ಸ್ಯಾಟ್‍ಲೈಟ್ ಬಸ್ ನಿಲ್ದಾಣ: ನಿವೇಶನಕ್ಕಾಗಿ ಸ್ಥಳ ಪರಿಶೀಲನೆ

ಕಲಬುರಗಿ,ಅ.24-ನಗರದಲ್ಲಿ ಸುಸಜ್ಜಿತ ಹಾಗೂ ಅತ್ಯಾಧುನಿಕ ರೀತಿಯ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ಈಚೆಗೆ ಬೆಂಗಳೂರಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅಧಿಕಾರಿಗಳ ಸಭೆಯ ನಂತರ ಇದೀಗ ಮಹತ್ವದ ಬೆಳವಣಿಗೆಯಲ್ಲಿ ಈ ನಿಲ್ದಾಣಗಳ ನಿರ್ಮಾಣಕ್ಕಾಗಿ ಸೂಕ್ತ ನಿವೇಶನಕ್ಕಾಗಿ ಶಾಸಕರದ ಅಲ್ಲಂಪ್ರಭು ಪಾಟೀಲ್, ಕೆಕೆಆರ್‍ಟಿಸಿ ಅಧ್ಯಕ್ಷರಾದ ಅರುಣಕುಮಾರ್ ಪಾಟೀಲ್ ಹಾಗೂ ಅಧಿಕಾರಿಗಳು ಕಲಬುರಗಿ ಮಹಾ ನಗರದ ನಾಲ್ಕೂ ದಿಕಕುಗಳಲ್ಲಿ ಲಭ್ಯವಿರುವ ನಿವೇಶನಕ್ಕಾಗಿ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದರು.
ನಗರÀ ಹೊರ ವಲಯದ ಆಳಂದ ಚೆಕ್ ಪೆÇೀಸ್ಟ್ ಕೋಟನೂರ, ಹುಮನಾಬಾದ ರಸ್ತೆ ಮತ್ತು ಸೇಡಮ್ ರಸ್ತೆಯ ವಿಶ್ವವಿದ್ಯಾಲಯ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಲಾಯಿತು. ಇಲ್ಲೆಲ್ಲಾ ಕ್ರಮವಾಗಿ 3 ಅಥವಾ 2 ಎಕರೆ ನಿವೇಶನ ಸೂಕ್ತವಾಗಿರುವಂತಹದ್ದನ್ನು ಪರಿಶೀಲನೆ ಮಾಡಲಾಯ್ತು. ಗುವಿವಿ ಕುಲಪತಿ ಶಶಿಕಾಂತ್ ಉಡಿಕೇರಿ, ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು, ಕೋಟ್ನೂರ್ ಕೃಷಿ ಕೇಂದ್ರದ ಅಧಿಕಾರಿಗಳು ಸೇರಿದಂತ ಅನೇಕರಿದ್ದರು.
ಈಗಾಗಲೇ ಎರಡು ಮೂರು ಸ್ಥಳಗಳಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಅಗತ್ಯವಿರುವ ಸ್ಥಳವನ್ನು ಗುರುತಿಸಲಾಗಿದ್ದು, ಸೂಕ್ತವೆನಿಸುವ ಜಾಗದಲ್ಲಿ ಉದ್ದೇಶಿತ ಬಸ್ ನಿಲ್ದಾಣ ನಿರ್ಮಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಶಾಸಕರು, ಅಧ್ಯಕ್ಷರು ಸೂಚಿಸಿದರು.
ಪ್ರಗತಿಯತ್ತ ದಾಪುಗಾಲು ಇಡುತ್ತಿರುವ ಕಲಬುರಗಿ ನಗರಕ್ಕೆ ಉದ್ದೇಶಿತ ಸ್ಯಾಟಲೈಟ್ ಬಸ್ ನಿಲ್ದಾಣವು ಅಭಿವೃದ್ಧಿಗೆ ವೇಗ ನೀಡಲಿದೆ ಎಂದು ಶಾಸಕರಾದ ಅಲ್ಲಂಪ್ರಭು ಪಾಟೀಲರು ಅಭಿಪ್ರಾಯಪಟ್ಟರು.
ಕಲಬುರಗಿ ಕೃಷಿ, ಪಶುಸಂಗೋಪನೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಸ್ಥಳ ಪರಿಶೀಲನೆಯ ಕಾರ್ಯದಲ್ಲಿ ಶಾಸಕರಾದ ಅಲ್ಲಂಪ್ರಭು ಪಾಟೀಲ್, ಕೆಕೆಆರ್ ಟಿಸಿ ನಿಗಮದ ಅಧ್ಯಕ್ಷರಾದ ಅರುಣಕುಮಾರ ಪಾಟೀಲ್, ಎಮ್.ಡಿ. ಬಿ. ಸುಶೀಲಾ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.