
ಕಲಬುರಗಿಫೆ 22: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ್ದರಿಂದ ನಗರದ ಅಪರ ಜಿಲ್ಲಾ ಮತ್ತು ಸತ್ರ ( ವಿಶೇಷ ಪೊಕ್ಸೋ ) -ಎಫ್ ಟಿ ಎಸ್ ಸಿ -1 ನ್ಯಾಯಾಲಯವು ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 1.5 ಲಕ್ಷ ರೂ ದಂಡ ವಿಧಿಸಿದೆ.
ಸೇಡಂ ತಾಲೂಕಿನ ಮುಧೋಳ ಠಾಣಾ ವ್ಯಾಪ್ತಿಯ ಗ್ರಾಮವೊಂದರ ನಿವಾಸಿ ದೇವರಾಜ ತಿಮ್ಮಪ್ಪ ವಡ್ಡರ ( 20) ಶಿಕ್ಷೆಗೊಳಗಾದ ಯುವಕ.2025 ರ ಏಪ್ರಿಲ್ 26 ರಂದು ಆರೋಪಿಯು ಅಪ್ರಾಪ್ತೆಯನ್ನು ಬೈಕ್ ಮೇಲೆ ಅಪಹರಿಸಿಕೊಂಡು ಹೋಗಿ ಹೊಲದಲ್ಲಿ ನಂತರ ಹೈದರಾಬಾದ್‍ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸದಿದ್ದ.ಈ ಕುರಿತು ದಾಖಲಾದ ದೂರನ್ನು ಪರಿಗಣಿಸಿ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ( ವಿಶೇಷ ಪೊಕ್ಸೋ ) ನ್ಯಾಯಾಲಯ-ಎಫ್ ಟಿ ಎಸ್ ಸಿ -1 ನ್ಯಾಯಾಧೀಶರಾದ ಮಹ್ಮದ ಮುಜೀರ ಉಲ್ಲಾ ಅವರು ಶಿಕ್ಷೆಯನ್ನು ನೀಡಿ ಆದೇಶಿಸಿದ್ದಾರೆ.ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬೀ ತುಪ್ಪದ ಅವರು ವಾದ ಮಂಡಿಸಿದ್ದರು



























