
ನವಲಗುAದ,ಮಾ.೩: `ಸರ್ವರಿಗೂ ಹಿತವಾದ ಧರ್ಮವನ್ನು ಬೋಧನೆ ಮಾಡುವ ಸದುದ್ದೇಶದಿಂದಲೇ ರೇಣುಕಾಚಾರ್ಯರು ಭೂಮಿ ಮೇಲೆ ಜನ್ಮ ತಾಳಿದರು. ಪೃಥ್ವಿ ತತ್ವ ಬೋಧಿಸಿದ ಅವರನ್ನು ಎಲ್ಲ ಧರ್ಮಿಯರು ಪೂಜಿಸಬೇಕು’ ಎಂದು ಪಂಚಗೃಹ ಹಿರೇಮಠದ ನೂತನ ಉತ್ತರಾಧಿಕಾರಿ ವೀರಬಸವ ದೇವರು ನುಡಿದರು.
ಅವರು ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ ರೇಣುಕಾಚಾರ್ಯರ ಜಯಂತಿ ಸಾನಿಧ್ಯವಹಿಸಿ ಮಾತನಾಡಿದ ಅವರು ಯಾರ ಮನಸನ್ನೂ ನರಳಿಸದೆ, ಕೆರಳಿಸದೆ, ಅರಳಿಸಿದ ಧರ್ಮವೆಂದರೆ ಅದು ವೀರಶೈವ ಧರ್ಮ. ಮನುಜ ಮತವನ್ನು ವಿಶ್ವಪಥವನ್ನಾಗಿಸಿದ ಶ್ರೇಷ್ಠ ಧರ್ಮವಿದು’ ಎಂದು ಬಣ್ಣಿಸಿದರು.
ಇದಕ್ಕೂ ಮೊದಲು ತಹಶೀಲ್ದಾರ ಸುಧೀರ ಸಾಹುಕಾರ ಮಾತನಾಡಿ ಜಗದ್ಗುರು ರೇಣುಕಾಚಾರ್ಯ ಅವರು ತಮ್ಮ ತತ್ವ, ಸಿದ್ಧಾಂತ ಮತ್ತು ಬೋಧನೆಯ ಮೂಲಕ ಸಾಮಾಜಿಕ ಸುಧಾರಣೆ ಆದ್ಯತೆ ನೀಡಿದ್ದರು ಅವರು ಹೇಳಿದ ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆ ಸಂದೇಶಗಳು ಇಂದು ಪ್ರಸ್ತುತವಾಗಿವೆ ಎಂದರು.
ಸಮಾಜದ ಮುಖಂಡರಾದ ಕಲ್ಲಯ್ಯ ಹೊಸಮನಿ, ಸಿದ್ದಲಿಂಗಯ್ಯ ಹಿರೇಮಠ, ಮುರಗಯ್ಯ ಬಾಳಿಹಳ್ಳಿಮಠ, ಅಶೋಕ ಮಜ್ಜಿಗುಡ್ಡ, ಚರಂತಯ್ಯ ಹಿರೇಮಠ,ಶ್ರೀಶೈಲ ಮುಲಿಮನಿ, ವೀರಣ್ಣ ಪೂಜಾರ, ಶಂಕ್ರಯ್ಯ ಸುಭೆದಾರಮಠ, ಬಸವರಾಜ ಕೇರಿಮಠ, ಕೊಟ್ರೇಶ ಹಿರೇಮಠ, ಶಶಿಧರ ಭರತ್ ಭೋಜನಮಠ, ಶರ್ಮಾ ಹಿರೇಮಠ, ಮುತ್ತು ಹಿರೇಮಠ, ಸಂಗಯ್ಯ ಹಿರೇಮಠ, ಎಂ. ಡಿ. ಕುಲಕರ್ಣಿ, ರವಿ ಕಿರೆಸೂರ, ಮಂಜು ಮಲ್ಲಾಡಿ ಇದ್ದರು.


























