
ಕಲಬುರಗಿ,ಮಾ.28: ರಾಜ್ಯದ ವಿದ್ಯಾರ್ಥಿಗಳ ತೃತೀಯ ಭಾಷಾ ಕಲಿಕೆಯ ಹಕ್ಕನ್ನು ಶಾಲಾಶಿಕ್ಷಣ ಇಲಾಖೆ ಕಸಿದುಕೊಂಡಿದ್ದನ್ನು ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಅವರು ಉಗ್ರವಾಗಿ ಖಂಡಿಸಿದರು.
ಪತ್ರಿಕಾಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಎಸ್‍ಎಸ್‍ಎಲ್ ಸಿ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ನಿಗದಿಪಡಿಸಿದ್ದ 625 ಅಂಕಗಳಲ್ಲಿ ತೃತೀಯ ಭಾಷೆಗಳಾದ ಹಿಂದಿ,ಮರಾಠಿ,ತೆಲುಗು,ಉರ್ದು,ಸಂಸ್ಕøತ ಹಾಗೂ ಮುಖ್ಯವಾಗಿ ಕನ್ನಡ ಭಾಷೆಗಳ ವಿಷಯವನ್ನು ರದ್ದುಗೊಳಿಸಿ ಕೇವಲ 525 ಅಂಕಗಳಿಗೆ ಸೀಮಿತಗೊಳಿಸುತ್ತಿರುವದು ಅತ್ಯಂತ ವಿಷಾದನೀಯ ಎಂದರು.
ಮೂರನೇಯ ಭಾಷೆ ಅಂದರೆ ಕೇವಲ ಹಿಂದಿ ಅಲ್ಲ.ಅದು ಕನ್ನಡ, ಮರಾಠಿ, ಸಂಸ್ಕøತ, ಉರ್ದು,ತೆಲುಗು,ತಮಿಳು ಸೇರಿದಂತೆ ಅನೇಕ ಭಾಷೆಗಳ ಸಮೂಹ.
ಯಾರ ಒತ್ತಡಕ್ಕೆ ಮಣಿದು ಸರಕಾರ ಏಕಾಏಕಿ ಈ ನಿರ್ಧಾರ ಕೈಗೊಂಡಿತು ತಿಳಿಯದು.ತಮಿಳುನಾಡಿನ ಮಾದರಿಯಂತೆ ಸರಕಾರ ನಿರ್ಧಾರ ಕೈಗೊಂಡಿರಬಹುದು.ಈ ರೀತಿಯ ನಿರ್ಧಾರ ಶಿಕ್ಷಣಕ್ಕೆ ದೊಡ್ಡ ಹೊಡೆತ ನೀಡುತ್ತದೆ.ಇಂತಹ ನೀತಿ ತಕ್ಷಣ ಸರಿಪಡಿಸಬೇಕು ಅಥವಾ ಹಿಂದೆ ಪಡೆಯಬೇಕು ಎಂದು ಆಗ್ರಹಿಸಿದರು



























