
ಕಲಬುರಗಿ,ಆ.30-ಮುಂಬರುವ ಜನಗಣತಿ ಜಾತಿ ಕಾಲಂ 8 ರಲ್ಲಿದ್ದಂತೆ ” ಆದಿಬಣಜಿಗ ” ಮಾತ್ರ ಬರೆಯಿಸಬೇಕೆಂದು ಗುಲಬರ್ಗಾ ಜಿಲ್ಲಾ ಆದಿ ಬಣಜಿಗ ಸಮಾಜ ಮನವಿ ಮಾಡಿದೆ.
ಈ ಸಂಬಂಧ ಗುಲಬರ್ಗಾ ಜಿಲ್ಲಾ ಆದಿಬಣಜಿಗ ಸಮಾಜದವರೆಲ್ಲ ಸಭೆ ಸೇರಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ ನಾಯ್ಕ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಅದರಂತೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದ ಸಮಾಜ ಬಾಂಧವರು ಲಿಂಗಾಯತ ಬಣಜಿಗ, ಲಿಂಗಾಯತ ಆದಿಬಣಜಿಗ ಎಂದು ಬರೆಯಿಸದೆ ಕೇವಲ ” ಆದಿಬಣಜಿಗ ” ಎಂದು ಬರೆಯಿಸಬೇಕು ಎಂದು ಸಮಾಜದ ಗೌರವಾಧ್ಯಕ್ಷರಾದ ಡಾ.ಬಸವರಾಜ ಕೊನೇಕ್ ಹಾಗೂ ಅಧ್ಯಕ್ಷರಾದ ಶಿವಪುತ್ರಪ್ಪ ಬರೂಡೆ ಮನವಿ ಮಾಡಿದ್ದಾರೆ.
ಇದರಿಂದ ಕರ್ನಾಟಕದಲ್ಲಿ ಆದಿಬಣಜಿಗ ಜನ ಸಂಖ್ಯೆ ಎಷ್ಟಿದೆ ಎಂಬುವುದರ ನಿರ್ದಿಷ್ಟ ಹಾಗೂ ಖಚಿತ ಮಾಹಿತಿ ದೊರೆಯುತ್ತದೆ. ಆದ್ದರಿಂದ ಸಮಾಜ ಬಾಂಧವರು ಜಾತಿ ಕಾಲಂ 8ರಲ್ಲಿ ಇದ್ದಂತೆ ” ಆದಿಬಣಜಿಗ” ಎಂದು ಬರೆಯಿಸಬೇಕು ಎಂದು ಅವರು ತಿಳಿಸಿದ್ದಾರೆ.