ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಶರಣಬಸವ ವಿಶ್ವವಿದ್ಯಾಲಯ

ಕಲಬುರಗಿ;ಅ.18: ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಲಯದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರು, ವಿಧಿವಶರಾದ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಭಾವಚಿತ್ರಕ್ಕೆ ಪೂಜೆ ಮಾಡಿ, ಪುಷ್ಪನಮನ ಸಲ್ಲಿಸಿ ಗೌರವಾರ್ಥವಾಗಿ ಶ್ರದ್ಧಾಂಜಲಿಗಳನ್ನು ಅರ್ಪಿಸಿದರು.
ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ, ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ, ಕುಲಸಚಿವ(ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ, ವಿವಿಯ ವಿವಿಧ ವಿಭಾಗದ ಡೀನರು, ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಲಿಂಗೈಕ್ಯ ಪೂಜ್ಯ ಡಾ. ಅಪ್ಪಾಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಇದಕ್ಕೂ ಮೊದಲು, ಶರಣಬಸವ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ಸಂತಾಪ ಸಭೆಯಲ್ಲಿ ಡಾ. ಅಪ್ಪಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್ ತಮ್ಮ ಭಾಷಣದಲ್ಲಿ ಭಾವುಕರಾಗಿ, ಸಂಘದ ವಿವಿಧ ಕಾಲೇಜುಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಶಿವೈಕ್ಯರಾದ ಡಾ. ಅಪ್ಪಾಜಿಯವರೊಂದಿಗಿನ ತಮ್ಮ ನಾಲ್ಕು ದಶಕಗಳ ಸಂಬಂಧವನ್ನು ನೆನಪಿಸಿಕೊಂಡರು.
ಡಾ. ಡೊಳ್ಳೇಗೌಡರ್ ಮಾತನಾಡಿ, ಪರಿಪೂರ್ಣತಾವಾದಿಯಾಗಿದ್ದ ಪೂಜ್ಯ ಡಾ. ಅಪ್ಪಾಜಿಯವರ ಶ್ರೇಷ್ಠ ವೃತ್ತಿಜೀವನವನ್ನು ಸ್ಮರಿಸಿದರು, ಅವರು ಪ್ರತಿಯೊಂದು ಶಿಕ್ಷಣ ಸಂಸ್ಥೆ ಮತ್ತು ಶರಣಬಸವ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಲು ಸಂಘದ ಪ್ರತಿಯೊಬ್ಬರನ್ನೂ ತೊಡಗಿಸಿಕೊಂಡಿದ್ದರು. “ಪೂಜ್ಯ ಡಾ. ಅಪ್ಪಾಜಿಯವರು ಸಂಘ ಮತ್ತು ಶರಣಬಸವ ವಿಶ್ವವಿದ್ಯಾಲಯ ನಡೆಸುವ ಶಿಕ್ಷಣ ಸಂಸ್ಥೆಗಳ ಪ್ರತಿಯೊಬ್ಬ ಶಿಕ್ಷಕ ಮತ್ತು ಬೋಧಕೇತರ ಸಿಬ್ಬಂದಿಯಿಂದ ಅತ್ಯುತ್ತಮವಾದದ್ದನ್ನು ಪಡೆಯುವ ಕೌಶಲ್ಯವನ್ನು ಹೊಂದಿದ್ದರು” ಎಂದರು.
ಡಾ. ಅಪ್ಪಾಜಿಯವರು, ಬೇರೆಯವರ ವ್ಯಕ್ತಿತ್ವದ ಸಾಮಥ್ರ್ಯವನ್ನು ಗುರುತಿಸುವ ಅಪರೂಪದ ಗುಣವನ್ನು ಹೊಂದಿದ್ದರು ಮತ್ತು ಅವರಿಗೆ ಸೂಕ್ತವಾದ ಜವಾಬ್ದಾರಿಯನ್ನು ವಹಿಸುತ್ತಿದ್ದರು. “ಡಾ. ಅಪ್ಪಾಜಿ ನಿಜವಾದ ಪ್ರಜಾಪ್ರಭುತ್ವವಾದಿಯಾಗಿದ್ದರು ಮತ್ತು ಸಂಸ್ಥೆಯ ಪ್ರತಿಯೊಬ್ಬರನ್ನು ಎಲ್ಲಾ ನಿರ್ಧಾರ ತೆಗೆದುಕೊಳ್ಳುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ತಿಳಿಸಿದರು.
