ಪಾಲಿಕೆ ವಿರೋಧ ಪಕ್ಷದ ನಾಯಕಿಯಾಗಿ ಶೋಭಾ ದೇಸಾಯಿ ಅಧಿಕಾರ ಸ್ವೀಕಾರ

ಕಲಬುರಗಿ,ಆ.30-ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ 52ನೇ ವಾರ್ಡ್‍ನ ಪಾಲಿಕೆ ಸದಸ್ಯೆ ಶೋಭಾ ಗುರುರಾಜ ದೇಸಾಯಿ ಅವರು ಇಂದು ಅಧಿಕಾರ ಸ್ವೀಕರಿಸಿದರು.
ಆ ಮೂಲಕ ಪಾಲಿಕೆ ಮೇಯರ್, ಉಪಮೇಯರ್, ವಿರೋಧ ಪಕ್ಷದ ನಾಯಕ ಹುದ್ದೆಗಳು ಮಹಿಳೆಯರ ಪಾಲಾದಂತಾಗಿದೆ.
ಮಹಾನಗರ ಪಾಲಿಕೆ ಆಯುಕ್ತ ಶಿಂಧೆ ಅವಿನಾಶ್ ಸಂಜೀವನ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ ಸೇರಿದಂತೆ ಬಿಜೆಪಿ ಮುಖಂಡರು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.