
ಮುಂಬೈ,ಏ.೩-ಹಾಲಿವುಡ್ ಚಲನಚಿತ್ರ ನಿರ್ಮಾಪಕರಿಗೆ ಭಾರತೀಯ ಪುರಾಣಗಳ ಬಗ್ಗೆ ಅಪಾರ ಆಕರ್ಷಣೆ ಇದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಸ್ವತಃ ಒಂದು ಸಂದರ್ಶನದಲ್ಲಿ “ಹಾಲಿವುಡ್ ನಿರ್ದೇಶಕ ಟೋನಿ ಸ್ಕಾಟ್ ಒಮ್ಮೆ ಹನುಮಂತನ ಮೇಲೆ ಚಿತ್ರ ನಿರ್ಮಿಸಬೇಕು ಎಂದು ಬಯಸಿದ್ದರು ಜಗತ್ತಿನಲ್ಲಿ ಸೂಪರ್‌ಮ್ಯಾನ್ ಅಥವಾ ಬ್ಯಾಟ್‌ಮ್ಯಾನ್‌ನಂತಹ ಯಾವುದೇ ಸೂಪರ್‌ಹೀರೋ ಇಲ್ಲದಿದ್ದಾಗ, ಭಾರತದಲ್ಲಿ ಹನುಮಾನ್ ಎಂಬ ಸೂಪರ್‌ಹೀರೋ ಇದ್ದರು, ಅವರನ್ನು ಅವರು ವಿಶ್ವ ಪರದೆಗೆ ತರಲು ಇಚ್ಛೆಸಿದ್ದರು. ಅದಕ್ಕಾಗಿ ಅವರು ನನಗೆ ಆ ಚಿತ್ರದಲ್ಲಿ ಹನುಮಂತನ ಪಾತ್ರಕ್ಕಾಗಿ ನನ್ನ ಸಂಪರ್ಕಿಸಿದಾಗ ಆ ಸಮಯದಲ್ಲಿ ನಾನು ಆ ಚಿತ್ರವನ್ನು ತಿರಸ್ಕರಿಸಿದೆ ಏಕೆಂದರೆ ನನಗೆ ಆಗ ಸಮಯದಲ್ಲಿ ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ.ಆ ಸಮಯದಲ್ಲಿ, ನನ್ನ ಇಂಗ್ಲಿಷ್ ಹಾಲಿವುಡ್‌ನಲ್ಲಿ ಕೆಲಸ ಮಾಡಲು ಸಾಕಾಗುತ್ತಿರಲಿಲ್ಲ, ಆದ್ದರಿಂದ ನಾನು ಟೋನಿ ಸ್ಕಾಟ್ ಅವರ ಆಫರ್ ನಿರಾಕರಿಸಿದೆ” ಎಂದು ಶಾರುಖ್ ಬಹಿರಂಗಪಡಿಸಿದ್ದಾರೆ.
ಭಾರತೀಯ ಪುರಾಣಗಳ ಬಗ್ಗೆ ಹಾಲಿವುಡ್‌ನ ಆಕರ್ಷಣೆಯನ್ನು ಸಹ ಅವರು ವಿವರಿಸಿದ್ದಾರೆ.
ವಿಶೇಷವೆಂದರೆ ಭಾರತೀಯ ಸಂಸ್ಕೃತಿಯು ಪ್ರಪಂಚದಾದ್ಯಂತ ವಿಶೇಷ ಆಕರ್ಷಣೆಯನ್ನು ಹೊಂದಿದೆ. ನಮ್ಮ ಪೌರಾಣಿಕ ಪಾತ್ರಗಳನ್ನು ಆಧರಿಸಿ ವಿದೇಶಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತದೆ ಎಂಬುದು ಭಾರತೀಯ ಸಂಸ್ಕೃತಿಗೆ ನಿಜಕ್ಕೂ ಹೆಮ್ಮೆಯ ವಿಷಯ.




















