ಚಿತ್ತಾಪುರದಲ್ಲಿ ಆರ್‍ಎಸ್‍ಎಸ್ ಪಥ ಸಂಚಲನ28 ಕ್ಕೆ ಶಾಂತಿಸಭೆ ನಡೆಸಿ ಅಂತಿಮವರದಿ ಸಲ್ಲಿಸಲು ಹೈಕೋರ್ಟು ಸೂಚನೆ

ಕಲಬುರಗಿ,ಅ.25: ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ ( ಆರ್‍ಎಸ್‍ಎಸ್) ನವೆಂಬರ್ 2 ರಂದು ಚಿತ್ತಾಪುರದಲ್ಲಿ ನಡೆಸಲು ಉದ್ದೇಶಿಸಿರುವ ಪಥ ಸಂಚಲನ ಸಂಬಂಧ ಅ.28 ರಂದು ಎಲ್ಲ ಸಂಘಟನೆಗಳ ಜೊತೆಗೆ ಶಾಂತಿ ಸಭೆ ನಡೆಸಿ ಅಂತಿಮ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಕಲಬುರಗಿ ಹೈಕೋರ್ಟು ಪೀಠ ಮಹತ್ವದ ಸೂಚನೆ ನೀಡಿದೆ.ಮುಂದಿನ ವಿಚಾರಣೆಯನ್ನು ಅ,30 ಕ್ಕೆ ಮುಂದೂಡಿದೆ
ನಿಮ್ಮ ಆಡಳಿತ ಸಾಮಥ್ರ್ಯ ಸಾಬೀತಿಗೆ ಇದು ಸಕಾಲ.ಎಲ್ಲರಿಗೂ ಸಮಾಧಾನಕರವಾಗುವಂತೆ ಸಮಸ್ಯೆ ಬಗೆಹರಿಸುವಂತೆ ಸಮಸಯೆ ಬಗೆಹರಿಸಿ ಎಂದು ಕೋರ್ಟು ಸರಕಾರಕ್ಕೆ ಕಿವಿಮಾತು ಹೇಳಿದೆ .
ಆರ್‍ಎಸ್‍ಎಸ್ ನ.2ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ, ಮತ್ತೊಂದೆಡೆ ಹಲವು ಸಂಘಟನೆಗಳು ಅಂದೇ ನಮಗೂ ಅವಕಾಶ ಕೊಡಿ ಎಂದು ಅರ್ಜಿ ಹಾಕಿದ್ದವು. ಈ ಮಧ್ಯೆ ಎಲ್ಲಾ ಅರ್ಜಿಗಳ ವಿಚಾರಣೆ ಶುಕ್ರವಾರ ಕಲಬುರಗಿಯ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರ ಏಕ ಸದಸ್ಯ ಪೀಠದಲ್ಲಿ ನಡೆಯಿತು.
ಜಿಲ್ಲಾಡಳಿತದ ಪರವಾಗಿ ಎಜಿ ಶಶಿಕಿರಣ್ ವಾದ ಮಂಡಿಸಿ ಸದ್ಯ ಪಥಸಂಚಲನಕ್ಕೆ ಅನುಮತಿ ಬೇಡ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗುತ್ತದೆ. ಹೀಗಾಗಿ ಇನ್ಮಷ್ಟು ಕಾಲಾವಕಾಶ ಕೊಡಬೇಕು ಅಂತ ವಾದ ಮಂಡಿಸಿದ್ದರು. ಈ ವೇಳೆ ಆರ್ ಎಸ್‍ಎಸ್ ಪರ ಹಿರಿಯ ವಕೀಲ್ ಅರುಣ್ ಶ್ಯಾಮ್ ವಾದ ಮಂಡಿಸಿ, ಈಗಾಗಲೇ ನ್ಯಾಯಾಲಯ ಸೂಚಿಸಿದಂತೆ ನವೆಂಬರ್ 2ರಂದು ಅನುಮತಿಗೆ ನಾವು ಕಾಯುತ್ತಿದ್ದೇವೆ. ಆದರೆ ದಿನ ಕಳೆದಂತೆ ಉದ್ದೇಶ ಪೂರ್ವಕವಾಗಿ ಅರ್ಜಿಗಳು ಸಲ್ಲಿಕೆಯಾಗಿ ಕಾಲಹರಣ ಮಾಡಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಸಮಸ್ಯೆಯಿದ್ದರೆ ಕೇಂದ್ರದಿಂದ ಹೆಚ್ಚಿನ ಭದ್ರತೆ ತರಿಸಿಕೊಳ್ಳಲಿ ಅಂತ ವಾದ ಮಂಡಿಸಿದರು.
ವಾದ ಪ್ರತಿವಾದ ಆಲಿಸಿದ ಕೋರ್ಟ್ ಅಕ್ಟೋಬರ್ 28ಕ್ಕೆ ಎಲ್ಲಾ ಸಂಘಟನೆಗಳ ಜೊತೆ ಶಾಂತಿ ಸಭೆ ನಡೆಸಿ ಅಂತಿಮ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿತು. ಅಲ್ಲದೆ, ಅಕ್ಟೋಬರ್ 30ರಂದು ಮಧ್ಯಾಹ್ನ 2.30ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿದ್ದಾರೆ.