
ಬಾದಾಮಿ,ಮಾ.೩: ಸಾಹಿತ್ಯ ಸಮ್ಮೇಳನ ಜಾತ್ರೆಯಲ್ಲ. ನೆಲದ ಬಗ್ಗೆ ಚಿಂತನೆ ಮಾಡುವ ವೇದಿಕೆಯಾಗಿದೆ. ನೆಲಕ್ಕೆ ಬೇಕಾಗುವ ಚಿಂತನೆ ಮಾಡುವುದು ಸಾಹಿತ್ಯದ ಕೆಲಸವಾಗಿದೆ ಎಂದು ಹಿರಿಯ ಸಾಹಿತಿ ವೈ.ಎಂ.ಯಾಕೊಳ್ಳಿ ಹೇಳಿದರು.
ಅವರು ಸೋಮವಾರ ಪಟ್ಟಣದ ಎಸ್.ವಿ.ಪಿ.ಸಂಸ್ಥೆಯ ಬಸವಭವನದಲ್ಲಿ ಕನ್ನಡ ಸಾಹಿತ್ಯ ಪರಿ?Àತ್ತು ಜಿಲ್ಲಾ ಹಾಗೂ ತಾಲೂಕಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕಾ ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಾಗಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಾಹಿತಿಗಳು ನೆಲ ಜಲ ಅವಲೋಕಿಸಿ ಸಾಹಿತ್ಯವನ್ನು ಬರೆಯಬೇಕು. ರವಿ ಕಾಣದ್ದನ್ನು ರವಿ ಕಾಣುತ್ತಾನೆ ಎಂಬAತೆ ಸಾಹಿತಿಗಳು ಅನುಭವಿಕವಾಗಿ ಪುಸ್ತಕವನ್ನು ಬರೆಯಬೇಕು. ಸಾಹಿತಿ ಪುಸ್ತಕಕ್ಕೆ ಸೀಮಿತವಾಗಬಾರದು. ವ್ಯಾಸ, ವಾಲ್ಮೀಕಿಯವರಿಂದ ಇಲ್ಲಿಯವರೆಗಿನ ಸಾಹಿತಿಗಳ ಸಾಹಿತ್ಯವನ್ನು ಅವರ ಚಿಂತನೆ ಮತ್ತು ಅವಲೋಕನ ಕುರಿತಾಗಿ ಅನುಕರಣೆ ಮಾಡಿ ಯುವ ಸಾಹಿತಿಗಳು ಬರವಣಿಗೆ ಮೂಲಕ ಹೊರ ಹೊಮ್ಮಬೇಕು ಎಂದು ಯುವ ಸಾಹಿತಿಗಳಿಗೆ ಸಲಹೆ ನೀಡಿದರು.
ಶಾಸಕ ಭೀಮಸೇನ ಚಿಮ್ಮನಕಟ್ಟಿ ತಾಯು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಮಾತನಾಡಿ ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿಗೆ ಮಹತ್ವದ ಯೋಜನೆಯಾದ ರೂ.೩.೭೫ ಕೋಟಿ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿ ಪ್ರತಿಯೊಬ್ಬರಿಗೆ ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಬೃಹತ್ ಗ್ರಂಥಾಲಯವನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಪ್ರೊ.ಜಿ.ಬಿ.ಶೀಲವಂತರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷ ಜೆ.ದಾಜೀಬಾ ಜಗದಾಳೆ ಅವರು ೧೦ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಜಿ.ಬಿ.ಶೀಲವಂತರ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜವನ್ನು ಹಸ್ತಾಂತರಿಸಿದರು. ನಂತರ ಜೆ.ದಾಜೀಬಾ ಜಗದಾಳೆ, ನಿಂಗಪ್ಪ ಬನ್ನೂರ ಮಾತನಾಡಿದರು. ವೇದಿಕೆಯ ಮೇಲೆ ಬಾಗಲಕೋಟೆ-ವಿಜಯಪೂರ ಅವಳಿ ಜಿಲ್ಲೆಯ ಹಾಲು ಒಕ್ಕೂಟದ ಅಧ್ಯಕ್ಷ ಈರಣ್ಣ ಕರಿಗೌಡರ, ಹೊನ್ನಯ್ಯ ಹಿರೇಮಠ, ಶಿವುಕುಮಾರ ಹಿರೇಮಠ, ಮಹಾಂತೇಶ ಹಟ್ಟಿ, ಡಾ.ಕೆ.ವಿ.ಕ್ಯಾಲಕೊಂಡ, ಮಹಾಂತೇಶ ಈಳಗೇರ, ಆರ್.ಎಂ.ಸಾರವಾಡ, ಆರ್.ಎಂ.ದಾದಿ, ಎಫ್.ಆರ್.ಪಾಟೀಲ(ಮಣ್ಣೇರಿ), ಸಿ.ಎಸ್.ನಾಗನೂರ ಹಾಜರಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಸ್ಥಾವಿಕವಾಗಿ ಮಾತನಾಡಿದರು. ತಾಲೂಕಾ ಕಸಾಪ ಅಧ್ಯಕ್ಷ ಬಿ.ಎಫ್.ಹೊರಕೇರಿ ಸ್ವಾಗತಿಸಿದರು. ಬಸಮ್ಮಾ ನರಸಾಪೂರ, ಡಿ.ಬಿ.ಹಡಗಲಿ ಕಾರ್ಯಕ್ರಮವನ್ನು ನಿರೂಪಿಸಿದರು.
