
ಬೀದರ್: ಜಿಲ್ಲೆಯ ಭಾಲ್ಕಿ ಪಟ್ಟಣದ ನಿವೃತ್ತ ಶಿಕ್ಷಕರೊಬ್ಬರಿಗೆ ಪ್ಲಾಟ್ ಕೊಡಿಸುವುದಾಗಿ ನಂಬಿಸಿ 15 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಇತ್ತಿಚೀಗೆ ಬೆಳಕಿಗೆ ಬಂದಿದೆ.
ಹಣ ವಾಪಸ್ ಕೇಳಿದಾಗ ಆರೋಪಿಗಳು ಸತಾಯಿಸುತ್ತಿದ್ದು, ಈ ಸಂಬಂಧ ಬೀದರ್ ಟೌನ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರಿ ನೌಕರನೇ ಮುಖ್ಯ ಆರೋಪಿ: ಅಣ್ಣ-ತಮ್ಮನ ಕೈವಾಡ ದೂರುದಾರರಾದ ಭಾಲ್ಕಿ ನಿವಾಸಿ ಅಜೀಮೋದ್ದೀನ್ ಶೇಖ್ ಚಾಂದ್ (60) ಎಂಬುವವರು ತಮ್ಮ ಅಳಿಯನ ಸಂಬಂಧಿಕರಾದ ಆಮೇರ್ ಅಯಾಜ್ ಮತ್ತು ಆತನ ಸಹೋದರ ಮುಜಮ್ಮಿಲ್ ಅಯಾಜ್ ಇವರು ಸಿಂಗಾರ್ ಬಾಗ್ ನಿವಾಸಿಗಳಾಗಿದ್ದಾರೆ. ಇವರ ವಿರುದ್ಧ ದೂರು ನೀಡಿದ್ದಾರೆ. ವಿಶೇಷವೆಂದರೆ ಮುಖ್ಯ ಆರೋಪಿ ಆಮೇರ್ ಅಯಾಜ್ ಸರ್ಕಾರಿ ನೌಕರನಾಗಿದ್ದಾನೆ.
ಘಟನೆಯ ವಿವರ: ಲಾಭದ ಆಮಿಷವೊಡ್ಡಿ ಜಾಲಕ್ಕೆ ಬೀಳಿಸಿದ ಕಿರಾತಕರು ದೂರಿನ ಸಾರಾಂಶದಂತೆ, ಜನವರಿ 25, 2023 ರಂದು ಆರೋಪಿಗಳು ಅಜೀಮೋದ್ದೀನ್ ಅವರ ಭಾಲ್ಕಿ ಮನೆಗೆ ತೆರಳಿದ್ದರು. ಹುಮ್ನಾಬಾದ್ ತಾಲೂಕಿನ ಮನ್ನಾಖೆಳ್ಳಿಯ ಸರ್ಕಾರಿ ಶಾಲೆ ಬಳಿ 10 ಪ್ಲಾಟ್‍ಗಳಿವೆ ಎಂದು ನಂಬಿಸಿದ್ದರು. ಪ್ರತಿ ಪ್ಲಾಟ್‍ಗೆ 5 ಲಕ್ಷದಂತೆ 3 ಪ್ಲಾಟ್‍ಗಳಿಗೆ ಒಟ್ಟು 15 ಲಕ್ಷ ರೂಪಾಯಿಗಳನ್ನು ಸಂತ್ರಸ್ತ ಶಿಕ್ಷಕರು ಅಂದೇ ನಗದು ರೂಪದಲ್ಲಿ ನೀಡಿದ್ದರು.
ಸುಳ್ಳು ಭರವಸೆ: 10 ದಿನಗಳಲ್ಲಿ ನೋಂದಣಿ ಮಾಡಿಕೊಡುವುದಾಗಿ ಆರೋಪಿಗಳು ಭರವಸೆ ನೀಡಿದ್ದರು. ಸಮಯ ಕಳೆದಂತೆ, “ಬೇರೊಬ್ಬ ಗ್ರಾಹಕ ಪ್ಲಾಟ್‍ಗೆ ಹೆಚ್ಚಿನ ಹಣ ನೀಡುತ್ತಿದ್ದಾನೆ, ಅದನ್ನು ಮಾರಿ ನಿಮಗೆ ಲಾಭದ ಸಮೇತ 18 ಲಕ್ಷ ಕೊಡುತ್ತೇವೆ” ಎಂದು ನಂಬಿಸಿದ್ದರು. ಶಿಕ್ಷಕರು ಹಣ ಕೇಳಿದಾಗ ಮೇ 24, 2023 ರವರೆಗೆ ಕಾಲಾವಕಾಶ ಪಡೆದ ಆರೋಪಿಗಳು, ಆನಂತರ ಹಣ ನೀಡದೆ ವಂಚಿಸಿದ್ದಾರೆ. ಸಂತ್ರಸ್ತರ ದೂರಿನ ಮೇರೆಗೆ ಬೀದರ್ ಟೌನ್ ಪೆÇಲೀಸರು ಭಾರತೀಯ ದಂಡ ಸಂಹಿತೆ 1860 ರ ಅಡಿಯಲ್ಲಿ ಈ ಕೆಳಗಿನ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ: ಸೆಕ್ಷನ್ 406: ನಂಬಿಕೆ ದ್ರೋಹ, ಸೆಕ್ಷನ್ 420: ವಂಚನೆ, ಸೆಕ್ಷನ್ 500: ಮಾನಹಾನಿ, ಈ ಪ್ರಕರಣವನ್ನು ಜೀರೋ ಎಫ್‍ಐಆರ್ (ಸಂಖ್ಯೆ 1/2025) ಅಡಿಯಲ್ಲಿ ದಾಖಲಿಸಲಾಗಿದ್ದು, ಮುಂದಿನ ತನಿಖೆಗಾಗಿ ಭಾಲ್ಕಿ ನಗರ ಪೆÇಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಜಾಗೃತಿ ಸಂದೇಶ: ಭೂಮಿ ಅಥವಾ ಪ್ಲಾಟ್ ಖರೀದಿಸುವ ಮೊದಲು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ. ಅಪರಿಚಿತರಿಗೆ ಅಥವಾ ಸಂಬಂಧಿಕರಿಗೂ ಸಹ ದೊಡ್ಡ ಮೊತ್ತದ ನಗದು ನೀಡುವಾಗ ಎಚ್ಚರಿಕೆ ವಹಿಸಿ ಎಂದು ಪೆÇಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

























