
ಮುಳಬಾಗಿಲು,ಜ,೧೩-ನಿವೃತ್ತ ನೌಕರರು ತಮ್ಮ ಮುಂದಿನ ಜೀವನ ಸಂತೋಷಕರವಾಗಿ ಸಾಗಿಸಲು ನಮ್ಮ ಸಂಘಟನೆಯಿಂದ ನೆರವು ಹಾಗೂ ಕಷಗಳಿಗೆ ಸ್ಪಂದನೆ ನೀಡಲಾಗುತ್ತದೆ ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಜನಾರ್ದನ್ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ನಿವೃತ್ತಿ ನೌಕರರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಸರ್ಕಾರಿ ನೌಕರರು ತಮ್ಮ ಕೆಲಸದ ವೇಳೆ ಹಲವಾರು ರೀತಿಯ ಒತ್ತಡಗಳಿಗೆ ಒಳಗಾಗಿರುತ್ತಾರೆ. ಆದ್ದರಿಂದ ನಿವೃತ್ತಿ ನಂತರದ ದಿನಗಳನ್ನು ಸಂತೋಷವಾಗಿ ಕಳೆಯಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿವೃತ್ತ ನೌಕರರು ಮರಣ ಹೊಂದಿದರೆ ಅವರ ಕುಟುಂಬಕ್ಕೆ ಸಂಘದಿಂದ ೫೦೦೦ ಹಣವನ್ನು ನೀಡಲಾಗುತ್ತಿದೆ. ಅದೇ ರೀತಿ ನಿವೃತ್ತ ನೌಕರರ ಸಂಘವು ಪ್ರಾಮಾಣಿಕತೆ, ಬದ್ಧತೆ ಮತ್ತು ಪರದರ್ಶಿಕತೆಯಿಂದ ಕೆಲಸ ಕಾರ್ಯಗಳನ್ನು ಮಾಡಲು ಮುಂದಾಗಿದೆ. ಇದಕ್ಕೆ ಎಲ್ಲಾ ನೌಕರರು ಸಹಕಾರವನ್ನು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿವೃತ್ತಿ ನೌಕರರಿಗೆ ಹಲವಾರು ರೀತಿಯ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ತಿಳಿಸಿದರು.
ವಯಸ್ಸಾದ ದಿನಗಳಲ್ಲಿ ಸಾಕಷ ಮಂದಿಗೆ ನಾನಾ ಬಗೆಯ ಕಾಯಿಲೆಗಳು ಬರುವುದು ಸರ್ವೇಸಾಮಾನ್ಯ. ಆದ್ದರಿಂದ ವ್ಯಾಯಾಮ, ಯೋಗ ಸೇರಿದಂತೆ ಹಲವಾರು ರೀತಿಯ ಗುಣಮುಖ ಔಷಧಗಳ ಸಂಘದ ಮುಖಾಂತರ ನಿವೃತ್ತ ನೌಕರರಿಗೆ ತರಬೇತಿಗಳನ್ನು ನೀಡಲಾಗುತ್ತದೆ. ಆದ್ದರಿಂದ ತಮ್ಮ ಆರೋಗ್ಯದ ಕಡೆಗೆ ಪ್ರತಿಯೊಬ್ಬರು ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಎಂದು ಮನವಿ ಮಾಡಿದರು.
ಸಮಾಜ ಸೇವಕ ನಗವಾರ ಸತ್ಯಣ್ಣ ಮಾತನಾಡಿ, ನಿವೃತ್ತಿ ಪಡೆದಿರುವ ನೌಕರರು ಸಮಾಜದಲ್ಲಿ ತುಂಬಾ ಮಹತ್ವ ಸ್ಥಾನ ಪಡೆದುಕೊಳ್ಳುತ್ತಾರೆ. ಏಕೆಂದರೆ ತಮ್ಮ ಆಡಳಿತ ಅವಧಿಗಿಂತ ನಂತರದ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಾಗಿ ಸಮಾಜದಲ್ಲಿ ಜನರಿಗೆ ಸೂಕ್ತ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವ ಸ್ವಾತಂತ್ರ್ಯ ಇರುತ್ತದೆ. ಆದ್ದರಿಂದ ನಿವೃತ್ತಿ ನೌಕರರಿಗೆ ಎಲ್ಲರೂ ಸಹ ಗೌರವವನ್ನು ನೀಡಬೇಕು. ಸಂಘಕ್ಕೆ ಪ್ರತಿ ವಷ ಕ್ಯಾಲೆಂಡರ್ ಸಹ ನೀಡಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಎಂ.ನಂಜುಂಡಪ್ಪ, ಉಪಾಧ್ಯಕ್ಷರಾದ ಎನ್.ವೆಂಕಟರಮಣಪ್ಪ, ವೆಂಕಟೇಶಪ್ಪ, ಕಾರ್ಯದರ್ಶಿ ಮುನಿರತ್ನಯ್ಯ, ಖಜಾಂಚಿ ಎಸ್.ಜಯರಾಮ್ ಜಂಟಿ ಕಾರ್ಯದರ್ಶಿಗಳಾದ ಎಲ್.ಶಿವಣ್ಣ, ವೆಂಕಟರಾಮರೆಡ್ಡಿ, ಸಂಘಟನಾ ಕಾರ್ಯದರ್ಶಿಗಳಾದ ಯಾನದಹಳ್ಳಿ ನಾರಾಯಣಸ್ವಾಮಿ, ಎಂ.ಸುಬ್ಬರಾಯಪ್ಪ, ಮಹಿಳಾ ಉಪಾಧ್ಯಕ್ಷೆ ಆರ್.ಶಾರದಮ್ಮ, ಲೆಕ್ಕ ಪರಿಶೋಧಕ ಪೊಲೀಸ್ ನಾಗರಾಜು, ಸಾಂಸ್ಕೃತಿಕ ಕಾರ್ಯದರ್ಶಿ ಜಮ್ಮನಹಳ್ಳಿ ವೆಂಕಟೇಶ್, ಕ್ರೀಡಾ ಕಾರ್ಯದರ್ಶಿ ಚಾನ್ ಪಾಷ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿದ್ದಲಿಂಗಯ್ಯ, ಬಿ.ನಾರಾಯಣಪ್ಪ, ಸದಸ್ಯರಾದ ಎಂಎ ತಿಪ್ಪಯ್ಯ ಶೆಟ್ಟಿ, ಕೆಎಚ್.ಶ್ರೀನಿವಾಸ್ ಗೌಡ, ಎಸ್.ಟಿ.ರಾಮಪ್ಪ, ಬಿ.ಆರ್.ರಾಮು, ನರಸಿಂಹ ರೆಡ್ಡಿ, ನಾಗಭೂಷಣಂ ಇದ್ದರು.





























