಶಿಕ್ಷಕರಾದ ಎಸ್ ಎಂ ಕರನಾಳ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಪಾಟೀಲ ಸ್ವಾಗತಿಸಿದರು, ಶಿಕ್ಷಕ ಒಂಕಾರೆಪ್ಪಗೊಳ ವಂದಿಸಿದರು.