
ಸೈದಾಪುರ : ಫೆ.20:ಕಳೆದ ಒಂದು ವರ್ಷದಿಂದ ಸೈದಾಪುರ ಪೆÇಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸರಣಿ ಕುರಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಸೈದಾಪುರ ಪೆÇಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಕಳವು ಮಾಡಿದ ಕುರಿಗಳ ಮೌಲ್ಯ ಒಟ್ಟು 4,80,000 ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ವಂಕಸಂಬ್ರಾ ಗ್ರಾಮದ ನಿವಾಸಿ ತಾಯಪ್ಪ ತಂದೆ ರಾಮಪ್ಪ ಹುಲಿಬ್ಯಾಟಿ ಎಂಬುವವರು ಫೆಬ್ರವರಿ 1, 2026 ರಂದು ಸೈದಾಪುರ ಪೆÇಲೀಸ್ ಠಾಣೆಗೆ ಹಾಜರಾಗಿ ತಮ್ಮ ಜಾನುವಾರುಗಳ ಕಳ್ಳತನದ ಬಗ್ಗೆ ದೂರು ನೀಡಿದ್ದರು. ಈ ದೂರಿನ ಬೆನ್ನತ್ತಿದ ಪೆÇಲೀಸರು ತನಿಖೆ ಕೈಗೊಂಡಾಗ ಜಿಲ್ಲೆಯ ಹಲವು ಗ್ರಾಮಗಳಲ್ಲಿ ನಡೆದಿದ್ದ ಸರಣಿ ಕಳ್ಳತನಗಳು ಬೆಳಕಿಗೆ ಬಂದಿವೆ. ಆರೋಪಿಯು ವಂಕಸಂಬ್ರಾ ಗ್ರಾಮದ ₹70,000 ಮೌಲ್ಯದ 3 ಆಡು ಮತ್ತು 1 ಹೋತು, ಕಿಲನಕೇರಾ ಗ್ರಾಮದ ₹60,000 ಮೌಲ್ಯದ 3 ಆಡು ಮತ್ತು ಕುರಿಗಳು, ನೀಲಹಳ್ಳಿ ಹಾಗೂ ಕಡೆಚೂರ-ಬೊಮ್ಮರಾಲದೊಡ್ಡಿ ರಸ್ತೆಯಲ್ಲಿ ₹96,000 ಮೌಲ್ಯದ 5 ಆಡು ಮತ್ತು 1 ಟಗರು, ಗುಡ್ಲಾಗುಂಟಾ ಗ್ರಾಮದ 40,000 ಮೌಲ್ಯದ 2 ಆಡು ಮತ್ತು 1 ಟಗರು, ಬದ್ದೆಪಲ್ಲಿ ಗ್ರಾಮದ ಟಗರುಗಳು, ಕಳೆದ ವರ್ಷ (ಮಾರ್ಚ್ 2025) ನಡೆದಿದ್ದ 25 ಕುರಿಗಳ ಕಳ್ಳತನ, ಒಟ್ಟಾರೆಯಾಗಿ 46 ದೊಡ್ಡ ಆಡು/ಕುರಿಗಳು ಹಾಗೂ 9 ಸಣ್ಣ ಮರಿಗಳನ್ನು ಕಳವು ಮಾಡಲಾಗಿದ್ದು, ಯಾದಗಿರಿ ಪೆÇಲೀಸ್ ಅಧೀಕ್ಷಕರಾದ ಪೃಥ್ವಿಕ ಶಂಕರ ಐ.ಪಿ.ಎಸ್. ಹಾಗೂ ಡಿ.ಎಸ್.ಪಿ. ಸುರೇಶ ಎಮ್. ಅವರ ಮಾರ್ಗದರ್ಶನದಲ್ಲಿ ಸೈದಾಪುರ ಪೆÇಲೀಸ್ ನಿರೀಕ್ಷಕರಾದ ಎಸ್.ವೈ. ಮರಡಿ, ಪಿ.ಎಸ್.ಐ, ಎ.ಎಸ್. ಶಹಾಬಾದಿ, ಸಿಬ್ಬಂದಿಗಳಾದ ರಾಜಕುಮಾರ, ಖಾದರ ಪಟೇಲ್ ಅವರನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯಿಂದ ಕುರಿಗಳನ್ನು ಮಾರಾಟ ಮಾಡಿದ್ದ ಒಟ್ಟು 4,80,000/- ರೂಪಾಯಿಗಳನ್ನು ಜಪ್ತಿ ಮಾಡಲಾಗಿದ್ದು, ವಾರಸುದಾರರಿಗೆ ಹಿಂದಿರುಗಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಸಮಯೋಚಿತವಾಗಿ ಕಾರ್ಯನಿರ್ವಹಿಸಿ ಆರೋಪಿಯನ್ನು ಪತ್ತೆ ಹಚ್ಚಿದ ಸೈದಾಪುರ ಪೆÇಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೆÇಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

