ತಾಯಿ ಭುವನೇಶ್ವರಿ ದೇವಿ ಮೆರವಣಿಗೆ; ಸಮ್ಮೇಳನದ ಅಂಗವಾಗಿ ಬೆಳಿಗ್ಗೆ ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ಭುವನೇಶ್ವರಿ ಮೆರವಣಿಗೆಯು ಕರಡಿ ಮಜಲು, ಡೊಳ್ಳು ಸಂಗೀತ ವಾದ್ಯಗಳ ಮೂಲಕ ಪಿಕಾರ್ಡ ಬ್ಯಾಂಕ್ ಆವರಣದಿಂದ ಆರಂಭವಾಗಿ ಶಿವಾಜಿ ಸರ್ಕಲ್, ಪುಲಿಕೇಶಿ ಸರ್ಕಲ್ ಮುಖ್ಯ ರಸ್ತೆಯ ಮೂಲಕ ಬಸವಮಂಟಪದ ವೇದಿಕೆಯವರೆಗೆ ನಡೆಯಿತು. ಮೆರವಣಿಗೆಯಲ್ಲಿ ಕನ್ನಡ ಅಭಿಮಾನಿಗಳು, ಸಾಹಿತ್ಯಾಸಕ್ತರು, ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗುಂಡಪ್ಪ ತೀರ್ಥಪ್ಪನ್ನವರ, ಅಶೋಕ ಕೋಟನಕರ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಶೇಖರಗೌಡ ಪಾಟೀಲ,ಹೊನ್ನಯ್ಯ ಹಿರೇಮಠ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡ ಮನಸುಗಳು ಉಪಸ್ಥಿತರಿದ್ದರು.
ಪುಸ್ತಕ ಮಳಿಗೆ; ಪುಸ್ತಕ ಮಳಿಗೆಗಳನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಉದ್ಘಾಟನೆ ಮಾಡಿದರು. ಈಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಸೇರಿದಂತೆ ಇತರರು ಹಾಜರಿದ್ದರು.
ಪುಸ್ತಕ ಬಿಡುಗಡೆ: ಶಾಸಕ ಭಿಮಸೇನ ಚಿಮ್ಮನಕಟ್ಟಿ, ನಿಂಗಪ್ಪ ಬನ್ನೂರ, ಈರಣ್ಣ ಕರಿಗೌಡರ ಇವರು ಇದೇ ಸಂದರ್ಭದಲ್ಲಿ ಶಾರದಾ ಮೇಟಿ ಇವರ ಮುಸ್ಸಂಜೆಯ ಹೊತ್ತಿನಲ್ಲಿ ಮತ್ತು ಇತರೆ ಲೇಖನಗಳು ಮತ್ತು ಅನಸೂಯಾ ಯಲಿಗಾರ ಇವರ ನನ್ನ ಕೂಸು ನನ್ನ ನನಸು ಮತ್ತು ಸುಭಾಸಚಂದ್ರ ಭಜಂತ್ರಿ ಇವರ ಕಪ್ಪೆ ಅರಭಟ್ಟ ಯಾರು? ಎಂಬ ಕೃತಿಗಳು ಬಿಡುಗಡೆಗೊಳಿಸಿದರು.



