ವಿವಿಯ ಡೀನ್ ಡಾ. ಲಕ್ಷ್ಮಿ ಪಾಟೀಲ್ ಮಾಕಾ ತಮ್ಮ ಭಾಷಣದಲ್ಲಿ, ಪೂಜ್ಯ ಡಾ. ಅಪ್ಪಾಜಿ 17 ವರ್ಷಗಳ ಹಿಂದೆ ನನ್ನ ತಂದೆ ನಿಧನರಾದಾಗ ಗೊತ್ತಾಗಿರಲಿಲ್ಲ, ಈಗ ಅಪ್ಪಾಜಿಯವರು ನಿಧನರಾದ ಮೇಲೆ ನಿಜವಾಗಲು ತಂದೆಯನ್ನು ಕಳೆದುಕೊಂಡಂತಾಗಿದೆ. ಅಪ್ಪಾಜಿಯವರು ತಮ್ಮ ಕೊನೆಯ ದಿನದವರೆಗೆ ನನಗೆ ಮಾರ್ಗದರ್ಶನ ನೀಡಿದರು ಎಂದು ಹೇಳಿದರು. “ನನ್ನ ಪಿಯುಸಿ ನಂತರ, ವೈದ್ಯಕೀಯ ಸೀಟು ಸಿಗದ ಕಾರಣ ನಾನು ಕಾಲೇಜಿನಲ್ಲಿ ಆಯುರ್ವೇದ ಕೋರ್ಸ್‍ಗೆ ಪ್ರವೇಶ ಪಡೆದಿದ್ದೆ ಮತ್ತು ಅವರಿಗೆ ವೈದ್ಯಕೀಯ ಸೀಟು ಪಡೆಯಲು ಡಾ. ಅಪ್ಪಾಜಿಯನ್ನು ಸಂಪರ್ಕಿಸಿದ್ದೆ….. ನಿನಗೆ ವೈದ್ಯಕೀಯ ಸೀಟು ಸಿಗುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಡಾ. ಅಪ್ಪಾಜಿ ನನಗೆ ಹೇಳಿದರು ಮತ್ತು ಇಂಜಿನಿಯರಿಂಗ್ ಕೋರ್ಸ್‍ಗೆ ಸೇರಲು ಆದೇಶಿಸಿದ್ದು ಅದು ನನ್ನ ಜೀವನವನ್ನೇ ಬದಲಾಯಿಸಿತು ಎಂದರು”.
ನನ್ನ ಇಂಜಿನಿಯರಿಂಗ್ ಕೋರ್ಸ್ ಮುಗಿಸಿದ ನಂತರ, ನಾನು ಎಂಬಿಎ ಸೇರಲು ಬಯಸಿದ್ದೆ, ಆದರೆ ಮತ್ತೆ ಡಾ. ಅಪ್ಪಾಜಿ ನನ್ನನ್ನು ಎಂ.ಟೆಕ್ ಸೇರಲು ಹೇಳಿದರು, ಅದು ನನ್ನ ಜೀವನದಲ್ಲಿ ಮತ್ತೊಂದು ತಿರುವು, ನಂತರ ನಾನು ಡಾ. ಅಪ್ಪಾಜಿಯವರ ಸಲಹೆಯ ಮೇರೆಗೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಸೇರಿಕೊಂಡೆ. ಆಗ ಕಾಲೇಜಿನಲ್ಲಿ ಅಪ್ಪಾಜಿಯವರು ನನ್ನನ್ನು ಹಾಗೂ ನನ್ನ ಅಭ್ಯಾಸವನ್ನು ಗಮನಿಸುತ್ತಿದ್ದರು. ಅವರು ನನ್ನ ತಂದೆಯಂತೆಯೇ ನನ್ನ ಭವಿಷ್ಯಕ್ಕೆ ಮಾರ್ಗದರ್ಶನ ನೀಡಿದ್ದಾರೆ ಎಂದು ಡಾ. ಲಕ್ಷ್ಮಿ ಹೇಳಿದರು.
ವಿಶ್ವವಿದ್ಯಾಲಯದ ನಿರ್ದೇಶಕ ಪೆÇ್ರ. ವಿ. ಡಿ. ಮೈತ್ರಿ ಕೂಡ ಈ ಸಂದರ್ಭದಲ್ಲಿ ಮಾತನಾಡಿದರು. ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ, ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ, ವಿಶ್ವವಿದ್ಯಾಲಯದ ಎಲ್ಲಾ ಅಧ್ಯಾಪಕರು, ಡೀನರು ಮತ್ತು ಮುಖ್ಯಸ್ಥರು ಸೇರಿದಂತೆ ಇತರ ಪ್ರಮುಖರು ಅಪ್ಪಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.