
ಕಲಬುರಗಿ,ಸೆ.7: ನಗರದ ಶಹಾಬಜಾರ ಶ್ರೀ ರಾಮ ಮಂದಿರ ಗಣೇಶ ಮಂಡಳಿ ವತಿಯಿಂದ ಸ್ಥಾಪಿಸಲಾದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.
ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆ ಎತ್ತಿನ ಬಂಡಿಯ ಮೇಲೆ ಗಣೇಶ, ಕುದುರೆಗಳ ಮೇಲೆ ಶಿವಾಜಿ ಮಹಾರಾಜ, ಲೋಕಮಾನ್ಯ ತಿಲಕ್, ವೀರ ಸಾವರ್ಕರ್, ಜಿಜಾಮಾತಾ, ಕಿತ್ತೂರು ರಾಣಿ ಚನ್ನಮ್ಮ ಈ ರೀತಿಯ ಮಕ್ಕಳಿಗೆ ಅವತರಿಸಲಾಯಿತು .ಹಾಗೂ ದೇಸಿ ವಾದ್ಯಗಳ ಜೊತೆ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಶ್ರೀ ರಾಮ ಮಂದಿರ ಗಣೇಶ ಮಂಡಳದ ಅಧ್ಯಕ್ಷ ಮಹೇಶ್ ಚವಾಣ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ರಾಜು ಪಂಚಾಬಾಯಿ, ಶಶಿಧರ ಜೋಶಿ, ಶ್ರೀಕಾಂತ್, ಕಿರಣ, ಮನೋಹರ, ರೋಹಿತ, ಅಕ್ಷಯ, ನರೇಶ, ಶುಭಂ, ಚೇತನ ಹಾಗೂ ಇತರ ಪ್ರಮುಖರು ಹಾಜರಿದ್ದರು